ವೈದ್ಯಕೀಯ ಸೀಟ್ ನೀಡದೆ ಹಣ ದೋಚಿದ್ದಾರೆ, ಐಟಿ ದಾಳಿ ರಾಜಕೀಯ ಪ್ರೇರಿತವಲ್ಲ : ಜೋಶಿ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ,ಅ.13- ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟ್ ನೀಡದೆ ಹಣ ದೋಚುವ ಕೆಲಸವನ್ನು ಮಾಜಿ ಡಿಸಿಎಂ ಪರಮೇಶ್ವರ್ ಅವರ ಸಿದ್ಧಾರ್ಥ ಮೆಡಿಕಲ್ ಮ್ಯಾನೇಜ್‍ಮೆಂಟ್ ಮಾಡಿದೆ. ಕೋಟಿಗಟ್ಟಲೇ ಹಣ ದೋಚಿರುವುದು ಈಗಾಗಲೇ ಮಾಧ್ಯಮದಲ್ಲಿ ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ಐಟಿ ದಾಳಿ ನಡೆದಿದೆಯೇ ವಿನಃ ರಾಜಕೀಯ ಪ್ರೇರಿತವಾಗಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರ ಮೇಲಷ್ಟೇ ಐಟಿ ರೇಡ್ ಆಗುತ್ತಿಲ್ಲ. ಬಿಜೆಪಿ ಮುಖಂಡರ ಮೇಲೆ ಸಹ ರೇಡ್ ಆಗಿರುವ ಉದಾಹರಣೆ ಬಹಳ ಇವೆ.

ಕಾಂಗ್ರೆಸ್ ಮುಖಂಡರ ಹೇಳಿಕೆ ಕೇವಲ ರಾಜಕೀಯ ಎಂದರು. ಪರಮೇಶ್ವರ ಪಿ.ಎ. ಆತ್ಮಹತ್ಯೆ ಮಾಡಿಕೊಂಡಿರುವುದು ದುರ್ದೈವ. ಸಣ್ಣ ಪುಟ್ಟ ಮಕ್ಕಳಿದ್ದಾರೆ ಅದಕ್ಕೆ ನನಗೆ ಸಿಂಪತಿ ಇದೆ. ಆದರೆ ಅವರು ಆತ್ಮಹತ್ಯೆಯಂತಹ ದುಡುಕು ನಿರ್ಧಾರ ಮಾಡಬಾರದಿತ್ತು ಎಂದು ಹೇಳಿದರು. ದೊಡ್ಡ ಪ್ರಮಾಣದಲ್ಲಿ ಅವ್ಯವಹಾರವಾಗಿದೆ.

ಈ ಹಿನ್ನೆಲೆಯಲ್ಲಿ ರಮೇಶ ಅವರ ಮನೆಗೆ ಐಟಿ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಪರಮೇಶ್ವರ ಅವರ ಜೊತೆ ರಮೇಶ್ ಸುಮಾರು ವರ್ಷಗಳಿಂದ ಇದ್ದರು. ಹೀಗಾಗಿ ಐಟಿ ಅಧಿಕಾರಿಗಳು ಪ್ರಶ್ನೆ ಮಾಡಿರಬಹುದು. ಐಟಿ ಅಧಿಕಾರಿಗಳಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ನಾನು ಒಪ್ಪುವುದಿಲ್ಲ, ತನಿಖೆ ನಡೆಯುತ್ತಿದೆ. ಸತ್ಯ ಗೊತ್ತಾಗಲಿದೆ ಎಂದರು.

Facebook Comments