ಬಿಹಾರದ ಫಿಜಿಯೋಥೆರಪಿಸ್ಟ್ ಜೊತೆ ಸೀಕ್ರೆಟ್ ಆಗಿ ಮದುವೆಯಾಗಿದ್ದಾರಂತೆ ಪ್ರಭುದೇವ್..?

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ,ನ.20- ಭಾರತದ ಮೈಕಲ್ ಜಾಕ್ಸನ್ ಎಂದೇ ಖ್ಯಾತಿಯಾಗಿರುವ ನಟ ಪ್ರಭುದೇವ್ ಅವರು ಬಿಹಾರ ಮೂಲದ ಫಿಜಿಯೋಥೆರಪಿಸ್ಟ್ ಒಬ್ಬರನ್ನು ರಹಸ್ಯವಾಗಿ ವಿವಾಹವಾಗಿದ್ದಾರೆ ಎಂಬ ಮಾಹಿತಿಯನ್ನು ನೃತ್ಯ ಸಂಯೋಜಕ ನಿರ್ದೇಶಕರೊಬ್ಬರು ಬಹಿರಂಗಪಡಿಸಿದ್ದಾರೆ.

ಪ್ರಭುದೇವ ಕಳೆದ ಸೆಪ್ಟೆಂಬರ್‍ನಲ್ಲೇ ಬಿಹಾರ ಮೂಲದ ಫಿಜಿಯೋಥೆಪಿಸ್ಟ್‍ನ್ನು ರಹಸ್ಯವಾಗಿ ವಿವಾಹವಾಗಿದ್ದು, ಅವರ ವಿವಾಹ ಮಹೋತ್ಸವು ಮುಂಬೈ ನಿವಾಸ ಗ್ರೀನ್ ಎಕರೆಸ್‍ನಲ್ಲಿ ನಡೆಯಿತು ಎಂದು ಹೇಳಿದ್ದಾರೆ.

ತಮ್ಮ ಬೆನ್ನಿನ ಸಮಸ್ಯೆಗೆ ಈ ವೈದ್ಯೆ ಬಳಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಭುದೇವ್, ಪರಸ್ಪರ ಇಷ್ಟಪಟ್ಟು ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ನಡೆಸಿದ್ದರು. ಸೆಪ್ಟೆಂಬರ್‍ನಲ್ಲಿ ವಿವಾಹವಗಿದ್ದಾರೆ. ಪ್ರಸ್ತುತ ದಂಪತಿ ಚೆನ್ನೈನಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಪ್ರಭುದೇವ್ ಅವರು ಸೋದರ ಸಂಬಂಧಿಯೊಬ್ಬರನ್ನು ಮದುವೆಯಾಗಿದ್ದಾರೆ ಎಂದ ವದಂತಿಗಳು ಹಬ್ಬಿದ್ದವು.ಇದರ ಬೆನ್ನಲ್ಲೇ ಕೊರಿಯೋಗ್ರಾಫರ್ ಅವರು, ಆ ವರದಿಗಳು ಸುಳ್ಳು. ಪ್ರಭುದೇವ ಪಿಜಿಯೋತೆರಪಿಸ್ಟನ್ನು ಮದುವೆಯಾಗಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ಈ ಹಿಂದೆ ಪ್ರಭುದೇವ್ ಅವರು 1995ರಲ್ಲಿ ರಾಮಲತಾ ಅಕಾ ಲತಾ ಅವರನ್ನು ವಿವಾಹವಾಗಿದ್ದರು. ಇವರಿಗೆ ಮೂರು ಮಕ್ಕಳಿದ್ದಾರೆ. ಅವರ ಹಿರಿಯ ಮಗ 2008ರಲ್ಲಿ ಕ್ಯಾನ್ಸರ್‍ನಿಂದ ಸಾವನ್ನಪ್ಪಿದ್ದಾರೆ, 2011 ರಲ್ಲಿ ವಿಚ್ ವಿಚ್ಛೇಧನ ಪಡೆದಿದ್ದರು.

2010ರಲ್ಲಿ ವಿಲ್ಲು ಚಿತ್ರದಲ್ಲಿ ಕೆಲಸ ಮಾಡಿದ್ದ ನಯನತಾರ ಅವರೊಂದಿಗೆ ಪ್ರಭುದೇವ್ ಮದುವೆಯಾಗಿದ್ದರು. ಮೊದಲ ಪತ್ನಿ ಈ ಬಗ್ಗೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಹಲವು ವಿವಾದಗಳ ನಂತರ, 2012ರಲ್ಲಿ ಪ್ರಭುದೇವ್-ನಯನತಾರಾ ತಮ್ಮ ಸಂಬಂಧವನ್ನು ಕಡಿದುಕೊಂಡರು. ಇದಾದ ಬಳಿಕ ಪ್ರಭುದೇವ ಬಾಲಿವುಡ್‍ನಲ್ಲಿ ತಮ್ಮ ವೃತ್ತಿಜೀವನದತ್ತ ಗಮನ ಹರಿಸಿದ್ದರು.

Facebook Comments