ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ : ಪ್ರಭು ಚೌಹಾಣ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.5- ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ. ಉಮೇಶ್ ಕತ್ತಿ, ಯತ್ನಾಳ್ ನಮ್ಮ ಪಕ್ಷದ ಮುಖಂಡರು, ಅವರು ಹಿರಿಯರು, ನಮ್ಮ ಪಕ್ಷದಲ್ಲೇ ಇರುತ್ತಾರೆ. ಎಲ್ಲ ಸಮಸ್ಯೆಗಳನ್ನೂ ನಮ್ಮ ನಾಯಕರು ಬಗೆಹರಿಸುತ್ತಾರೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದರು.

ಪಶುಸಂಗೋಪನಾ ಇಲಾಖೆಯಿಂದ ಹೆಬ್ಬಾಳದ ಪಶುಪಾಲನಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಕೋವಿಡ್-19 ನಿಯಂತ್ರಣದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಯಾರು ಏನೇ ಮಾಡಿದರೂ ಸರ್ಕಾರ ಸುಭದ್ರವಾಗಿರುತ್ತದೆ. ಮೂರು ವರ್ಷ ನಮ್ಮದೇ ಸರ್ಕಾರ ಇರುತ್ತದೆ. ಕಾಂಗ್ರೆಸ್‍ನವರು ಏನೇ ಪ್ರಯತ್ನ ಮಾಡಿದರೂ ಉಪಯೋಗವಿಲ್ಲ. ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ, ಜನಪರ ಕೆಲಸಗಳನ್ನು ಮಾಡುತ್ತೇವೆ ಎಂದು ಅವರು ಹೇಳಿದರು.

ಲಾಕ್‍ಡೌನ್‍ನಿಂದ ಸಡಿಲಿಕೆಯಿಂದ ಕುಕ್ಕುಟೋದ್ಯಮ ಕ್ಷೇತ್ರ ಚೇತರಿಸಿಕೊಳ್ಳುತ್ತಿದೆ. ಚಿಕನ್, ಮೊಟ್ಟೆ ಮಾರಾಟ ಏರುಗತಿಯಲ್ಲಿ ಸಾಗಿದೆ. ಮೊದಲು ಕೋಳಿಗೆ ಕೊರೊನಾ ಬರುತ್ತದೆ ಎಂದು ಜನ ಭಯ ಪಟ್ಟಿದ್ದರು. ಈಗ ಜನರ ಭಯ ದೂರವಾಗಿದೆ. ಹೆಚ್ಚು ಚಿಕನ್, ಮೊಟ್ಟೆ ಮಾರಾಟವಾಗುತ್ತಿದೆ. ಲಾಭದಾಯಕ ಸ್ಥಿತಿಯತ್ತ ಉದ್ಯಮ ಮರಳುತ್ತಿದೆ. ಶೇ.65ರಷ್ಟು ಮಾರಾಟ ಪ್ರಗತಿ ಕಂಡಿದೆ ಎಂದರು. ಮೊಟ್ಟೆ, ಮಾಂಸ ತಿನ್ನುವವರ ಸಂಖ್ಯೆಯೂ ಹೆಚ್ಚುತ್ತಿದೆ. ಕುಕ್ಕುಟೋದ್ಯಮ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುತ್ತೇನೆ ಎಂದರು.

Facebook Comments