ಪೌರತ್ವ ಕಾಯ್ದೆ : ಕಾಂಗ್ರೆಸ್‍ನವರು ಹಿಂದೂ-ಮುಸ್ಲಿಂರ ನಡುವೆ ದ್ವೇಷ ಬಿತ್ತುವ ಕಾರ್ಯ ಮಾಡುತ್ತಿದ್ದಾರೆ : ಪ್ರಹ್ಲಾದ್ ಜೋಷಿ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಡಿ.15- ಯಾರ ನಾಗರಿಕತೆಯನ್ನು ಕಸಿದುಕೊಳ್ಳುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್‍ನವರು ಹಿಂದೂ ಮುಸ್ಲಿಂರ ನಡುವೆ ದ್ವೇಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಷಿ ಇಂದಿಲ್ಲಿ ಕಿಡಿಕಾರಿದ್ದಾರೆ.

ನಾಗರಿಕತೆಯಿಂದ ವಂಚಿತರಾದವರಿಗೆ ನಾವು ಪೌರತ್ವ ನೀಡುವ ಕೆಲಸ ಮಾಡುತ್ತಿದ್ದೇವೆ. ಈ ಹಿಂದೆಯೂ ಬೇರೆ ದೇಶಗಳಿಂದ ಬಂದವರಿಗೆ ಪೌರತ್ವ ನೀಡಲಾಗಿದೆ. ಕಾಂಗ್ರೆಶ್ ಹತಾಶೆಗೊಂಡು ಜನರಲ್ಲಿ ತಪ್ಪು ಭಾವನೆ ಮೂಡಿಸುವಂತಹ ಕಾರ್ಯಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.

ರಾಹುಲ್ ಗಾಂಧಿ ಎಂದೂ ಕೂಡ ಸಾವರ್ಕರ್ ಆಗಲು ಸಾಧ್ಯವಿಲ್ಲ. ಬದಲಾಗಿ ಉದ್ಧವ್ ಠಾಕ್ರೆ ಆಗಲು ಸಾಧ್ಯ. ಅನುಕೂಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುವಂತಹ ಅವರ ನಕಲಿ ಗಾಂಧಿಗಿರಿ ಎಲ್ಲರಿಗೂ ಗೊತ್ತು. ಕಾಂಗ್ರೆಸ್‍ನಲ್ಲಿ ಈಗಿರುವ ಗಾಂಧಿಗಳ ಬಗ್ಗೆ ಎಲ್ಲರಿಗೂ ಅವರ ಅಸಲಿತನ ತಿಳಿದಿದೆ ಎಂದು ಕಿಡಿಕಾರಿದರು.

ದೇಶಾದ್ಯಂತ ಪೌರತ್ವ ವಿಷಯವನ್ನು ಮುಂದಿಟ್ಟುಕೊಂಡು ದೊಂಬಿ, ಗಲಭೆಗಳನ್ನು ಎಬ್ಬಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಆದರೆ ದೇಶದ ಜನರಿಗೆ ಪೌರತ್ವ ಕುರಿತಾದ ಸರಿಯಾದ ಸತ್ಯತೆ ತಿಳಿದಿದೆ ಎಂದು ಹೇಳಿದರು.

ದೇಶದಲ್ಲಿರುವ ಮುಸ್ಲಿಂ ಬಾಂಧವರನ್ನು ಹೊರ ಹಾಕುವ ಪ್ರಶ್ನೆಯೇ ಇಲ್ಲ. ಪೌರತ್ವ ಕಾಯ್ದೆಯ ಕುರಿತು ಸರಿಯಾದ ತಿಳುವಳಿಕೆ ಕಾಂಗ್ರೆಸಿಗರಿಗೆ ಇಲ್ಲ ಎಂದು ತಿಳಿಸಿದರು. ಸಂಸತ್ ಅಧಿವೇಶನ ಅತ್ಯಂತ ಯಶಸ್ವಿಯಾಗಿ ಕೆಲವು ಐತಿಹಾಸಿಕ ಮಸೂದೆಗಳು ಅಂಗೀಕಾರ ಗೊಂಡಿದೆ. ಇದನ್ನು ಸಹಿಸದೆ ಕೆಲವು ವಿಪಕ್ಷ ನಾಯಕರು ಜನರನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

Facebook Comments

Sri Raghav

Admin