ವಿಶ್ವದ 100 ಪ್ರಬಲ ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾ, ಕಿರಣ್ ಮಜೂಮ್ದಾರ್

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ಡಿ.13-ವಿಶ್ವದ 100 ಬಹು ಪ್ರಬಲ ಮಹಿಳೆಯರ (ಮೋಸ್ಟ್ ಪವರ್‍ಫುಲ್ ವುಮೆನ್) ಪಟ್ಟಿಯನ್ನು ಪ್ರತಿಷ್ಠಿತ ಫೋಬ್ರ್ಸ್ ನಿಯತಕಾಲಿಕ ಪ್ರಕಟಿಸಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಎಚ್‍ಸಿಎಲ್ ಕಾಪೆರ್ರೇಷನ್ ಸಿಇಒ ರೋಶಿನಿ ನಡಾರ್ ಮಲ್ಹೋತ್ರಾ ಮತ್ತು ಬೆಂಗಳೂರು ಮೂಲದ ಬಯೋಕಾನ್ ಸಂಸ್ಥೆ ಸಂಸ್ಥಾಪಕಿ ಕಿರಣ್ ಮಜುಮ್ದಾರ್ ಶಾ ಅವರು ಲಿಸ್ಟ್‍ನಲ್ಲಿರುವುದು ಭಾರತ ಹೆಮ್ಮೆಪಡುವಂತೆ ಮಾಡಿದೆ.

2019ನೇ ಸಾಲಿನ ವಿಶ್ವದ ಅತ್ಯಂತ ಪ್ರಬಲ ಮಹಿಳೆಯರ ಪಟ್ಟಿಯಲ್ಲಿ ಜರ್ಮನ್ ಚಾನ್ಸುಲರ್ ಏಂಜೆಲಾ ಮರ್ಕೆಲ್ ಅಗ್ರ ಸ್ಥಾನದಲ್ಲಿದ್ದಾರೆ. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಅಧ್ಯಕ್ಷೆ ಕ್ರಿಸ್ಟ್ರಿನಾ ಲಗಾರ್ಡೆ ದ್ವಿತೀಯ ಮತ್ತು ಅಮೆರಿಕದ ಪ್ರತಿನಿಧಿಗಳ ಸದನ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೃತೀಯ ಸ್ಥಾನದಲ್ಲಿದ್ದಾರೆ.

ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ಅವರಿಗೆ ಈ ಪಟ್ಟಿಯಲ್ಲಿ 29ನೇ ಸ್ಥಾನ ಲಭಿಸಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದೇ ಮೊದಲ ಬಾರಿಗೆ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಎಚ್‍ಸಿಎಲ್‍ನ ಸಿಇಒ ರೋಶಿನಿ 54ನೇ ಸ್ಥಾನ ಮತ್ತು ಕಿರಣ್ ಮಜುಮ್ದಾರ್ 65ನೇ ಸ್ಥಾನ ಆಕ್ರಮಿಸಿದ್ದಾರೆ.

ಫೋಬ್ರ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ವಿಶ್ವದ ಇತರ ಪ್ರಬಲ ಮಹಿಳೆಯರೆಂದರೆ: ಬಿಲ್ ಅಂಡ್ ಮಿಲಿಂಡಾ ಗೇಟ್ಸ್ ಫೌಂಡೇಷನ್‍ನ ಸಹ ಅಧ್ಯಕ್ಷತೆ ಮಿಲಿಂಡಾ ಗೇಟ್ಸ್(6), ಐಬಿಎಂ ಸಿಇಒ ಗಿನ್ನಿ ರೊಮೆಟ್ಟಿ (9), ಫೇಸ್‍ಬುಕ್ ಸಿಒಒ ಶೆರ್ಲಿ ಸ್ಯಾಂಡ್‍ಬರ್ಗ್ (18), ನ್ಯೂಜಿಲೆಂಡ್ ಪ್ರಧಾನಮಂತ್ರಿ ಜಸಿಂಡಾ ಆಡೆರ್ನ್(38), ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಮತ್ತು ಸಲಹೆಗಾರ್ತಿ ಇವಾಂಕಾ ಟ್ರಂಪ್(42), ಖ್ಯಾತ ಗಾಯಕಿಯರಾದ ರೆಹಾನ್ನಾ(61), ಬೊಯೊನ್ಸ್(66) ಮತ್ತು ಟೇಲರ್ ಸ್ವಿಫ್ಟ್(71). ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ (81), ಮತ್ತು ಅತ್ಯಂತ ಕಿರಿಯ ಪರಿಸರ ಸಂರಕ್ಷಣೆ ಕಾರ್ಯಕರ್ತೆ ಗ್ರೇಟಾ ಥುಂಗ್‍ಬರ್ಗ್(100).

ವಿಶ್ವದಾದ್ಯಂತ 2018ರಲ್ಲಿ ಸರ್ಕಾರಿ, ಉದ್ಯಮ, ಮನುಕುಲ ಸೇವೆ, ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿ ನಾಯಕತ್ವ ವಹಿಸಿರುವ ಅದ್ಯ ಪ್ರವರ್ತನೆಯ 100 ಮಹಿಳಾ ಸಾಧಕಿಯರನ್ನು ಗುರುತಿಸಿ ವಿಶ್ವದ ಪ್ರಬಲ ಮಹಿಳೆಯರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಫೋಬ್ರ್ಸ್ ತಿಳಿಸಿದೆ.

Facebook Comments