ಕುಡಿದು ಪೊಲೀಸರಿಗೆ ಆವಾಜ್ ಹಾಕಿದವನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಸೆ.2- ಕುಡಿದು ಕಾರು ಅಪಘಾತ ಮಾಡಿ ಪೊಲೀಸರ ಎದುರೇ ಹೈಡ್ರಾಮವಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಹಳ್ಳಕ್ಕೆ ಉರುಳಿಬಿದ್ದಿರುವ ಘಟನೆ ಅರಕಲಗೂಡು ತಾಲ್ಲೂಕಿನ ಮುತ್ತಿಗೆ ಗೇಟ್ ಬಳಿ ನಡೆದಿದೆ.

ಬಾಬು ಎಂಬಾತ ಮದ್ಯಪಾನ ಮಾಡಿ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡುತ್ತಾ ಅಪಘಾತ ಮಾಡಿದ್ದಾನೆ. ನಂತರ ಸ್ಥಳಕ್ಕೆ ಬಂದ ಪೊಲೀಸರ ವಿರುದ್ಧ ಅನಾವಶ್ಯಕವಾಗಿ ಹರಿಹಾಯ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ.

ನಾನು ಸಂಘಟನೆಯೊಂದರ ಕಾರ್ಯಕರ್ತ ಎಂದು ವಿನಾಕಾರಣ ಹೈಡ್ರಾಮವಾಡಿ ಬಟ್ಟೆ ಹರಿದುಕೊಂಡು ಗಲಾಟೆ ಮಾಡಿದ್ದಲ್ಲದೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments