ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಮತ್ತಷ್ಟು ಕ್ಷೀಣ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.31- ತೀವ್ರ ಅನಾರೋಗ್ಯದಿಂದ ಇಲ್ಲಿನ ಸೇನಾ ಆಸ್ಪತ್ರೆಗೆ ದಾಖಲಾಗಿರುವ ಭಾರತ ರತ್ನ ಪ್ರಶಸ್ತಿ ಪುರಸ್ಕøತ ಹಾಗೂ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆರೋಗ್ಯ ಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.  ಇನ್ನಷ್ಟು ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಕಳೆದ 20 ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಪ್ರಣಬ್ ಮುಖರ್ಜಿ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ ಎಂದು ಆಸ್ಪತ್ರೆ ಇಂದು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶ್ವಾಸಕೋಶ ತೊಂದರೆಯಿಂದ ಬಳಲುತ್ತಿರುವ ಮುಖರ್ಜಿ ಅವರ ಆರೋಗ್ಯ ಸ್ಥಿತಿ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿದೆ. ಪ್ರಸ್ತುತ ಅವರು ಕೋಮ ಸ್ಥಿತಿಯಲ್ಲಿದ್ದು, ಆರೋಗ್ಯ ಸ್ಥಿತಿ ತುಂಬಾ ಬಿಗಡಾಯಿಸಿದೆ ಎಂದು ಪ್ರಕಟಣೆ ಸ್ಪಷ್ಟಪಡಿಸಿದೆ.

ಕಳೆದ ಮೂರು ವಾರಗಳಿಂದ ತಜ್ಞ ವೈದ್ಯರ ತಂಡ ಅವರಿಗೆ ನಿರಂತರವಾಗಿ ಚಿಕಿತ್ಸೆ ನೀಡುತ್ತಿದೆ. ಆದರೆ ಶ್ವಾಸಕೋಶ ಸೋಂಕಿನ ಪರಿಣಾಮ ಆರೋಗ್ಯ ಯಥಾಸ್ಥಿತಿಯಲ್ಲೇ ಇದೆ. ಸ್ವಲ್ಪವೂ ಸುಧಾರಣೆ ಕಂಡಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ದೆಹಲಿಯ ಕಂಟೋನ್ಮೆಂಟ್‍ನಲ್ಲಿರುವ ಸೇನಾ ಸಂಶೋಧನಾ ಮತ್ತು ರೆಫ್ರಲ್ ಆಸ್ಪತ್ರೆಯಲ್ಲಿ ಆ.10ರಂದು ದಾಖಲಾಗಿದ್ದ ಪ್ರಣಬ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಕೊರೊನಾಸ ಸೋಂಕು ತಗುಲಿದ್ದು, 80 ವರ್ಷ ಹಿರಿಯ ಮುತ್ಸದ್ಧಿ ಬೇಗ ಸುಧಾರಣೆಯಾಗಲಿ ಎಂದು ವಿವಿಧ ರಾಜಕೀಯ ಪಕ್ಷಗಳ ಮುಂಡರು ಪ್ರಾಥಿಸಿದ್ದಾರೆ.

Facebook Comments