ಕೋವಿಡ್ ನಿರ್ವಹಣೆಗೆ ಸಿಎಸ್‍ಆರ್ ಫಂಡ್‍ಗಾಗಿ ಯತ್ನಿಸುವೆ : ಪ್ರಹ್ಲಾದ್‍ ಜೋಶಿ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ,ಆ.8- ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಗೆ ಸಿಎಸ್‍ಆರ್ (ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಜವಾಬ್ದಾರಿ ನಿ) ಫಂಡ್ ಅಡಿ 7 ಕೋಟಿ ರೂ. ಒದಗಿಸಲು ಪ್ರಯತ್ನಿಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

ನಗರದಲ್ಲಿಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಐಒಸಿಎಲ, ಗೇಲ, ಟಾಟಾ ಮೋಟರ್ಸ್ ಕಂಪನಿಗಳಿಂದ ಸಿಎಸ್‍ಆರ್ ಅಡಿ 7ಕೋಟಿ ರೂ. ಸಂಗ್ರಹಿಸಲು ಪ್ರಯತ್ನಿಸುತ್ತೇವೆ.

ಈ ಹಣದಲ್ಲಿ ವೆಂಟಿಲೇಟರ್, ವೈದ್ಯೋಪಕರಣ ಖರೀದಿಗೆ ಅನುಕೂಲವಾಗುತ್ತದೆ. ಇದಲ್ಲದೆ ಇತರೆ ಉಪಕರಣಗಳ ಸೌಲಭ್ಯ ಹೆಚ್ಚಿಸಲು ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಜಿಲ್ಲಾಕಾರಿ ಜತೆ ಚರ್ಚಿಸಲಾ ಗುವುದು ಎಂದರು.

ಕಿಮ್ಸ್‍ಗೆ ಬೇರೆ ಬೇರೆ ಜಿಲ್ಲೆಯಿಂದ ರೋಗಿಗಳು ಬರುವುದರಿಂದ ಮರಣ ಪ್ರಮಾಣ, ರೋಗಿಗಳ ಸಂಖ್ಯೆ ಹೆಚ್ಚಳ ಕಂಡುಬರುತ್ತಿದೆ. ಕೊರೊನಾ ತಡೆಗೆ ಇನ್ನೂ ಯಾವ ರೀತಿಯ ಕ್ರಮ ಜರುಗಿಸಬಹುದು ಎಂಬುದನ್ನು ಚರ್ಚಿಸಲಾಗುವುದು ಎಂದು ಹೇಳಿದರು.

ಚೆನ್ನಮ್ಮ ವೃತ್ತದಲ್ಲಿ ನಿರ್ಮಾಣವಾಗಲಿರುವ ಫ್ಲೈ ಓವರ್ ನಿರ್ಮಾಣಕ್ಕೆ ಶೀಘ್ರ ಮತ್ತೊಮ್ಮೆ ಟೆಂಡರ್ ಕರೆಯಲಾಗುವುದು. ಅದೇ ರೀತಿ ಖೆಲೋ ಇಂಡಿಯಾದಡಿಯ ಯೋಜನೆಗೂ ಟೆಂಡರ್ ಕರೆಯಲಿದ್ದೇವೆ ಎಂದರು.

ಮಹದಾಯಿ ಯೋಜನೆಗಾಗಿ ರಾಜ್ಯ ಸರಕಾರ ಪರ್ಯಾಯ ಅರಣ್ಯ ಬೆಳೆಸುವ ಜಾಗ ಗುರುತಿಸಿ ಸಮಗ್ರ ವಿಸ್ತತ ವರದಿ(ಡಿಪಿಆರ್) ವರದಿ ಸಲ್ಲಿಸಬೇಕಿದೆ. ಇದಕ್ಕೆ ಕಾಲಾವಕಾಶ ಬೇಕಾಗುತ್ತದೆ. ಆದರೂ ರಾಜ್ಯ ಸರಕಾರ ಯೋಜನೆ ಅನುಷ್ಠಾನಕ್ಕೆ 500 ಕೋಟಿ ರೂ. ಅನುದಾನ ಒದಗಿಸಿದೆ ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆ ಸಮರ್ಥನೆ: ಮುಖ್ಯಮಮತ್ರಿ ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಯಸ್ಸಾಗಿರುವುದರಿಂದ ಇಬ್ಬರೂ ಹೈ ಸೆಕ್ಯೂರಿಟಿ ಝೋನ್‍ಗೆ ಬರುತ್ತಾರೆ.

ಒಂದು ವೇಳೆ ಇಬ್ಬರೂ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದರೆ ಇತರೆ ಸಾಮಾನ್ಯ ರೋಗಿಗಳಿಗೂ ಸಮಸ್ಯೆ ಉಂಟಾಗಬಹುದು. ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರರ್ಥ ಸರಕಾರಿ ಆಸ್ಪತ್ರೆ ಮೇಲೆ ನಂಬಿಕೆ ಇಲ್ಲವೆಂದಲ್ಲ ಎಂದು ಸಮರ್ಥಿಸಿಕೊಂಡರು.

Facebook Comments

Sri Raghav

Admin