ವಿದ್ಯುತ್ ಕೊರತೆಯನ್ನು ಗಂಭೀರವಾಗಿ ಪರಿಗಣಿಸಲು ಡಿಕೆಶಿ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.12- ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಉತ್ಪಾದನೆ ಹೆಚ್ಚಾಗಿ, ಕೋಟ್ಯಂತರ ರೂಪಾಯಿ ಮೌಲ್ಯದ ವಿದ್ಯುತ್‍ನ್ನು ಹೊರ ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಈಗ ಇದ್ದಕ್ಕಿದ್ದಂತೆ ಕೊರತೆ ಸೃಷ್ಟಿಯಾಗಿರುವ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವಿದ್ಯುತ್ ಸಚಿವನಾಗಿ ಕೆಲಸ ಮಾಡಿದ್ದವನು. ಎಲ್ಲಾ ಮಾಹಿತಿಗಳು ನನಗೆ ಬೆರಳ ತುದಿಯಲ್ಲೇ ಇವೆ. ಕಲ್ಲಿದ್ದಲ ಕೊರತೆ, ವಿದ್ಯುತ್ ಕಡಿತಗಳ ಬಗ್ಗೆ ನನ್ನದೆ ಆದ ಮೂಲದಲ್ಲಿ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ ಎಂದರು.

ರಾಜ್ಯ ಸರ್ಕಾರ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ಮುಂದಾಗಿದೆ. ನಮ್ಮಲ್ಲಿ ವಿದ್ಯುತ್ ಕೊರತೆಯಿದೆ ಎಂದು ಬಿಂಬಿತವಾದರೆ ಹೂಡಿಕೆದಾರರು ಹಿಂದೇಟು ಹಾಕುತ್ತಾರೆ. ನಿವೇಶನ, ನೀರು, ವಿದ್ಯುತ್ ಸರಳವಾಗಿ ಲಭ್ಯವಾಗಲಿದೆ ಮತ್ತು ಕೈಗಾರಿಕಾ ಸ್ನೇಹಿ ಪರಿಸರ ಇದೆ ಎಂದರೆ ಮಾತ್ರ ಹೂಡಿಕೆ ಬರಲಿದೆ ಎಂದು ಹೇಳಿದರು.

ಸದ್ಯಕ್ಕೆ ವ್ಯಾಪಕ ಮಳೆಯಾಗಿ ರುವುದರಿಂದ ರೈತರಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿಲ್ಲ. ಸಮಸ್ಯೆಯ ತೀವ್ರತೆ ಕಂಡು ಬಂದಿಲ್ಲ. ಕೇಂದ್ರ ಸರ್ಕಾರ ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆ ಮಾಡುತ್ತಿಲ್ಲ. ಇರುವ ಕಲ್ಲಿದ್ದಲು ಒಂದು ದಿನಕ್ಕಷ್ಟೆ ಸಾಕಾಗಲಿದೆ ಎಂಬ ಮಾಹಿತಿ ಇದೆ.

ಇದರಿಂದ ವಿದ್ಯುತ್ ಕೊರತೆ ಎದುರಾಗಬಹುದು. ನಾನು ಇಂಧನ ಸಚಿವನಾಗಿದ್ದಾಗ ಉತ್ಪಾದನೆ ಹೆಚ್ಚಾಗಿ ಕೋಟ್ಯಂತರ ರೂಪಾಯಿ ಮೌಲ್ಯದಷ್ಟು ವಿದ್ಯುತ್ ಅನ್ನು ನೆರೆಯ ರಾಜ್ಯಗಳಿಗೆ ಮಾರಾಟ ಮಾಡಲಾಗಿತ್ತು. ಹೊಸದಾಗಿ ಇಂಧನ ಸಚಿವರಾಗಿರುವ ವಿ.ಸುನೀಲ್ ಕುಮಾರ್‍ಮೊದಲು ಇಲಾಖೆಯ ಕೆಲಸಗಳತ್ತ ಗಮನ ಹರಿಸಲಿ. ರಾಜಕಾರಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಡಲಿ ಎಂದು ಸಲಹೆ ನೀಡಿದರು.

