ಪ್ರಣಬ್ ನಿಧನಕ್ಕೆ ಚೀನಾ ಸಂತಾಪ

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್,ಸೆ.1- ಭಾರತದ ಅನುಭವಿ ರಾಜಕಾರಣಿ. ತಮ್ಮ 50 ವರ್ಷಗಳ ರಾಜಕೀಯದಲ್ಲಿ, ಅವರು ಚೀನಾ-ಭಾರತ ಸಂಬಂಧಗಳಿಗೆ ಸಕಾರಾತ್ಮಕ ಕೊಡುಗೆಗಳನ್ನು ನೀಡಿದ್ದಾರೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಹುವಾ ಚುನೈಂಗ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಭಾರತದ ಮಾಜಿ ರಾಷ್ಟ್ರಪತಿ ಮತ್ತು ಮಾಜಿ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರ ಸಾವು ಭಾರತ-ಚೀನಾ ಸ್ನೇಹಕ್ಕೆ ದೊಡ್ಡ ನಷ್ಟವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.  ಇಲ್ಲಿ 2014 ರಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರ ಭಾರತ ಭೇಟಿ ಮತ್ತು ಮುಖರ್ಜಿ ಅವರೊಂದಿಗಿನ ಭೇಟಿಯನ್ನು ಉಲ್ಲೇಖಿಸಿ, ಸಭೆಯ ನಂತರ ಉಭಯ ದೇಶಗಳು ನಿಕಟ ಅಭಿವೃದ್ಧಿ ಸಹಭಾಗಿತ್ವವನ್ನು ಬೆಳೆಸುವ ಬಗ್ಗೆ ಜಂಟಿ ಹೇಳಿಕೆಯನ್ನು ನೀಡಿವೆ.

ಇದು ಚೀನಾ, ಭಾರತದ ಸ್ನೇಹ ಮತ್ತು ಭಾರತಕ್ಕೆ ಭಾರೀ ನಷ್ಟವಾಗಿದೆ. ಅವರ ನಿಧನಕ್ಕೆ ನಾವು ತೀವ್ರ ಸಂತಾಪ ವ್ಯಕ್ತಪಡಿಸುತ್ತೇವೆ ಮತ್ತು ಭಾರತ ಸರ್ಕಾರ ಮತ್ತು ಅವರ ಕುಟುಂಬಕ್ಕೆ ಸಹಾನುಭೂತಿಯನ್ನು ಅರ್ಪಿಸುತ್ತೇವೆ ಎಂದು ಹುವಾ ಹೇಳಿದ್ದಾರೆ.

Facebook Comments