ಟಿಎಂಸಿ-ಬಿಜೆಪಿ ನಡುವೆ ಪೋಸ್ಟರ್ ಯುದ್ಧ

ಈ ಸುದ್ದಿಯನ್ನು ಶೇರ್ ಮಾಡಿ

ಕೋಲ್ಕತ್ತಾ,ಫೆ.28- ಚುನಾವಣೆ ವೇಳೆ ರಾಜಕೀಯ ಪಕ್ಷಗಳ ಆರೋಪ ಪ್ರತ್ಯಾರೋಪ , ವಾಕ್ಸಮರ ಸಹಜ, ಆದರೆ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ಮಾತುಗಳ ಯುದ್ಧವಲ್ಲ. ಪೋಸ್ಟರ್ ಯುದ್ಧಗಳೂ ನಡೆಯುತ್ತಿವೆ.

ಟಿಎಂಸಿ ಮತ್ತು ಬಿಜೆಪಿ ಎರಡೂ ಪಕ್ಷಗಳ ಕಾರ್ಯಕರ್ತರು, ಅಭಿಮಾನಿಗಳು, ನಾಯಕರ ನಡುವಿನ ವಾದ-ವಿವಾದ, ಆರೋಪ, ಪ್ರತ್ಯಾರೋಪಗಳು ವಾಕ್ಬಾಣದಂತೆ ಹೊರ ಬೀಳುತ್ತಲೇ ಇರುತ್ತದೆ. ಇದರ ನಡುವೆ ಪೋಸ್ಟರ್‍ಗಳ ಕುರಿತು ರಾಜ್ಯದಲ್ಲಿ ಹಲವು ವಿವಾದಗಳು ಭುಗಿಲೆದ್ದಿವೆ.

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಹಾಕಿರುವ ಪೋಸ್ಟರ್‍ನಲ್ಲಿ ಸರಸ್ವತಿ ಪೂಜೆಯ ದಿನವನ್ನು ಪ್ರೇಮಿಗಳ ದಿನ, ಪಾಶ್ಚಿಮಾತ್ಯ ಸಂಸ್ಕೃತಿ ಎಂದು ಪರಿಗಣಿಸಲಾಗುತ್ತಿದೆ. ಇದು ಸ್ವೀಕಾರಾರ್ಹವಲ್ಲ. ಈ ದಿನದಲ್ಲಿ ಸಂಚರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜನರಿಗೆ ಎಚ್ಚರಿಕೆ ನೀಡಲಾಗಿದೆ.

ದೀರ್ಘಕಾಲದ ನಂತರ ರಾಜ್ಯಾದ್ಯಂತ ಇಂದು ವಿದ್ಯಾರ್ಥಿಗಳು, ಪುರುಷರು-ಸ್ತ್ರೀಯರು ದೇವಿ ಸರಸ್ವತಿ ಪೂಜೆಗಾಗಿ ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಒಟ್ಟಿಗೆ ಸೇರಿದ್ದಾರೆ. ಇದು ಕೇವಲ ಕಾಲ ಕಳೆಯುವ ದಿನವಾಗಿ ಮಾರ್ಪಟ್ಟಿದೆ ಎಂದು ಪೋಸ್ಟರ್‍ನಲ್ಲಿ ಆರೋಪಿಸಲಾಗಿದೆ.

Facebook Comments

Sri Raghav

Admin