ಹಾವೇರಿ, ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮುಂದಿನ ರಾಜಕೀಯದ ದಿಕ್ಸೂಚಿಯಲ್ಲ ಎಂದು ಹೇಳುವ ಮೂಲಕ ಡಿ.ಕೆ.ಶಿವಕುಮಾರ್ ಮತದಾನಕ್ಕೂ ಮೊದಲೇ ಸೋಲು ಒಪ್ಪಿಕೊಂಡಿದ್ದಾರೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಯವರು ಈ ರೀತಿ ಹೇಳಿಕೆ ನೀಡಲಿ ನಾನು ಪ್ರತಿಕ್ರಿಯಿಸುತ್ತೇನೆ ಎಂದು ತಳ್ಳಿಹಾಕಿದರು.

ಕೊರೊನಾ ಸಂದರ್ಭದಲ್ಲಿ ಔಷ ಕೊಡದೆ ಜನರನ್ನು ಸಾಯಿಸಿದರು. ಆ ವೇಳೆ ಪ್ರಾಣ ಕಳೆದುಕೊಂಡವರಿಗೆ ಪರಿಹಾರ ಕೊಡಲಿಲ್ಲ. ಇನ್ನೂ ಈಗ ರಸ್ತೆ ಗುಂಡಿಯಲ್ಲಿ ಬಿದ್ದು ಜೀವ ಕಳೆದುಕೊಂಡವರಿಗೆ ಪರಿಹಾರ ಕೊಡುತ್ತಾರೆಯೇ ? ಈ ಸರ್ಕಾರಕ್ಕೆ ಬಡವರಿಗೆ ಸಹಾಯ ಮಾಡುವ ಮನಸ್ಥಿತಿ ಇಲ್ಲ ಎಂದು ಕಿಡಿಕಾರಿದರು.

ಹಾನಗಲ್ ಉಪಚುನಾವಣಾ ಕಣದಲ್ಲಿ ಬಂಡಾಯ ಅಭ್ಯರ್ಥಿಯ ನಾಮಪತ್ರವನ್ನು ವಾಪಾಸ್ ತೆಗೆಸಲು ಮುಖ್ಯಮಂತ್ರಿ ಒತ್ತಡ ಏರಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ರಾಜಕಾರಣದಲ್ಲಿ ಅವರದೇ ಆದ ತಂತ್ರಗಾರಿಕೆಯನ್ನು ಅನುಸರಿಸುತ್ತಾರೆ. ಅವರ ಪಕ್ಷದ ವಿಚಾರಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.

ಬೇರೆ ಬೇರೆ ಪಕ್ಷಗಳಿಂದ ಬಹಳಷ್ಟು ಮಂದಿ ಕಾಂಗ್ರೆಸ್ ಸೇರಲು ಮುಂದೆ ಬಂದಿದ್ದಾರೆ. ನಿನ್ನೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಇಂದು ತಮ್ಮನ್ನು ಭೇಟಿ ಮಾಡಲಿದ್ದಾರೆ. ಅವರೊಂದಿಗೆ ಚರ್ಚೆ ನಡೆಸುತ್ತೇವೆ. ಪಕ್ಷ ಸೇರ್ಪಡೆ ಮಾಡುವವರ ಬಗ್ಗೆ ಅಧ್ಯಯನ ನಡೆಸಲು ಸಮಿತಿಯೊಂದನ್ನು ರಚಿಸಲಾಗಿದೆ. ಅದರ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ಸಿದ್ದರಾಮಯ್ಯ ಅವರು ರಾಷ್ಟ್ರರಾಜಕಾರಣಕ್ಕೆ ಸೇರಬೇಕು ಎಂಬ ಚರ್ಚೆ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ತಮ್ಮ ಬಳಿ ಚರ್ಚೆಯಾಗಿಲ್ಲ ಎಂದರು. ರಾಹುಲ್‍ಗಾಂ ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂಬುದು ದೇಶದ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಆಗ್ರಹವಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದೇ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕಿ ಮೊಟಮ್ಮ ಸೇರಿದಂತೆ ಅನೇಕ ನಾಯಕರ ಜೊತೆ ಡಿ.ಕೆ.ಶಿವಕುಮಾರ್ ಚರ್ಚೆ ನಡೆಸಿದರು.

Facebook Comments