ಪವರ್ ಸ್ಟಾರ್ ಸೈಕಲ್ ಸವಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ. 28- ತಮ್ಮ ವರ್ಕೌಟ್ ಮೂಲಕ ಗಮನ ಸೆಳೆದಿದ್ದ ಪವರ್‍ಸ್ಟಾರ್ ಪುನೀತ್‍ರಾಜ್‍ಕುಮಾರ್ ಈಗ ಸಿಲಿಕಾನ್ ಸಿಟಿಯಲ್ಲಿ ಸೈಕಲ್ ತುಳಿಯುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.

ಶೂಟಿಂಗ್ ಇಲ್ಲದಿರುವುದರಿಂದ ಪುನೀತ್ ಸೈಕಲಿಂಗ್ ಮಾಡುವ ನಿರ್ಧಾರ ಮಾಡಿದ್ದು ಅದರಂತೆ ಸದಾಶಿವನಗರದ ತಮ್ಮ ನಿವಾಸದಿಂದ ಸೈಕಲ್ ಏರಿದ ಪವರ್‍ಸ್ಟಾರ್, ಮೇಖ್ರಿ ಸರ್ಕಲ್, ವಸಂತನಗರ, ಚಾಲುಕ್ಯ ಸರ್ಕಲ್, ವಿಧಾನಸೌಧ,

ಬಹುಮಹಡಿ ಕಟ್ಟಡ, ಚಿನ್ನಸ್ವಾಮಿ ಸ್ಟೇಡಿಯಂ, ಎಂಜಿ ರಸ್ತೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸೈಕಲ್ ತುಳಿದಿದ್ದು ಆ ದೃಶ್ಯಗಳನ್ನು ಪುನೀತ್ ತಮ್ಮ ಯುಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ.

ಪುನೀತ್ ನಗರದಲ್ಲಿ ಸೈಕಲಿಂಗ್ ಮಾಡುವ ಕುರಿತು ಮೊದಲೇ ತಮ್ಮ ಟ್ವಿಟ್ಟರ್ ಮೂಲಕ ತಿಳಿಸಿದ್ದು, ಈಗ ತಮ್ಮ ಪಿಆರ್‍ಕೆ ಯುಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಿದ್ದು ಅದಕ್ಕೆ ಸಾಕಷ್ಟು ಲೈಕ್ಸ್‍ಗಳು, ಕಾಮೆಂಟ್ಸ್‍ಗಳು ಬರುತ್ತಿದೆ.

ಪರಿಸರ ಪ್ರೇಮಿಯಾಗಿರುವ ಪುನೀತ್ ಈ ಹಿಂದೆಯೂ ಹಲವು ಬಾರಿ ಚಿಕ್ಕಬಳ್ಳಾಪುರದಲ್ಲಿರುವ ನಂದಿಬೆಟ್ಟಕ್ಕೆ ಸವಾರಿ ಮಾಡಿದ್ದರು.

Facebook Comments

Sri Raghav

Admin