ಪ್ರಕಾಶ್ ಶೆಟ್ಟಿಯವರದ್ದು ಮಾದರಿ ವ್ಯಕ್ತಿತ್ವ : ಸಿಎಂ
ಮಂಗಳೂರು, ಡಿ.26- ನಿರಂತರ ಪರಿಶ್ರಮ ಮತ್ತು ದೂರದೃಷ್ಠಿಯಿಂದ ಉದ್ಯಮ ಕ್ಷೇತ್ರದಲ್ಲಿ ಯಶಸ್ವಿ ನಾಯಕನಾಗಿ ಬೆಳೆದ ಕೆ.ಪ್ರಕಾಶ್ ಶೆಟ್ಟಿ ಸಮಾಜಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ಅವರ ಸಾಧನೆ ಮತ್ತು ವ್ಯಕ್ತಿತ್ವ ಮಾದರಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಮಂಗಳೂರು ಬಂಗ್ರಕೂಳೂರಿನ ಗೋಲ್ಡ್ಫಿಂಷ್ ಸಿಟಿ ಮೈದಾನದಲ್ಲಿ ಎಂಆರ್ಜಿ ಗ್ರೂಪ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ 60ರ ಸಂಭ್ರಮದ ಪ್ರಕಾಶಾಭಿನಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಕಾಶ್ ಶೆಟ್ಟಿ ಪ್ರಯತ್ನ ಹಾಗೂ ಪರಿಶ್ರಮದ ಮೂಲಕವೇ ಹೊಟೇಲ ಉದ್ಯಮದಲ್ಲಿ ಅದ್ವಿತೀಯ ಸಾಧಕನಾಗಿ ಕಂಗೊಳಿಸಿದ್ದಾರೆ. ಅಶಕ್ತರ ಕಣ್ಣೀರನ್ನು ಒರೆಸುವ ಮೂಲಕ ಅವರ ಸ್ಪಂದನೆ ಸಮಾಜಕ್ಕೆ ಮಾದರಿ ಎಂದರು.
ಗೃಹಸಚಿವ ಬಸವರಾಜ ಬೊಮ್ಮಾಯಿ, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ನಿಟ್ಟೆ ವಿ.ವಿ.ಕುಲಪತಿ ಎನ್.ವಿನಯಹೆಗ್ಡೆ , ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ, ಸಚಿವರಾದ ಸಿ.ಟಿ.ರವಿ, ಕೋಟಾ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಕಲಾವಿದರಾ ವಿ.ರವಿಚಂದ್ರನ್, ಯಶ್, ಹರಿಪ್ರಿಯ, ಕಾವ್ಯ ಶೆಟ್ಟಿ ಮತ್ತಿತರರು ಹಾಗೂ ಸ್ಥಳೀಯ ಶಾಸಕರು, ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇದೇ ವೇಳೆ ಪ್ರತಾಪ್ ಶೆಟ್ಟಿ ಅವರು ಬರೆದ ಅಭಿನಂದನ ಗ್ರಂಥವನ್ನು ಬಿಡುಗಡೆ ಮಾಡಲಾಯಿತು. ವಿವಿಧ ಕ್ಷೇತ್ರಗಳ ಸಾಧಕರಾದ ಡಾ.ಬಿ.ಎಂ ಹೆಗ್ಡೆ, ಡಾ.ಚಂದ್ರಶೇಖರ ಶೆಟ್ಟಿ ಬೆಂಗಳೂರು, ಡಾ.ಸುನೀತಾ ಶೆಟ್ಟಿ ಮುಂಬಾಯಿ, ಅಪ್ಪಣ್ಣ ಹೆಗ್ಡೆ ಬಸ್ರೂರು, ಜಯ ಸುವರ್ಣ, ಎಲ ಜಿ.ಸೋನ್ಸ್ , ಸಾರಾ ಅಬೂಬಕ್ಕರ್ ಶಿಮಾಂತೂರು ನಾರಾಯಣ ಶೆಟ್ಟಿ, ಕೆ.ಗೋವಿಂದ ಭಟ ಸೂರಿಕುಮೇರು, ಬನ್ನಂಜೆ ಸಂಜೀವ ಸುವರ್ಣ, ಕೋಟೇಶ್ವರ ಲಕ್ಷ್ಮೀ ನಾರಾಯಣ ಆಚಾರ್ಯ, ಬೋಳ ಸುಬ್ಬಯ್ಯ ಶೆಟ್ಟಿ, ನಾರಾಯಣ ರಾವ್ ಪಡುಬಿದ್ರಿ, ನಗರ ನಾರಾಯಣ ಶೆಣೈ ಅವರನ್ನು ಸಮ್ಮಾನಿಸಲಾಯಿತು.