Tuesday, April 16, 2024
Homeರಾಷ್ಟ್ರೀಯ200 ಕೋಟಿ ಹಣ ಜಪ್ತಿ ಬಗ್ಗೆ ಕಾಂಗ್ರೆಸ್ ಏಕೆ ಮಾತಾಡಲ್ಲ..? : ಪ್ರಹ್ಲಾದ ಜೋಶಿ

200 ಕೋಟಿ ಹಣ ಜಪ್ತಿ ಬಗ್ಗೆ ಕಾಂಗ್ರೆಸ್ ಏಕೆ ಮಾತಾಡಲ್ಲ..? : ಪ್ರಹ್ಲಾದ ಜೋಶಿ

ಹುಬ್ಬಳ್ಳಿ, ಡಿ.9- ಜಾರ್ಖಂಡ್‍ನ ಕಾಂಗ್ರೆಸ್ ಸಂಸದ ಧೀರಜ್ ಪ್ರಸಾದ್ ಸಾಹು ಅವರಿಗೆ ಸೇರಿದ್ದು ಎನ್ನಲಾದ ಉದ್ಯಮ ಸಮೂಹ ಸಂಸ್ಥೆ ಮೇಲೆ ಐ.ಟಿ ಅಧಿಕಾರಿಗಳು ದಾಳಿ ನಡೆಸಿದ್ದು, 200 ಕೋಟಿ ಹಣ ಜಪ್ತಿಗೆ ಮಾಡಿದ್ದಾರೆ. ಈ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್‍ನವರು ಯಾಕೆ ಮಾತನಾಡುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಯವರಿಗೆ ಬಹಳ ಹತ್ತಿರದವರು. ರಾಹುಲ್ ಗಾಂಧಿ ಭ್ರಷ್ಟಾಚಾರದ ಹಾಗೂ ಮೊಹಬತ್ ಕಾ ದುಖಾನ್ ಬಗ್ಗೆ ಮಾತನಾಡುತ್ತಾರೆ. ಮೊಹಬತ್ ದುಖಾನ್‍ನಲ್ಲಿ ಮೊದಲು ಸಿಗುವುದು ಭ್ರಷ್ಟಾಚಾರದ ಹಣ. ರಾಹುಲ್ ಗಾಂಧಿ ಈ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ನವರು ಭ್ರಷ್ಟಾಚಾರದ ಬಗ್ಗೆ ಒಂದು ಶಬ್ಧ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು.

ಉಚ್ಛಾಟಿತ ಸಂಸದೆ ಮಹುವಾ ಮೊಯಿತ್ರಾ ಅಂತ್ಯತ ಕೀಳಾಗಿ ಹಿಂದೂ ಬಗ್ಗೆ ಮಾತನಾಡುತ್ತಿದ್ದರು ಅಂಥವರಿಗೆ ಈಗ ದ್ರೌಪದಿ ವಸ್ತ್ರಾಪಹರಣದ ಬಗ್ಗೆ ಗೊತ್ತಾಗಿದೆ. ಭಾರತ ಸರ್ಕಾರ ಲಾಗಿನ್ ಖಾತೆ, ಅಧಿಕೃತ ಇ ಮೇಲ್ ನೀಡಿದೆ ಎಂದರು. ಉದ್ಯಮಿ ನೀಡಿದ ಸ್ಕ್ಯಾಪ್ ಬಗ್ಗೆ ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಅದರ ಬೆಲೆ 2.5 ಲಕ್ಷವಾಗಿದೆ. ಇವರು ಇಲ್ಲಿಯವರೆಗೆ ಆದಾಯ ತೆರಿಗೆ ತುಂಬಿದ್ದು, ಕೇವಲ 4 ಲಕ್ಷ ರೂ. ಇಷ್ಟೊಂದು ಹಣ ಎಲ್ಲಿಂದ ಬಂದಿದೆ ಎಂದು ಪ್ರಶ್ನಿಸಿದರು.

ಕೋಟಿ ಕೋಟಿ ಹಣ ಪತ್ತೆಯಾದ ಕಾಂಗ್ರೆಸ್ ಸಂಸದನ ಬಂಧನಕ್ಕೆ ಮರಾಂಡಿ ಒತ್ತಾಯ

ಸದನದಲ್ಲಿ ಕೇಳಿದ 60 ಪ್ರಶ್ನೆಗಳಲ್ಲಿ 45 ಹೆಚ್ಚು ಪ್ರಶ್ನೆಗಳು ಸ್ನೇಹಿತರ ಉದ್ಯಮಕ್ಕೆ ಅನುಕೂಲಕ್ಕೆ ಸಂಬಂಧಿಸಿದಾಗಿದೆ. 36 ಬಾರಿ ದೆಹಲಿಯಿಂದ ಹೊರ ದೇಶಕ್ಕೆ ಪ್ರಯಾಣ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಹಳಷ್ಟು ಅವಕಾಶ ಕೊಡಲಾಗಿತ್ತು ಎಂದು ತಿಳಿಸಿದರು.

ತೆಲಂಗಾಣದಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

ಮೊಯಿತ್ರಾ ಹಾಗೂ ಸಂಸದ ಧಿರಜ್ ಪ್ರಸಾದ್ ಸಾಹು ಭ್ರಷ್ಟಾಚಾರ ಮಾಡಿದ ಹಣ ದೇಶದ ಜನರದಾಗಿದೆ. ಅದನ್ನು ಒಂದು ಪೈಸೆ ಸಹ ನಾವು ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಟ್ವಿಟ್ ಮಾಡಿದ್ದಾರೆ ಎಂದು ಹೇಳಿದರು.

RELATED ARTICLES

Latest News