ಲಂಪಿಸ್ಕಿನ್ ಹತೋಟಿಯಲ್ಲಿ ನಿರ್ಲಕ್ಷ ತೊರುವ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ಪ್ರಭು ಚವ್ಹಾಣ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.20-ಲಂಪಿಸ್ಕಿನ್ ಹತೋಟಿಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ ರೈತರಿಗೆ ಸತಾಯಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಪಶುಸಂಗೋಪನೆ ಹಜ್ ಮತ್ತು ವಕ್ಫ ಸಚಿವ ಪ್ರಭು ಚವ್ಹಾಣ್ ಎಚ್ಚರಿಸಿದ್ದಾರೆ.

ರೋಗ ಹೆಚ್ಚಿರುವ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲಾಗಳಿಂದ ಹೆಚ್ಚು ಕರೆಗಳು ಬರುತ್ತಿದ್ದು, ಪಶು ವೈದ್ಯರು ನಿರ್ಲಕ್ಷ್ಯ ತೋರಿದ ಬಗ್ಗೆ ತಿಳಿದು ಬಂದಿದೆ. ಈ ಸಂಬಂಧ ಪಶುಸಂಗೋಪನೆ ಇಲಾಖೆಯ ಕಾರ್ಯದರ್ಶಿ,ಆಯುಕ್ತರು ಹಾಗೂ ನಿರ್ದೇಶಕರಿಗೆ ಸೂಕ್ತವಾದ ಕ್ರಮ ಕೈಗೊಳ್ಳಲು ಸೂಚನೆ ನಿಡಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.

ರಾಜ್ಯದ 12 ಜಿಲ್ಲಾಗಳ 39 ತಾಲ್ಲೂಕುಗಳಲ್ಲಿ ಸುಮಾರು 22030 ಜಾನುವಾರುಗಳಲ್ಲಿ ರೋಗ ಕಾಣಿಸಿಕೊಂಡಿದ್ದು,ಲಂಪಿಸ್ಕಿನ್ ರೋಗದಿಂದ ಜಾನುವಾರುಗಳ ಆರೋಗ್ಯ ಹದಗೆಡುತ್ತಿರುವ ಬಗ್ಗೆ ರಾಜ್ಯದ ಬೇರೆ ಬೇರೆ ಜಿಲ್ಲಾಗಳಿಂದ ಕರೆಗಳು ಬರುತ್ತಿವೆ. ಇಲಾಖೆಯ ಕಾರ್ಯದರ್ಶಿಯವರ ನೆತೃತ್ವದಲ್ಲಿ ತಂಡ ರಚಿಸಿ ರೋಗದ ಹತೋಟಿಗೆ ಕ್ರಮ ಕೈಗೊಳ್ಳಲು ಸಚಿವರು ಸೂಚನೆ ನೀಡಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಬೀದರ್, ಯಾದಗಿರಿ,ಕಲಬುರಗಿ,ರಾಯಚೂರಿನಲ್ಲಿ ರೋಗ ಹೆಚ್ಚು ವ್ಯಾಪಿಸುತ್ತಿದ್ದು, ಈ ಭಾಗಗಳಲ್ಲಿ ಲಸಿಕೆ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾದರೆ ಅಧಿಕಾರಿಗಳ ತಲೆದಂಡವಾಗುವುದು ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಈ ಜಿಲ್ಲಾಗಳಲ್ಲಿ 96300 ಮೇಕೆ ಸಿಡುಬು ಲಸಿಕೆ ಸರಬರಾಜು ಮಾಡಲಾಗಿದೆ.ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ಸುಮಾರು 600000 ಡೋಸ್ಗಳ ಮೇಕೆ ಸಿಡುಬು ಲಸಿಕೆ ಉತ್ಪಾದನೆ ಹಂತದಲ್ಲಿದ್ದು,ಕೂಡಲೇ ರೋಗ ಕಾಣಿಸಿಕೊಂಡಿರುವ ಜಿಲ್ಲಾಗಳಿಗೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ರೋಗ ಪೀಡಿತ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆಯನ್ನು ಸ್ಥಳೀಯ ಪಶುವೈದ್ಯರು ಮಾಡುತ್ತಿದ್ದಾರೆ.ಬಾಧಿತ ಪ್ರದೇಶದಲ್ಲಿ ಜಾನುವಾರು ಸಾಗಾಣಿಕೆಯ ಮೇಲೆ ನಿರ್ಬಂಧ, 5 ಕಿ.ಮೀ .ವ್ಯಾಪ್ತಿಯಲ್ಲಿ ವ್ಯಾಪಕ ಲಸಿಕಾ ಕಾರ್ಯಕ್ರಮದ ಮೂಲಕ ರೋಗವನ್ನು ಪರಿಣಾಮಕಾರಿಯಾಗಿ ತಡೆಯಲು ಕ್ರಮ ವಹಿಸಲಾಗುತ್ತಿದೆ. ವೈರಾಣುಗಳಿಂದ ಬರುವ ರೋಗವಾಗಿರುವುದರಿಂದ, ಸೂಕ್ತ ಚಿಕಿತ್ಸೆಯಿಲ್ಲ. ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಬೇಕಾಗಿರುತ್ತದೆ.

