ಆಲೂಗೆಡ್ಡೆ ಬಿತ್ತನೆ ಎಂಬ “ಜೂಜಾಟ”ಕ್ಕೆ ನಲುಗಿದ ಹಾಸನದ ರೈತ..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗಡ್ಡೆ ಬೆಳೆಯುವ ಕಾಲ ಬಂದೇ ಬಿಟ್ಟದೆ.‌ ಆದರೆ ಇದನ್ನು ಬೆಳೆವ ರೈತ‌‌ನ ಬಾಳು ಜೂಜಾಟದಂತಾಗಿದೆ. ‌ ಬೆತ್ತನೆ‌ ಮಾಡಿ ಕೇವಲ ಮೂರೇ ತಿಂಗಳಿಗೆ ಕೊಯ್ಲಿಗೆ ಬರುವ ಈ ಬೆಳೆ ಕೆಲ ವರ್ಷಗಳ ಹಿಂದೆ ಲಾಭದಾಯಕವಾಗಿತ್ತು ಆದರೆ ಕಾಲ‌ ಕಳೆದಂತೆ‌ ಬೆಳೆಗೆ ಅಂಗಮಾರಿ‌ ಎಂಬ ಮಾರಕ ರೋಗ ಭಾದೆ ಕಾಡಲಾರಂಭಿಸಿದರ ಪರಿಣಾಮ ಇಳುವರಿಗೆ ಹಿನ್ನೆಡೆ ಹಾಗೂ ರೃತರನ್ನು ಸಾಲದ ಸುಳಿಗೆ ಸಿಲುಕಿಸಿತು; ಈ ಕಾರಣ ಜಿಲ್ಲೆಯಲ್ಲಿ ‌ಆಲೂ ಬೆಳೆ ಬಿತ್ತನೆಗೆ ಬಹುತೇಕ ರೈತರು ಉತ್ಸಾಹ ಕಳೆದುಕೊಂಡರು.

ಈ ಬಾರಿಯೂ ಸಹ ಹಾಸನ‌ ತಾಲ್ಲೂಕು ಅರಸೀಕೆರೆ, ಅರಕಲಗೂಡು, ಹೊಳೆನರಸೀಪುರ,ಅಲೂರು ತಾಲ್ಲುಕಿನ ಕೆಲವು ಭಾಗದಲ್ಲಿ ಆಲೂ ಬಿತ್ತನೆ‌ ಮಾಡಲಾಗುತ್ತದೆ.  ಆಲೂ ಬೆಳೆಗೆ ಪೂರಕ‌ ಮಳೆ ಹಾಗೂ ಹೆಚ್ಚು ಶೀತ ಪ್ರದೇಶ ಉತ್ತಮ‌ವಲ್ಲ‌‌ ಹೆಚ್ಚಿನ‌ ಮಳೆ ಬಂದರೆ ಬೆಳೆ ಬೆಳವಣಿಗೆಗೆ ಹಾನಿಕಾರಕ ಎಂದು ಹೇಳಲಾಗುತ್ತದೆ.

# ಹಾಸನ “ಆಲೂ‌” ಚಿಪ್ಸ್ ಗೆ ಫೇಮಸ್; ಹಲವು ದಶಕದಿಂದ ಹಾಸನದ ಆಲೂಗಡ್ಡೆ ಗುಣಮಟ್ಟಕ್ಕೆ ಅದರದೇಯಾದ ಹೆಸರಿದೆ‌. ಇಲ್ಲಿ‌ ಬೆಳೆಯಲಾದ ಆಲೂಗೆಡ್ಡೆ ಭೂ‌ ಪ್ರದೇಶ ಭಾರತದ ಪ್ರಮುಖ ಚಿಪ್ಸ್ ಕಂಪನಿಗಳ ನೆಚ್ಚಿನ ನೆಲೆಯಾಗಿದೆ‌ ಕೂಡ.

ಕಳೆದ ಹಲವು ದಶಕ ಮೂವತ್ತು ಸಾವಿರ ಹೆಕ್ಟರ್ ಗೂ ಹೆಚ್ಚು ಪ್ರದೇಶದಲ್ಲಿ ಆಲೂ ಬೆಳೆಯಲಾಗುತ್ತಿತ್ತು. ಆಲೂಗಡ್ಡೆ ಚಿಪ್ಸ್ ಗೆ ಪ್ರಸಿದ್ದಿ ಪಡೆದಿರುವ ಪೆಪ್ಸಿ ,ಲೇಸ್ ಕಂಪನಿಗಳು ಬಂಡವಾಳ‌ ಹಾಕಿ ರೈತರಿಗೆ ಆಲೂ ಗೆಡ್ಡೆ ಬಿತ್ತನೆ‌ ಬೀಜ ನೀಡಿ ಹಾಸನದ ಹಲವು ಪ್ರದೇಶದ ಲ್ಲಿ ಬಿತ್ತನೆಗೆ ಗುತ್ತಿಗೆ ನೀಡುತ್ತಿತ್ತು ಇದರಿಂದ‌ ಇಲ್ಲಿನ ರೈತರು ಲಕ್ಷಾಂತರ ರೂ ಲಾಭ ಗಳಿಸುತ್ತಿದ್ದರು.

