ಆಸ್ಪತ್ರೆಯ ಆವರಣದಲ್ಲಿ ಕಸ ಕಂಡು ಕೆಂಡಾಮಂಡಲರಾದ ಸಚಿವ ಪ್ರಭು ಚವ್ಹಾಣ್

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ,ನ.8- ಆಸ್ಪತ್ರೆಯ ಆವರಣದಲ್ಲಿರುವ ಕಸವನ್ನು ಕಂಡು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಕೆಂಡಾಮಂಡಲವಾಗಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ಪಶು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ನನಗೆ ಸನ್ಮಾನ ಬೇಕಾಗಿಲ್ಲ. ಸ್ವಚ್ಛತೆ ಬೇಕು ಎಂದು ಆಸ್ಪತ್ರೆ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.

ಗಂಡಸಿ ಪಶು ಆಸ್ಪತ್ರೆಗೆಯ ವೈದ್ಯರು ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಕೆಲಸ ಮಾಡಲು ಆಗದಿದ್ದರೆ ನೀವು ಇಲ್ಲಿರುವುದೇ ಬೇಡ ಎಂದು ಖಾರವಾಗಿ ನುಡಿದರು.  ಇದಕ್ಕೂ ಮುನ್ನ ಚನ್ನರಾಯಪಟ್ಟಣದ ರಾಯಸಂದ್ರ ಕಾವಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಗೋವುಗಳ ಆರೈಕೆಯಲ್ಲಿ ಕರ್ತವ್ಯ ಲೋಪವನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಉಪನಿರ್ದೇಶಕ ರಮೇಶ್, ಜಂಟಿ ಪಶುವೈದ್ಯ ಅಧಿಕಾರಿ ಸೋಮಶೇಖರ್ ಹಾಗೂ ಜಯಣ್ಣ ಅವರನ್ನು ಅಮಾನತು ಮಾಡಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಇದೇ ವೇಳೆ ಸೂಚನೆ ನೀಡಿದರು.  ಬಿದರೆ ಕಾವಲಿನಲ್ಲಿ 230 ಅಮೃತ್‍ಮಹಲ್ ತಳಿಯ ಹಸುಗಳು ಸುರಕ್ಷಿತವಾಗಿವೆ ಯಾವುದೇ ಸಾವು-ನೋವು ಸಂಭವಿಸಿಲ್ಲ. ಗೋ ಮಾತೆ ನಮ್ಮ ತಾಯಿ ಇದ್ದಂತೆ ಎಂದು ಅವರು ಹೇಳಿದರು.

Facebook Comments