ವಿರೋಧ ಪಕ್ಷದವರಿಗೆ ‘ಲಸಿಕೆ ಜ್ವರ’ ಬಂದಿದೆ : ಪ್ರಹ್ಲಾದ್ ಜೋಷಿ

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ, ಸೆ.19- ವಿರೋಧ ಪಕ್ಷದವರಿಗೆ ಲಸಿಕೆ ಜ್ವರ ಬಂದಿದೆ. ಎಲ್ಲದಕ್ಕೂ ವಿರೋಧ ಮಾಡೋದೇ ಅವರ ಕೆಲಸ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.ದಾವಣಗೆರೆಯಲ್ಲಿ ಮಾತನಾಡಿದ ಅವರು, ಇಷ್ಟು ದೊಡ್ಡ ಪ್ರಮಾಣದಲ್ಲಿ ಲಸಿಕೆ ನೀಡಿದ್ದು ರಾಹುಲï, ಸೋನಿಯಾ, ಪ್ರಿಯಾಂಕಾ ಗಾಂನಾ ಎಂದು ಗುಡುಗಿದರು.

ಬಿಎಸ್‍ವೈ ಮೂಲೆ ಗುಂಪು ವಿಚಾರಕ್ಕೆ ಪ್ರತಿಕ್ರಿಯಿಸಿದ ಜೋಷಿ ಅವರು, ಯಡಿಯೂರಪ್ಪ ನಮ್ಮ ಹಿರಿಯ ನಾಯಕರು. ಅವರಿಗೆ ಸಂಪೂರ್ಣ ಅಕಾರ ಇದೆ. ಅವರನ್ನು ಯಾರೂ ಮೂಲೆ ಗುಂಪು ಮಾಡಿಲ್ಲ, ರಾಜ್ಯ ಪ್ರವಾಸಕ್ಕೂ ಅಡ್ಡಿ ಇಲ್ಲ ಎಂದರು.

ಪಂಜಾಬ್‍ನಲ್ಲಿ ಅಮರೇಂದ್ರ ಸಿಂಗ್ ಎಲ್ಲಿ ರಾಹುಲï, ಸೋನಿಯಾಗಿಂತ ಪ್ರಬಲವಾಗಿ ಬೆಳೆಯುತ್ತಾರೋ ಎಂದು ಅವರನ್ನು ಅಕಾರದಿಂದ ಕಿತ್ತು ಹಾಕಿದ್ದಾರೆ. ಕೋವಿಡ್ ಸಂದರ್ಭದಲ್ಲೂ ಆರ್ಥಿಕತೆ ಚೇತರಿಕೆ ಆಗುತ್ತಿದೆ ಎಂದರು.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಯಶಸ್ವಿ ಆಗುತ್ತಿದ್ದೇವೆ. ಮುಂದುವರಿದ ದೇಶಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಹಂಚಿಕೆ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದಂದು ದೇಶದಲ್ಲಿ 2.5 ಕೋಟಿ ಲಸಿಕೆ ಹಾಕಿಸಿದ್ದೇವೆ.

ದೇಶದಲ್ಲಿ ಮೊದಲ ಡೋಸ್ ಶೇ.70ರಷ್ಟು ಜನರಿಗೆ ಕೊಟ್ಟಿದ್ದೇವೆ. ಶೇ.30ರಷ್ಟು ಜನರಿಗೆ 2ನೆ ಡೋಸ್ ಕೊಟ್ಟಿದ್ದೇವೆ. ಮೋದಿ ಜನ್ಮ ದಿನದಂದು ಲಸಿಕಾ ಆಂದೋಲನಕ್ಕೆ ವಿರೋಧ ಪಕ್ಷ ವ್ಯಂಗ್ಯ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Facebook Comments

Sri Raghav

Admin