ಕೆಆರ್ ಪುರಂ ರಸ್ತೆಗಳಲ್ಲಿ ಪಿಪಿಇ ಕಿಟ್‍ಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.11- ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಪಿಪಿಇ ಕಿಟ್‍ಗಳಿಂದ ಕೆಆರ್ ಪುರಂನಲ್ಲಿ ಕೊರೊನಾ ಸೋಂಕು ಹರಡುವ ಭೀತಿ ಎದುರಾಗಿದೆ.

ರಸ್ತೆ ರಸ್ತೆಗಳಲ್ಲಿ ಕಿಲೋಮೀಟರ್‍ಗಟ್ಟಲೆ ಪಿಪಿಇ ಕಿಟ್‍ಗಳು ಬಿದ್ದಿರುವುದರಿಂದ ಅಲ್ಲಿನ ಜನ ಓಡಾಡಲು ಹೆದರುತ್ತಿದ್ದಾರೆ. ಕೆಆರ್ ಪುರಂನ ಓಲ್ಡ್ ಮದ್ರಾಸ್ ರೋಡ್ ಮತ್ತಿತರ ರಸ್ತೆಗಳಲ್ಲಿ ಕಿಟ್‍ಗಳು ಬಿದ್ದಿದ್ದರೆ, ಕೆಆರ್ ಪುರಂ ಕೆರೆಯಲ್ಲಿ ಪಿಪಿಇ ಕಿಟ್‍ಗಳು ತೇಲುತ್ತಿರುವುದು ಕಂಡುಬರುತ್ತಿದೆ.

ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಪಿಪಿಇ ಕಿಟ್ ಬಿದ್ದಿರುವ ಕುರಿತಂತೆ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ರಸ್ತೆಗಳಲ್ಲಿ ಬಿದ್ದಿರುವ ಕಿಟ್‍ಗಳನ್ನು ತೆರವುಗೊಳಿಸುವಂತೆ ಮಹದೇವಪುರ ವಲಯ ಜಂಟಿ ಆಯುಕ್ತರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin