ಗೋ ಮಾಂಸ ನಿಷೇಧದ ಬಗ್ಗೆ ರಾಜ್ಯ ಸರ್ಕಾರ ನಿರ್ಧರಿಸಲಿ : ಪ್ರಹ್ಲಾದ್ ಜೋಷಿ

ಈ ಸುದ್ದಿಯನ್ನು ಶೇರ್ ಮಾಡಿ

ಪಣಜಿ, – ಕರ್ನಾಟಕದಲ್ಲಿ ಗೋಮಾಂಸ ನಿಷೇಧ ಮಾಡುವುದನ್ನು ಜನರ ಭಾವನೆಗಳನ್ನು ಪರಿಗಣಿಸಿ ರಾಜ್ಯ ಸರ್ಕಾರ ನಿರ್ಧರಿಸಬಹುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.

ಗೋವಾ ರಾಜಧಾನಿ ಪಣಜಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ರಾಜ್ಯಗಳಲ್ಲಿ ಗೋವಧೆ ಮತ್ತು ಗೋಮಾಂಸ ನಿಷೇಧ ಜಾರಿಯಲ್ಲಿದೆ.

ಇದನ್ನು ಕರ್ನಾಟಕದಲ್ಲೂ ಜಾರಿಗೆ ತರುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವು ಜನರ ಭಾವನೆಗಳನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳಬಹುದು ಎಂದರು. ಗೋಮಾಂಸ ಸೇವನೆಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಕೂಡ ವಿರೋಧಿಸಿದ್ದರು. ಗಾಂಧೀಜಿಯವರ ಈ ನಿಲುವಿಗೆ ನಾವು ಬದ್ಧವಾಗಿದ್ದೇವೆ ಎಂದು ಜೋಷಿ ತಿಳಿಸಿದರು.

ಬಿಜೆಪಿಯ ಗೋ ಸಂರಕ್ಷಣಾ ಪ್ರಕೋಷ್ಟ ಇತ್ತೀಚೆಗೆ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದು ರಾಜ್ಯದಲ್ಲಿ ಗೋವಧೆ ಮತ್ತು ಗೋಮಾಂಸ ನಿಷೇಧ ಜಾರಿಗೊಳಿಸಬೇಕು. 2010ರಲ್ಲಿ ಈ ಸಂಬಂಧ ಮಂಡಿಸಲಾದ ಮಸೂದೆಯನ್ನು ಕಾರ್ಯಗತಗೊಳಿಸಬೇಕು ಎಂದು ಒತ್ತಾಯಿಸಿದೆ.

Facebook Comments