ಗಡ್ಡೆಗಳು ಒಡೆದು ಹುಣ್ಣಾಗುವುದನ್ನು ತಪ್ಪಿಸಲು ಟೆಟ್ರಾಸೈಕ್ಲಿನ್, ಪೆನ್ಸಿಲಿನ್ ನಂತರ ಆಂಟಿಬಯೋಟಿಕ್ ಗಳನ್ನು ನೀಡಲಾಗುತ್ತಿದೆ. ಗಾಯಗಳ ಸೂಕ್ತ ಉಪಚಾರಗಳ ಜೊತೆಯಲ್ಲಿ ಖನಿಜ ಮಿಶ್ರಣ,ರೋಗ ನಿರೋಧಕ ಶಕ್ತಿ ವೃದ್ದಿಸುವ ಔಷಧಗಳನ್ನು ನೀಡುವುದರಿಂದ ಜಾನುವಾರುಗಳು ನಿಶ್ಶಕ್ತವಾಗುವುದನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ಗಿಡಮೂಲಿಕೆ ಮತ್ತು ಹೋಮಿಯೋಪತಿ ಚಿಕಿತ್ಸೆಯೂ ಪರಿಣಾಮಕಾರಿಯಾಗಿದೆ ಎಂದಿದ್ದಾರೆ.

ರೋಗ ಪೀಡಿತ ರಾಸುಗಳನ್ನು ಆರೋಗ್ಯವಂತ ರಾಸುಗಳಿಂದ ಬೇರ್ಪಡಿಸಿ ಕೂಡಲೇ ಪಶುವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಗೊಳ ಪಡಿಸಬೇಕು. ಸೊಳ್ಳೆಗಳ, ನೊಣಗಳ ಹಾವಳಿಯನ್ನು ನೊಣ ನಿವಾರಕ ಮುಲಾಮು ಹಚ್ಚಿ ಹತೋಟಿಯಲ್ಲಿಡಲು ಸಚಿವರು ಪಶುಪಾಲಕರಿಗೆ ಮನವಿ ಮಾಡಿದ್ದಾರೆ.

ರೋಗ ಲಕ್ಷಣಗಳು: ಒಮ್ಮಿಂದೊಮ್ಮೆಲೆ ಅತಿಯಾದ ಜ್ವರ ಕಾಣಿಸಿಕೊಳ್ಳುವುದು,ಆಹಾರ ನಿರಾಕರಣೆ,ಹಾಲಿನ ಇಳುವರಿ ಕಡಿಮೆಯಾಗುವುದು. ಮೈಮೇಲೆ 2 ರಿಂದ 5 ಸೆಂ.ಮೀ. ಗಾತ್ರದ ಗಂಟುಗಳು (ಗಡ್ಡೆಗಳು) ಕಾಣಿಸಿಕೊಳ್ಳುವುದು,ತದನಂತರದಲ್ಲಿ ಚರ್ಮಗಡ್ಡೆಗಳು ಸಿಪ್ಪೆ ಸುಲಿದಂತೆ ಒಡೆದು ವೃಣವಾಗುವುದು. ಗರ್ಭ ಧರಿಸಿರುವ ಜಾನುವಾರುಗಳಲ್ಲಿ ಗರ್ಭಪಾತವಾಗಬಹುದು.

ಕೆಚ್ಚಲು ಬಾವು ಕಾಣಿಸಿಕೊಳ್ಳಬಹುದು. ಬಾಯಿ,ನಾಲಿಗೆ,ಮೇವಿಲ್ಲದೆ ಕರುಳು, ಶ್ವಾಸನಾಳ, ಗರ್ಭಕೋಶದಲ್ಲಿಯೂ ಸಹ ಗಂಟುಗಳು ಕಾಣಿಸಿಕೊಳ್ಳಬಹುದು. ಕಾಲುಗಳಲ್ಲಿ ಗಂಟುಗಳು ಕಾಣಿಸಿಕೊಂಡಾಗ ನಡೆದಾಡಲು ತೊಂದರೆಯಾಗುತ್ತದೆ. ಆಗ ತಕ್ಷಣದಲ್ಲಿ ಸ್ಥಳಿಯ ಪಶು ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ ಪಶುಗಳ ಆರೋಗ್ಯವನ್ನು ಕಾಪಾಡಿ ಎಂದು ಸಚಿವರು ಪಶುಪಾಲಕರು ಹಾಗೂ ಜಾನುವಾರು ಸಾಕಣೆದಾರರಿಗೆ ಕಿವಿ ಮಾತು ಹೇಳಿz್ದÁರೆ.

Facebook Comments