ಇಂದಿಗೂ ಸಹ ಇಲ್ಲಿನ‌‌ ಆಲೂಗಡ್ಡೆಗೆ ಬೇಡಿಕೆ ಇದೆ‌ ಆದರೆ ಅಂಗಮಾರಿ ರೋಗ ಇಳುವರಿ ಹಾಗೂ ಗುಣಮಟ್ಟ ಗೆಡ್ಡೆಗೆ ಮಾರಕವಾಗಿದೆ.

# “ಅಂಗಮಾರಿ” ರೋಗ ಬೆಳೆಗೆ ಮಾರಕ: ಕಳೆದ ಎರಡು ದಶಕದಿಂದ ಆಲೂಗಡ್ಡೆ ಬೆಳೆಗೆ ಅಂಗಮಾರಿ ಎಂಬ ರೋಗ ಭಾದೆ ಆಲೂಗಡ್ಡೆ ಇಳುವರಿಗೆ ಮಾರಕವಾಗಿದೆ. ಒಂದು ಕಿಲೋ ಆಲೂ ಬಿಜ ಬಿತ್ತನೆಯ ಗೆಡ್ಡೆಗೆ 7 ರಿಂದ 12 ಕಿಲೋ ಆಲೂಗಡ್ಡೆ ಇಳುವರಿ ಬರುತಿತ್ತು ಆದರೆ ಅಂಗಮಾರಿ ರೋಗ ಲಕ್ಷಣ‌ ಬಂದ ಕಾರಣ ಇದರ‌‌ ಪ್ರಮಾಣ ಗಣನೀಯವಾಗಿ ಇಳಿಕೆಯೊಂದಿಗೆ‌ ಗುಣಮಟ್ಟದ ಆಲೂಗಡ್ಡೆ ಕಾಣದಂತಾಗಿದೆ. ಇದರಿಂದಾಗಿ ಸಾವಿರಾರು ಹೆಕ್ಟೇರ್ ಗಳಲ್ಲಿ‌ ಬೆಳೆಯಲಾಗುತ್ತಿದ್ದ ಬೆಲೆ ಇಂದು‌‌ ಕೆಲವು ಹೆಕ್ಟೇರ್ ಪ್ರದೇಶಕ್ಕೆ ಸೀಮಿತವಾಗಿದೆ.

# ಸಾವಿರಾರು ಏಕರೆಯಲ್ಲಿ ಬೆಳೆಯಲಾಗುತಿತ್ತು; ಇಳುವರಿ‌‌ ಅಂಗಮಾರಿ‌ ಭಾದೆ ಇಲ್ಲದ‌ ಕಾಲದಲ್ಲಿ‌ ಒಬ್ಬ ರೈತ ಹತ್ತಾರು ಏಕರೆ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ‌ ಮಾಡುತ್ತಿದ್ದರು. ಇಳುವರಿ ರೋಗ‌ ಬಾದೆ ಇಲ್ಲದಿದ್ದರೆ ಎಕರೆಗೆ ಐದು ಕ್ವಿಂಟಾಲ್ ಬಿತ್ತನೆಗೆ ನೂರು ಕ್ವಿಂಟಾಲ್ ಆಲೂಗಡ್ಡೆ ಬೆಳೆದ ಹಲವು ನಿದರ್ಶನಗಳು ಇದೆ.

ಕೇವಲ‌ ಮೂರು ತಿಂಗಳಲ್ಲಿ ಕೊಯ್ಲಿಗೆ ಬರುವ ಕಾರಣ‌ ಈ ಬೆಳೆಗೆ ಉತ್ತಮ‌ ಬೇಡಿಕೆ‌ ಇದೆಯಾದರು ಬಿತ್ತನೆ ನಂತರ ಮಳೆ, ಭೂಮಿ ಫಲವತ್ತತೆ, ಹವಮಾನ ಪೂರಕವಾಗಬೇಕು ಈ ವರ್ಷ ಬೆಳದ ಭೂಮಿ ಯಲ್ಲಿ‌ ಮತ್ತೆ ಬಿತ್ತನೆ‌ ಮಾಡಿದರೆ ಇಳುವರಿ ಯೊಂದಿಗೆ‌ ರೋಗಭಾದೆ ಇದ್ದರೆ ಮತ್ತೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ‌ಅದ್ದರಿಂದ‌ ಈ ಬಗ್ಗೆ ರೈತರು ಜಾಗೃತರಾಗಬೇಕಿದೆ.

ಹೆಚ್ಚು‌ ಮಳೆಯಾದರೆ ಆಲೂ ಬೆಳೆಗೆ ಮಾರಕ‌ ಅದ್ದರಿಂದ‌ ಇದನ್ನು ಬೇಸಿಗೆ‌‌ ಕಾಲ‌ ಹಾಗೂ‌‌ ಮಳೆ‌ಗಾಲ ಪ್ರಾರಂಭಕ್ಕೂ ಮುನ್ನಾ ಆಲೂಗಡ್ಡೆ ಬಿತ್ತನೆ‌‌ ಮಾಡಿದರೆ ಉತ್ತಮ‌‌ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು‌ ಹೇಳುತ್ತಾರೆ.

