ಪ್ರಣಬ್ ಮುಖರ್ಜಿ ನಿಧನಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಸಂತಾಪ

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ,ಸೆ.1- ಭಾರತದ ಮಾಜಿ ರಾಷ್ಟ್ರಪತಿಗಳೂ, ಭಾರತರತ್ನ ಪ್ರಶಸ್ತಿ ಪುರಸ್ಕøತರೂ ಆದ ಪ್ರಣಬ್ ಮುಖರ್ಜಿಯವರು ಇನ್ನಿಲ್ಲವಾಗಿರುವುದು ಅತ್ಯಂತ ದುಃಖದ ವಿಷಯ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ.ನಿರ್ಮಲಾನಂದನಾಥ ಸ್ವಾಮೀಜಿಯವರು ಸಂತಾಪ ಸೂಚಿಸಿದ್ದಾರೆ.

ಪ್ರಣಬ್ ಮುಖರ್ಜಿಯವರು ರಾಷ್ಟ್ರಪತಿಗಳಾಗುವ ಮುನ್ನ ವಿದೇಶಾಂಗ ಸಚಿವರಾಗಿ, ರಕ್ಷಣಾ ಸಚಿವರಾಗಿ ಮತ್ತು ಹಣಕಾಸು ಸಚಿವರಾಗಿ ಸಲ್ಲಿಸಿದ ಸೇವೆ ಎಂದಿಗೂ ಸ್ಮರಣೀಯ. ರಾಷ್ಟ್ರದ ಉನ್ನತಿಗೆ ಅನುಪಮ ಕೊಡುಗೆ ನೀಡಿ ರಾಷ್ಟ್ರದ ಧೀಮಂತ ರಾಜಕಾರಣಿ ಎನಿಸಿದ್ದರು.

ಭಾರತದ 13ನೇ ರಾಷ್ಟ್ರಪತಿಯಾಗಿ ಅತ್ಯುನ್ನತ ಹುದ್ದೆ ಅಲಂಕರಿಸಿ ವಿಶ್ವದಾದ್ಯಂತ ರಾಷ್ಟ್ರದ ಹಿರಿಯಮೆಯನ್ನು ಹೆಚ್ಚಿಸಿದ್ದರು. ಸದಾ ದೇಶದ ಸರ್ವಾಂಗೀಣ ಉನ್ನತಿಯ ಬಗ್ಗೆ ಚಿಂತಿಸುತ್ತಾ ಜನಮನದ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದ ಪ್ರಣಬ್ ಮುಖರ್ಜಿ ಅವರು ಇನ್ನಿಲ್ಲವಾಗಿರುವುದು ರಾಷ್ಟ್ರಕ್ಕೆ ಭರಿಸಲಾರದ ನಷ್ಟವುಂಟಾಗಿದೆ.

ಭಗವಂತನು ಅವರ ಕುಟುಂಬ ವರ್ಗ ಹಾಗೂ ಅಭಿಮಾನಿ ವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನೂ, ಶ್ರೀಯುತರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲೆಂದು ಆಶಿಸುತ್ತೇವೆ ಎಂದು ಶ್ರೀಗಳು ತಿಳಿಸಿದ್ದಾರೆ.

Facebook Comments