ರಾಷ್ಟ್ರಪತಿ  ಆಡಳಿತವೇ ಸೂಕ್ತ 

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ,ಮೇ 29- ಕೋಮಾದಲ್ಲಿ ರುವ ರಾಜ್ಯ ಸರ್ಕಾರ ಯಾವಾಗ ಸಾವನ್ನಪ್ಪುತ್ತದೆಯೋ ಗೊತ್ತಿಲ್ಲ ಎಂದು ಸಂಸದ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಸರ್ಕಾರದ ಸಂಪೂರ್ಣ ಆಡಳಿತ ನಿಷ್ಕ್ರಿಯವಾಗಿದೆ.ಯಾವಾಗ ಸರ್ಕಾರ ಬೀಳುತ್ತದೋ ಗೊತ್ತಿಲ್ಲ ಎಂದರು.

ನಾವು ಸರ್ಕಾರ ಪತನಗೊಳಿಸುವ ಪ್ರಯತ್ನ ಮಾಡುವುದಿಲ್ಲ. ಮೈತ್ರಿ ಕಿತ್ತಾಟದಿಂದ ತನ್ನಷ್ಟಕ್ಕೆ ತಾನೇ ಬೀಳುತ್ತದೆ ಎಂದ ಅವರು, ಸರ್ಕಾರ ಇಂದಿನ ಪರಿಸ್ಥಿತಿ ನೋಡಿದರೆ ರಾಷ್ಟ್ರಪತಿ ಆಡಳಿತ ಜಾರಿ ಮಾಡುವುದೇ ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.

Facebook Comments