# ಯಾವಾಗ ಬಿತ್ತನೆ‌ ಮಾಡಬೇಕು; ಮೇ.15 ರಿಂದ ಜೂನ್ ಮೊದಲ ವಾರದೊಳಗೆ ಅಲೂ ಬಿತ್ತನೆಗೆ‌ ಪೂರಕ. ಈ ತಿಂಗಳಲ್ಲಿ ಬೀಳುವ ಕೃತಿಕ ಹಾಗೂ ರೋಹಿಣಿ ಮಳೆ ಬೀಳುವ ವೇಳೆ‌ ಬಿತ್ತನೆ ಮಾಡಿದಲ್ಲಿ ಹೆಚ್ಚಿನ‌ ಇಳುವರಿಯೊಂದಿಗೆ ಗುಣಮಟ್ಟದ ಆಲೂ ಬೆಳೆ‌ ಪಡೆಯಬಹುದು ಎಂದು ಸಂಪ್ರದಾಯ ಬದ್ಧ ಹಿರಿಯ ರೈತರು ಹೇಳುತ್ತಾರೆ.

# ಆಲೂ ಬಿತ್ತನೆಗೆ ಸೂಕ್ತ‌ ಕ್ರಮ ;ಮೇ 16 ರಿಂದ ವಿತರಣೆ : ಮೇ.16 ರಿಂದ ಬಿತ್ತನೆ‌ ಆಲೂಗಡ್ಡೆ ವಿತರಣೆಗೆ ಕ್ರಮವಹಿಸಲಾಗಿದೆ. ಪ್ರಸಕ್ತ ವರ್ಷ 13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 18 ಸಾವಿರ ರೈತರು ಆಲೂಗೆಡ್ಡೆ ಬಿತ್ತನೆ ಮಾಡುವ ನಿರೀಕ್ಷೆ ಇದೆ .

ಎಪಿಎಂಸಿ ಮಾರುಕಟ್ಟೆಯಲ್ಲಿ ಹಾಸನ ತಾಲ್ಲೂಕಿನ ರೈತರಿಗಾಗಿ 6 ಹಾಗೂ ಇತರ ತಾಲ್ಲೂಕು ರೈತರಿಗೆ 5 ಖರೀದಿ ಕೇಂದ್ರಗಳನ್ನು ಮೀಸಲಿರಿಸಲಾಗುವುದು ಹಾಗೂ ಅರ್ಜಿಗಳ ಸ್ವೀಕಾರ, ಗೊಬ್ಬರ, ಔಷದೋಪಚಾರಗಳ ವಿತರಣೆಗೆ ಪ್ರತ್ಯೇಕ ಕೌಂಟರ್ ತೆರೆಯಲಾಗುತ್ತದೆ ಎಂದು ತೋಟಗಾರಿಕೆ ಉಪನಿರ್ದೇಶಕರಾದ ಮಂಜುನಾಥ್ ಬಿ. ಅವರು ಮಾಹಿತಿ ನೀಡುತ್ತಾರೆ.

ಅಂಗಮಾರಿ ರೋಗ ನಿಯಂತ್ರಣ ಕ್ರಮದ ಬಗ್ಗೆ ರೈತರಲ್ಲಿ ಜಾಗೃತಿ ಅಗತ್ಯ ಈ ನಿಟ್ಟಿನಲ್ಲಿ ಇಲಾಖೆಯ ವತಿಯಿಂದ‌ ರೈತರಿಗೆ ರೋಗ ನಿಯಂತ್ರಣ ಹಾಗೂ ರೋಗ ಬಾರದಂತ ವಹಿಸಬೇಕಾದ ಮುಂಜಾಗ್ರತಾ ಕ್ರಮದ‌ ಕುರಿತು ಮಾಹಿತಿಯನ್ನು‌ ಸಹ‌ ನೀಡಲಾಗುತ್ತಿದೆ ಎಂದು ವಿವರಿಸುತ್ತಾರೆ ಅಧಿಕಾರಿ ‌ಮಂಜುನಾಥ್.

ಒಟ್ಟಾರೆ ರೃತರ ಪಾಲಿನ ಆಶಾದಾಯಕ‌‌ ಹಾಗೂ‌ ಕಡಿಮೆ‌ ಅವಧಿಯಲ್ಲಿ ‌ಹೆಚ್ಚು ಲಾಭ ಗಳಿಸಬಹುದಾದ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಆಲೂಗಡ್ಡೆ ಈ ಬಾರಿಯಾದರು ರೈತರ ಕೈಹಿಡಿಯುತ್ತಾ‌ ಅಥವಾ ಕೈಸುಡುವುದೊ ಪ್ರಕೃತಿಯೇ‌ ಉತ್ತರಿಸಲಿದೆ.

– ಸಂತೋಷ್ ಸಿ ಬಿ ಹಾಸನ

Facebook Comments

Sri Raghav

Admin