111 ಮಹಿಳೆಯರಿಗೆ ‘ಪವರ್ ವುಮನ್ಸ್ ಆವಾರ್ಡ್’, ವರ್ಲ್ಡ್ ಬುಕ್ ಆಫ್ ರೆಕಾರ್ಡ್ ದಾಖಲೆ

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಲೀಡ್ ಇಂಡಿಯ ಫೌಂಡೇಷನ್ ವತಿಯಿಂದ ದಿನಾಂಕ ಮಾಡಿದ 111 ಮಹಿಳಾ ಸಾಧಕಿಯರಿಗೆ 111 ನಿಮಿಷದಲ್ಲಿ ಪವರ್ ವುಮನ್ಸ್ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಟೌನ್ ಹಾಲ್ ನಲ್ಲಿ ಆಯೋಜಿಸಲಾಗಿತ್ತು

ಉದ್ಘಾಟನೆಯನ್ನು ವಿಧಾನಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ರವರು ಮತ್ತು ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಮುರುಗೇಶ್ ನಿರಾಣಿರವರು ವಿಧಾನಪರಿಷತ್ ಸದಸ್ಯರಾದ ರವಿಕುಮಾರ್ ಲೀಡ್ ಇಂಡಿಯ ಅಧ್ಯಕ್ಷರಾದ ಹರೀಕೃಷ್ಣರವರು ಕೆ.ಸಿ.ರೆಡ್ಡಿ ಸರೋಜಮ್ಮ ವೆಲ್ ಫೇರ್ ಅಧ್ಯಕ್ಷರಾದ ಶ್ರೀಮತಿ ವಸಂತ್ ಕವಿತಾ ರವರು ದೀಪಾ ಬೆಳಗಿಸಿ ಉದ್ಘಾಟನೆ ಮಾಡಿದರು .111 ಅತ್ಯುತ್ತಮ ಮಹಿಳಾ ಸಾಧಕಿಯರಿಗೆ ಎಂದು ಪ್ರಶಸ್ತಿ ಪ್ರಧಾನ ಮಾಡಿದರು.

ಇದೇ ಸಂದರ್ಭದಲ್ಲಿ ಶ್ರೀಮತಿ ವಸಂತ್ ಕವಿತಾ ಮಾತನಾಡಿ ಮಹಿಳೆಯರು ರಾಜಕೀಯ ,ಶಿಕ್ಷಣ ,ಸಾಹಿತ್ಯ , ವಿಜ್ಞಾನ ವಿವಿಧ ರಂಗದಲ್ಲಿ ಸಾಧನೆ ಮಾಡಿದ್ದಾರೆ .ಮಹಿಳೆಯರು ಅಬಲೆಯಲ್ಲ ಸಬಲೆ .ಧೃರ್ಯಃ ಸರ್ವತ್ರ ಸಾಧನಂ ಎನ್ನುವಂತೆ ಮಹಿಳೆಯರು ಮುಂದೆ ಬರಬೇಕು .ಮಹಿಳೆಯರು ಸಂಘಟಿತರಾದರೆ ಮಾತ್ರ ಸಮಾಜ ಅಭಿವೃದ್ದಿ ಸಾಧ್ಯ .ಮಹಿಳೆಯರನ್ನ ಸಾಧನೆಗಳನ್ನು ಗುರುತಿಸುವ ದಿನವೆ ವಿಶ್ವ ಮಹಿಳಾ ದಿನಾಚರಣೆ ಎಂದು ಹೇಳಿದರು.

Facebook Comments

Sri Raghav

Admin