ಗೌಡರ ಬಗ್ಗೆ ಪ್ರೀತಂ ಗೌಡ ಅವಹೇಳನಕಾರಿ ಹೇಳಿಕೆಗೆ ಪ್ರಜ್ವಲ್ ಪ್ರತಿಕ್ರಿಯಿಸಿದ್ದು ಹೀಗೆ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ. ಫೆ 23 : ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಮಾತನಾಡಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಅವರೇ ಎರಡು ಬಾರಿ ಯೋಚಿಸುತ್ತಾರೆ. ಹೀಗಿರುವಾಗ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ಮೊದಲ ಬಾರಿ ಗೆದ್ದು ಹಿರಿಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಅವರ ಮನಸ್ಥಿತಿ ಎಂತ್ತದ್ದು ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ತಿರುಗೇಟು ನೀಡಿದರು.‌

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ದೇವೇಗೌಡರ ವಿರುದ್ಧ ನೀಡಿರುವ ಹೇಳಿಕೆ ಅವರ ಮನಸ್ಥಿತಿ ಹಾಗೂ ಯೋಗ್ಯತೆ ತೋರಿಸುತ್ತದೆ‌ ಗೌಡರ ಬಗ್ಗೆ ಮಾತನಾಡಬೇಕಾದರೆ ಪ್ರಧಾನಿ ಅವರೇ ಎರಡು ಬಾರಿ ಯೋಚನೆ ಮಾಡುತ್ತಾರೆ.

ಹೀಗೆ ಮಾತನಾಡೋದು ಅವರವರ ಅಳತೆ ಮತ್ತು ಭಾಷೆಗಳನ್ನ ತೋರಿಸುತ್ತದೆ‌.ಅವನ ಬಗ್ಗೆ ನಾನು ಮಾತನಾಡಿದರೆ ಪೊಳ್ಳೆದ್ದು ಹೋಗ್ತಿನಿ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಇನ್ನು ಮುಂಬರುವ ಲೋಕಸಭಾ ಚುನಾವಣೆಗೆ ಕ್ಷೇತ್ರದಿಂದ ನಾನೇ ಅಭ್ಯರ್ಥಿ ಎಂಬುದೆಲ್ಲ ಮಾಧ್ಯಮದವರ ಯೋಚನೆ ಮತ್ತು ಕಲ್ಪನೆಗಳು ಎಂದು ಪ್ರತಿಕ್ರಿಯಿಸಿದರು.

ಲೋಕಸಭಾ ಚುನಾವಣೆ ಎಂದು ನಾನು ಸಕ್ರೀಯರಾಗಿಲ್ಲ.ರಾಜ್ಯದಾದ್ಯಂತ ಹಿಂದುಳಿದವರ ಪ್ರಗತಿಗೆ ಶ್ರಮಿಸುತ್ತಿದ್ದೇನೆ. ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯಲ್ಲಿ ಹಿರಿಯ ನಾಯಕರು . ಸಚಿವರಾದ ರೇವಣ್ಣ ಹಾಗೂ ಕಾರ್ಯಕರ್ತರ ತೀರ್ಮಾನವೇ ಅಂತಿಮ ಎಂದರು.

Facebook Comments

Sri Raghav

Admin