ಗಾಳಿಪಟವಾಗಿ ಬಂದ ಜವರಾಯ, ಮಕ್ಕಳಿಗೆ ನೆರವಾಗಲು ಹೋಗಿ ಕರಕಲಾದ ವ್ಯಕ್ತಿ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಅ.20- ವಿದ್ಯುತ್ ತಂತಿ ಮೇಲೆ ಬಿದ್ದಿದ್ದ ಗಾಳಿಪಟವನ್ನು ತೆಗೆಯಲು ಹೋದ ವ್ಯಕ್ತಿ ವಿದ್ಯುತ್ ಪ್ರವಹಿಸಿ ಸುಟ್ಟು ಕರಕಲಾಗಿರುವ ಘಟನೆ ಸದಾಶಿವನಗರ 6ನೇ ಮುಖ್ಯರಸ್ತೆಯಲ್ಲಿ ನಡೆದಿದೆ. ಅಬ್ದುಲ್ ಖಾಸೀಮ್ ವಿದ್ಯುತ್ ಪ್ರವಹಿಸಿ ಮೃತಪಟ್ಟ ದುರ್ದೈವಿ.

ಮೊಮ್ಮಗ ಗಾಳಿಪಟ ಹಾರಿಸುವ ವೇಳೆ ಮನೆಯ ಮೇಲೆ ಹಾದುಹೋಗಿದ್ದ ಹೈಟೆನ್ಷನ್ ತಂತಿಗೆ ಗಾಳಿಪಟ  ತಗುಲಿಕೊಂಡಿದ್ದು, ಅದನ್ನು ಎತ್ತಿ ಕೊಡುವಂತೆ ಮೊಮ್ಮಗ ಕೇಳಿದಾಗ ತಾತ ಅಬ್ದುಲ್ ಖಾಸೀಮ್ ಅದನ್ನು ತೆಗೆದುಕೊಡಲು ಕಬ್ಬಿಣದ  ರಾಡ್‍ನಿಂದ ಹೈಟೆನ್ಷನ್ ತಂತಿಯಲ್ಲಿದ್ದ ಗಾಳಿ ಪಟ ತೆಗೆಯಲು ಹೋಗಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ.

ಮಗುವಿನ ಕೈಗೂ ವಿದ್ಯುತ್ ತಾಗಿ ಗಾಯಗೊಂಡಿದೆ. ಕೂಡಲೇ ಸ್ಥಳೀಯರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ  ತಿಲಕ್ ಪಾರ್ಕ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments