4ನೇ ವಯಸ್ಸಿನಲ್ಲೇ ಏಕಶಿಲಾ ಬೆಟ್ಟವೇರಿ ಏಷಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಪೋರ..!

ಈ ಸುದ್ದಿಯನ್ನು ಶೇರ್ ಮಾಡಿ

ಮಧುಗಿರಿ, ಜು.9- ನಾಲ್ಕನೆ ವಯಸ್ಸಿನಲ್ಲಿಯೇ ಪೋರನೊಬ್ಬ ವಿಶ್ವಪ್ರಸಿದ್ದ ಏಕಶಿಲಾ ಬೆಟ್ಟ ಏರಿ ಏಷಿಯಾ ಬುಕ್ ಆಫ್ ರೆಕಾರ್ಡ್‍ನಲ್ಲಿ ತನ್ನ ಹೆಸರನ್ನು ಗ್ರಾಂಡ್ ಮಾಸ್ಟರ್ ಫಾರ್ ಟ್ರಕ್ಕಿಂಗ್ ದಿ ಮಧುಗಿರಿ ಪೋರ್ಟ್ ಹಿಲ್ ಎಂದು ದಾಖಲೆ ಮಾಡಿದ್ದಾನೆ.

ಪಟ್ಟಣದ ಡೊಂ ಲೈಟ್ ವೃತ್ತದ ಬಳಿಯಿರುವ ವಾಸವಿ ಮೆಡಿಕಲ್ಸ್ ಮಾಲೀಕ ಕಮಲೇಶ್ ರವರ ಪುತ್ರ ಪೂರ್ವಿಕ್ ಕೆ. ಸುಂಕು ತನ್ನ ನಾಲ್ಕನೆ ವಯಸ್ಸಿನಲ್ಲಿ ಮಧುಗಿರಿ ಬೆಟ್ಟವನ್ನು ಪೂರ್ತಿ ಹತ್ತಿ ಏಷಿಯಾ ಬುಕ್ ಆಫ್ ರೆಕಾಡ್ಸ್‍ನಲ್ಲಿ ತನ್ನ ಹೆಸರನ್ನು ಗ್ರಾಂಡ್ ಮಾಸ್ಟರ್ ಫಾರ್ ಟ್ರೆಕ್ಕಿಂಗ್ ದಾ ಮಧುಗಿರಿ ಪೋರ್ಟ್ ಹಿಲ್ ಎಂದು ದಾಖಲೆ ಮಾಡಿದ್ದಾನೆ.

ಭಗವದ್ಗೀತೆ ಮತ್ತು ಹನುಮಾನ್ ಚಾಲಿಸಾದ ಕೆಲವು ಶ್ಲೋಕ ಮತ್ತು ಕೆಲವು ಹೆಸರಾಂತ ವ್ಯಕ್ತಿಗಳ ಹೆಸರು ಹೇಳಿ ತನ್ನ ಎರಡೂ ಕೈಗಳಿಂದ 1 ರಿಂದ 20ರ ವರೆಗೆ ಹಾಗೂ ಎ ಯಿಂದ ಝಡ್ ವರೆಗೆ ಬರೆದು ಸಾಧನೆ ಮಾಡಿದ್ದಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್‍ನ ಪ್ರಮಾಣ ಪತ್ರ ನೀಡಿ ಗೌರವಿಸಿದೆ.

ಈ ಪುಟ್ಟ ಪೋರ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಗೈದು ಪೋಷಕರಿಗೂ ಹಾಗೂ ಉನ್ನೂರಿಗೂ ಒಳ್ಳೆಯ ಹೆಸರು ತರಲಿ ಎಂದು ಜನತೆ ಆಶಿಸಿದ್ದಾರೆ.

Facebook Comments