ಅರೇಹಳ್ಳಿಯಲ್ಲಿ ವರ್ಕ್ಔಟ್ ಆಯ್ತು ಪ್ರಜಾಕೀಯ..!

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ,ಜ.13- ಪ್ರಜಾಕೀಯ ಸ್ಥಾಪನೆ ಮಾಡುವಾಗ ಕೆಲವರು ಹೇಳಿದ್ದರು ರಾಜಕೀಯದ ಮುಂದೆ ಪ್ರಜಾಕೀಯ ವರ್ಕ್ ಆಗಲ್ಲ ಎಂದು. ಆದರೆ, ಅದನ್ನು ಅರೇಹಳ್ಳಿ ಗ್ರಾಮದ ಮತದಾರರು ಸುಳ್ಳು ಮಾಡಿದ್ದಾರೆ. ರಾಜಕೀಯದ ಮುಂದೆ ಪ್ರಜಾಕೀಯವನ್ನು ವರ್ಕ್‍ಔಟ್ ಮಾಡಿದ್ದಾರೆ ಎಂದು ನಟ, ನಿರ್ದೇಶಕ ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.

ಪ್ರಜಾಕೀಯ ತತ್ವ ಸಿದ್ದಂತಾಗಳ ಮೂಲಕ ಜಿಲ್ಲಾಯ ಚನ್ನಗಿರಿ ತಾಲ್ಲೂಕಿನ ಕಾರಿಗನೂರು ಗ್ರಾಮ ಪಂಚಾಯತಿ (4ನೇ ವಾರ್ಡ್ ಎಸ್ಸಿ ಮೀಸಲು ಕ್ಷೇತ್ರದಿಂದ ಜಯಗಳಿಸಿದ ಚೇತನ್ ಕುಮಾರ್ ಭೇಟಿಯಾಗಲು ಅರೇಹಳ್ಳಿಗೆ ಆಗಮಿಸಿದ ಉಪೇಂದ್ರ ಅವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು.

ಈ ವೇಳೆ ಮಾತನಾಡಿದ ಉಪೇಂದ್ರ. ಅರೇಹಳ್ಳಿ ಗ್ರಾಮ ಜನತೆ ಪ್ರಜಾಕೀಯ ಅಭ್ಯರ್ಥಿಯನ್ನು ಗೆಲ್ಲಿಸಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಎಲ್ಲ ಹಳ್ಳಿಗಳಿಗೆ ನಿಮ್ಮ ಮಾದರಿಯನ್ನು ಸಾರುವಂತಾಗಬೇಕು. ನೀವು ಗೆಲ್ಲಿಸಿರುವ ಚೇತನ್ ಕುಮಾರ್ ನಿಮ್ಮ ಸೇವಕ. ಈ ಗೆಲವು ಪ್ರತಿ ಹಳ್ಳಿಗೂ ಮದರಿಯಾಗಬೇಕು. ರಾಜ್ಯಕ್ಕೆ ಅರೇಹಳ್ಳಿ ಸ್ಪೂರ್ತಿ ಎಂದರು .

ಹೇಳಿದಂತೆ ಕೆಲಸ ಮಾಡೋರಿಗೆ ಮತ ಹಾಕಬೇಕು. ಇಷ್ಟು ದಿನ ಪಕ್ಷ ನೋಡಿ, ದೊಡ್ಡ ವ್ಯಕ್ತಿ ನೋಡಿ ಮತ ಹಾಕುತ್ತಿದ್ದರು. ಆದರೆ ಈಗ ಅರೇಹಳ್ಳಿ ಗ್ರಾಮಸ್ಥರು ಚೇತನ್ ಕುಮಾರ್ ಅವರ ಸಿದ್ದಂತಾ ನೋಡಿ ಮತ ಹಾಕಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಜಾಕೀಯ ಸಿದ್ದಂತಾತದ ಮೇಲೆ ಗೆದ್ದಿರುವ ಅಭ್ಯರ್ಥಿ ಚೇತನ್ ಕುಮಾರ್ ಅವರು ಆರು ತಿಂಗಳಿಗೆ ಒಮ್ಮೆ ತನ್ನ ಕೆಲಸ ಹೇಗೆ ಮಾಡಿದ್ದೇನೆ ಎಂದು ನಿಮ್ಮನ್ನು ಕೇಳುತ್ತಾರೆ. ಏನಾದ್ರು ಎರಡು ಮೂರು ಬಾರಿ ಕೆಲಸ ಚನ್ನಾಗಿ ಮಾಡಿಲ್ಲ ಎಂದರೆ ರಾಜೀನಾಮೆ ಕೊಡ್ತಾರೆ ಎಂದು ಉಪೇಂದ್ರ ಹೇಳಿದರು. ಈ ವೇಳೆ ಅಪಾರ ಅಭಿಮಾನಿಗಳು, ಗ್ರಾಮಸ್ಥರು ಹಾಜರಿದ್ದರು.

Facebook Comments