“ಎಲೆಕ್ಷನ್ ಅಂದ್ರೆ ಏನು ಅಂತಾ ಗ್ರಾ.ಪಂ ಚುನಾವಣೆಯಲ್ಲಿ ತೋರಿಸ್ತೀನಿ” : ಪ್ರಜ್ವಲ್ ಚಾಲೆಂಜ್

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಡಿ.1- ಚುನಾವಣೆ ಎಂದರೆ ಏನು…!! ಎಂದು ಮುಂದಿನ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತೋರಿಸುತ್ತೇನೆ ಎಂದು ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಸವಾಲು ಹಾಕಿದ್ದಾರೆ. ನಗರದ ತೇಜೂರು ಬಳಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆ ಸಂಬಂಧ ಮಂತ್ರಕ್ಕೆ ಮಾವಿನಕಾಯಿ ಉದುರೊಲ್ಲ ಎಂಬ ಹಾಸನ ಶಾಸಕ ಪ್ರೀತಮ್ ಗೌಡ ಹೇಳಿಕೆಗೆ ತಿರುಗೇಟು ನೀಡಿರುವ ಅವರು ಶಿರಾ ಚುನಾವಣೆಯಲ್ಲಿ ಮಾವಿನಕಾಯಿ ಉದುರಿಸಲು ಹೋಗಿದ್ದ ಎಂದು ನಾನು ಎಂದೂ ಹೇಳಿಲ್ಲ ; ಶಿರಾದಲ್ಲಿ ಬಿಜೆಪಿಯವರು ಹಣ ಹಂಚಿ ಮತ ಹಾಕಿಸಿಕೊಂಡಿದ್ದಾರೆ.

ಇದೀಗ ಗ್ರಾಮ ಪಂಚಾಯತಿ ಚುನಾವಣೆ ಬಂದಿದ್ದು ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಿಂದ ತಕ್ಕ ಉತ್ತರ ನೀಡಲಾಗುವುದು ಎಂದು ಸವಾಲು ಹಾಕಿದರು.. ಯಡಿಯೂರಪ್ಪ ಕೆಜೆಪಿ ಮಾಡಿ 10 ಸ್ಥಾನ ತೆಗೆದುಕೊಂಡರು ಹಾಗಾದರೆ ಯಡಿಯೂರಪ್ಪ ಸೋತಿಲ್ಲವೇ… ಎಂದು ಪ್ರಸ್ನಿಸಿದ ಅವರು ಮತ್ತೊಮ್ಮೆ ವಿಧಾನಸೌಧದಲ್ಲಿ ಜೆಡಿಎಸ್ ಧ್ವಜ ಹಾರಿಸಲಿದ್ದೇವೆ… ಅಂತಹ ಕೆಲಸ ಮಾಡುತ್ತೇವೆ ಎಂದು ಪ್ರಜ್ವಲ್ ಹೇಳಿದರು.

ನಾವು ತಂದಿರುವ ಅನುದಾನಕ್ಕೆ ಶಾಸಕ ಪ್ರೀತಮ್ ಗೌಡ ಗುದ್ದಲಿ ಪೂಜೆ ಮಾಡುತ್ತಿದ್ದಾರೆ ಎಂಪಿ ಅನುದಾನದಲ್ಲಿ ಎಂಪಿ ಅವರ ಸಹಿ ಇಲ್ಲದೆ ರಸ್ತೆ ಮಂಜೂರಾತಿ ಆಗಲ್ಲ ಎಂಬುದು ಅವರಿಗೆ ಗೊತ್ತಿಲ್ಲ….!! ಅವರು ತಂದ ಅನುದಾನವನ್ನು ಬಳಸಿ ನಡೆಯುವ ಕಾಮಗಾರಿಗೆ ನಾನೇನು ಹೋಗಿ ಪೂಜೆ ಮಾಡಿಲ್ಲ ಎಂದು ಟೀಕಿಸಿದರು.

ನಾವು ತಂದಿರುವ ಅನುದಾನದಲ್ಲಿ ಈಗಾಗಲೇ ಒಂದು ಬದಿಯಿಂದ ಅರ್ಧ ಕೆಲಸ ಮುಗಿದಿದೆ ಅಂತಹ ಕಾಮಗಾರಿಗೆ ಮತ್ತೊಂದು ಬದಿಯಿಂದ ಶಾಸಕ ಪ್ರೀತಮ್ ಗೌಡ ಪೂಜೆ ಮಾಡುತ್ತಿದ್ದಾರೆ ಇಂತಹ ಪರಿಸ್ಥಿತಿ ಹಾಸನ ತಾಲೂಕಿಗೆ ಬಂದಿರುವುದು ನಮ್ಮ ದುರದೃಷ್ಟ ಎಂದು ಲೇವಡಿ ಮಾಡಿದರು. ತಾತನ ಹೆಸರಲ್ಲೇ ಎಂಪಿ ಆದೆ….!!!

ಶಾಸಕ ಪ್ರೀತಂ ಗೌಡ ಅವರು ನನಗೆ ಬುದ್ಧಿ ಹೇಳುವುದು ಬೇಡ ನನಗೆ ಬುದ್ಧಿವಾದ ಹೇಳಲು 50ವರ್ಷ ರಾಜಕಾರಣ ಮಾಡಿದ ದೇವೇಗೌಡರು- ರೇವಣ್ಣ ಇದ್ದಾರೆ .ನನ್ನ ತಾತ ದೇವೇಗೌಡರ ಹೆಸರು ಹೇಳಿಕೊಂಡೆ ನಾನು ಲೋಕಸಭಾ ಸದಸ್ಯನಾಗಿದ್ದು ಎಂದು ಗಟ್ಟಿ ಧ್ವನಿಯಲ್ಲಿ ಹೇಳುತ್ತೆನೆ ಅವರ ಹೆಸರು ಸಿದ್ಧಾಂತವನ್ನು ಇಟ್ಟುಕೊಂಡು ನಾವೆಲ್ಲ ರಾಜಕಾರಣ ಮಾಡುತ್ತಿದ್ದೇವೆ ಎಂದರು.

ಹಾಸನ ತಾಲೂಕಿನಲ್ಲಿ ಹೊಸದಾಗಿ ಶಾಸಕರಾಗಿರುವ ಅವರಿಗೆ ಸ್ವಲ್ಪ ತಿಳುವಳಿಕೆ ಕಡಿಮೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಯಲಿದ್ದಾರೆ ಎಂದು ಪ್ರಜ್ವಲ್ ಸವಾಲೆಸದರು.

Facebook Comments