ನೂತನ ಸಚಿವರಿಗೆ ಖಾತೆ ಹಂಚಿಕೆ, ಕೆಲ ಸಚಿವರ ಖಾತೆಗಳು ಅದಲು-ಬದಲು…?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.17-ನೂತನ ಸಚಿವರಿಗೆ ಇಂದು ಸಂಜೆ ಖಾತೆಗಳ ಹಂಚಿಕೆಯಾಗುವ ಸಂಭವವಿದೆ.  ಕೇಂದ್ರ ಗೃಹ ಸಚಿವ ಅಮಿತ್ ಷಾ ಜೊತೆ ಚರ್ಚಿಸಿಯೇ ಸಚಿವರಿಗೆ ಖಾತೆ ಹಂಚಿಕೆ ಮಾಡಲು ಮುಖ್ಯಮಂತ್ರಿ ತೀರ್ಮಾನಿಸಿದ್ದರು. ಹೀಗಾಗಿ ನೂತನ ಸಚಿವರಿಗೆ ಖಾತೆ ಹಂಚಿಕೆ ಹಾಗೂ ಕೆಲವು ಸಚಿವರ ಖಾತೆ ಬದಲಾವಣೆ ಸೇರಿದಂತೆ ಮುಖ್ಯಮಂತ್ರಿಯಡಿಯೂರಪ್ಪ ಸಂಪುಟದಲ್ಲೇ ಸಣ್ಣ ಪ್ರಮಾಣದ ಮೇಜರ್ ಸರ್ಜರಿ ಮಾಡುವ ಸಾಧ್ಯತೆ ಇದೆ.

ಇಂದು ಸಂಜೆ ಅಮಿತ್ ಷಾ ನವದೆಹಲಿಗೆ ಹಿಂದಿರುಗುತ್ತಿದ್ದು, ನಂತರ ಯಾರಿಗೆ ಯಾವ ಖಾತೆ ಎಂಬುದು ತೀರ್ಮಾನವಾಗಲಿದೆ. ಮೂಲಗಳ ಪ್ರಕಾರ ಯಡಿಯೂರಪ್ಪ ಕೆಲವು ಸಚಿವರ ಖಾತೆಗಳನ್ನು ಅದಲು-ಬದಲು ಮಾಡುವ ನಿರೀಕ್ಷೆಯಿದೆ.  ಅದು ನಿಜವೇ ಆದರೆ ಗೃಹ, ಕಂದಾಯ, ಬೃಹತ್ ಕೈಗಾರಿಕೆ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಹಾಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಕಂದಾಯ ಖಾತೆ, ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್‍ಗೆ ಗೃಹ ಖಾತೆ ಕೊಡುವ ಬಗ್ಗೆ ಸಿಎಂ ಒಲವು ತೋರಿದ್ದಾರೆ.
ಇನ್ನು ಕಂದಾಯ ಸಚಿವ ಆರ್.ಅಶೋಕ್‍ಗೆ ಸದ್ಯ ಸಿಎಂ ಬಳಿ ಇರುವ ಬೆಂಗಳೂರು ನಗರಾಭಿವೃದ್ಧಿ ಖಾತೆ, ಕಂದಾಯ ಖಾತೆಯನ್ನು ಬೊಮ್ಮಾಯಿ ಹೆಗಲಿಗೆ ನೀಡುವುದನ್ನು ತಳ್ಳಿ ಹಾಕುವಂತಿಲ್ಲ.

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಹೊಸದಾಗಿ ಇಂಧನ ಖಾತೆ ಹಾಗೂ ಸಂಪುಟಕ್ಕೆ ನೂತನವಾಗಿ ಸೇರ್ಪಡೆಯಾಗಿರುವ ಉಮೇಶ್ ಕತ್ತಿಗೆ ಈ ಖಾತೆಯ ಹೊಣೆಗಾರಿಕೆ ಸಿಗಬಹುದು.  ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಐದು ವರ್ಷಗಳ ಕಾಲ ಬೃಹತ್ ಕೈಗಾರಿಕಾ ಮತ್ತು ಮಧ್ಯಮ ಕೈಗಾರಿಕಾ ಖಾತೆ ಸಚಿವರಾಗಿ ಮತ್ತು ವಿಶ್ವ ಬಂಡವಾಳ ಹೂಡಿಕೆ ಸಮಾವೇಶವನ್ನು ಆಯೋಜಿಸಿ ಯಶಸ್ವಿಯಾಗಿದ್ದ ಮುರುಗೇಶ್ ನಿರಾಣಿಗೆ ಮತ್ತೆ ಅದೇ ಖಾತೆ ಸಿಗಬಹುದಾಗಿದೆ.

ಉಮೇಶ್ ಕತ್ತಿ ತಮಗೆ ಇಂಧನ ಖಾತೆಯನ್ನು ನೀಡಬೇಕೆಂದು ಕೇಳಿದ್ದರೆ, ನಿರಾಣಿ ಬೃಹತ್ ಕೈಗಾರಿಕಾ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ. ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ತಮಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡಬೇಕೆಂದು ಮನವಿ ಮಾಡಿದ್ದಾರೆ.

ಉಳಿದಂತೆ ಆರ್.ಶಂಕರ್‍ಗೆ ಅಬಕಾರಿ, ಸಿ.ಪಿ.ಯೋಗೇಶ್ವರ್‍ಗೆ ಕನ್ನಡ ಮತ್ತು ಸಂಸ್ಕøತಿ ಯುವಜನ ಸೇವೆ ಖಾತೆ ಸಿಗಬಹುದು ಎನ್ನಲಾಗುತ್ತಿದೆ. ಯಾವುದಕ್ಕೂ ಯಡಿಯೂರಪ್ಪ ಇನ್ನೊಂದು ಬಾರಿ ಅಮಿತ್ ಷಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಮತ್ತಿತರ ಜೊತೆ ಚರ್ಚಿಸಿ ಸಂಜೆ ಬಳಿಕ ಯಾವುದೇ ಕ್ಷಣದಲ್ಲಿ ಖಾತೆಗಳನ್ನು ನೂತನ ಸಚಿವರಿಗೆ ಹಂಚಿಕೆ ಮಾಡಬಹುದು.

Facebook Comments