ಏಷ್ಯಾನ್ ಬಾಕ್ಸಿಂಗ್ : ಫೈನಲ್ ನಲ್ಲಿ ಪೂಜಾರಾಣಿಗೆ ಚಿನ್ನ, ಮೇರಿಕೋಮ್, ಅನುಪಮಾಗೆ ಬೆಳ್ಳಿ

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ, ಮೇ 31- ಇಲ್ಲಿ ನಡೆದ ಏಷ್ಯಾನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯದಲ್ಲಿ ಭಾರತದ ಪೂಜಾರಾಣಿ(75 ಕೆಜಿ ವಿಭಾಗ), 6 ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ (51 ಕೆಜಿ), ಅನುಪಮಾ(81+) ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಭಾರತದ ಗರಿಮೆ ಹೆಚ್ಚಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್ ಗೆ ಅರ್ಹತೆ ಗಿಟ್ಟಿಸಿರುವ ಭಾರತದ ಪೂಜಾರಾಣಿ ಫೈನಲ್ ಪಂದ್ಯದಲ್ಲಿ ಉಜ್ಬೇಕಿಸ್ತಾನದ ಮಾವ್ಲುಡಾಮೊ ವ್ಲೋನೋವಾ ವಿರುದ್ಧ 5-0 ಯಿಂದ ಗೆಲುವು ಸಾಧಿಸಿ ಚಿನ್ನದ ಪದಕದೊಂದಿಗೆ 72,41,050 ರೂಪಾಯಿ ನಗದು ಪುರಸ್ಕಾರ ಪಡೆದರು. ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ 6 ವಿಶ್ವ ಚಾಂಪಿಯನ್ ಆಗಿರುವ ಮೇರಿಕೋಮ್ ಅವರು 51 ಕೆಜಿ ವಿಭಾಗದಲ್ಲಿ ಕಜಕೀಸ್ತಾನದ ನಾಜಿಮ್ ಕಿಜೈಬೇ ವಿರುದ್ಧ 2-3 ರಿಂದ ಸೋಲು ಅನುಭವಿಸಿ ಬೆಳ್ಳಿಗೆ ತೃಪ್ತಿ ಪಟ್ಟರು.

ಭಾರತದ ಯುವ ಬಾಕ್ಸರ್ ಲಾಲ್‌ಬುತ್ಸೈಹಿ (64 ಕೆಜಿ), ಕಝಕೀಸ್ತಾನ್‌ನ ಮಿಲಾನಾ ಸಫ್ರೊನೊವಾ ವಿರುದ್ಧ ಸೋಲು ಕಾಣುವ ಮೂಲಕ ಚೊಚ್ಚಲ ಏಷ್ಯಾನ್ ಬಾಕ್ಸಿಂಗ್ ಚಾಂಪಿಯನ್ ಆಗುವ ಕನಸು ಕೈ ಚೆಲ್ಲಿದರು. ಭಾರತದ ಮತ್ತೊಬ್ಬ ಮಹಿಳಾ ಬಾಕ್ಸರ್ ಅನುಪಮಾ (81+ ಕೆಜಿ) ಕಝಕೀಸ್ತಾನ್‌ನ ಲಜತ್ ಕುಂಗೀಬಾಯೇವಾ ಎದುರು ಪರಾಭವಗೊಂಡು ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ.

Facebook Comments