ಸ್ಯಾಂಡಲ್‍ವುಡ್ ಡ್ರಗ್ಸ್ ಗೆ ಬಾಲಿವುಡ್ ನಂಟು : ಸಂಬರಗಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.3- ಸ್ಯಾಂಡಲ್‍ವುಡ್‍ಗೆ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.ಸ್ಯಾಂಡಲ್‍ವುಡ್‍ನ ಡ್ರಗ್ಸ್ ನಂಟಿಗೂ ಬಾಲಿವುಡ್‍ಗೂ ಸಂಬಂಧವಿದೆ. ಈ ಬಗ್ಗೆ ತನಿಖೆಯಾಗಬೇಕು. ಬಾಲಿವುಡ್‍ನ ನಂಟು ಹೊಂದಿರುವ ಇಮ್ತಿಯಾಜ್ ಖಾತ್ರಿ ಎಂಬುವವರ ಬಗ್ಗೆ ತನಿಖೆ ನಡೆಸಿದರೆ ಮತ್ತಷ್ಟು ವಿಷಯಗಳು ಹೊರ ಬರಲಿವೆ ಎಂದು ಅವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಇಮ್ತಿಯಾಜ್ ಖಾತ್ರಿ ಎಂಬುವ ವರಿಗೆ ಬಾಲಿವುಡ್‍ನ ನಟ-ನಟಿಯರು, ನಿರ್ಮಾಪಕರ ನಂಟಿದೆ. ಮುಂಬೈನಲ್ಲಿ ನಡೆದ ಇವರ ಬರ್ತಡೆಗೆ ನಮ್ಮ ಕನ್ನಡದ ನಟ-ನಟಿಯರು, ರಾಜಕಾರಣಿಗಳೂ ಹೋಗಿದ್ದಾರೆ. ಈ ಬಗ್ಗೆ ತನಿಖೆಯಾದರೆ ಡ್ರಗ್ಸ್‍ನ ವಿಷಯ ಹೊರ ಬರಲಿದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಜೆಡಿಎಸ್‍ನಿಂದ ಕಾಂಗ್ರೆಸ್‍ಗೆ ಹೋಗಿ ಗೆಲುವು ಸಾಧಿಸಿದ ಶಾಸಕ ರೊಬ್ಬರ ಅದ್ಧೂರಿ ಹುಟ್ಟುಹಬ್ಬದ ಕಾರ್ಯ ಕ್ರಮದಲ್ಲಿ ಬಾಲಿವುಡ್‍ನ ನಟ-ನಟಿಯರು ಪಾಲ್ಗೊಂಡಿ ದ್ದರು. ಇದರಲ್ಲಿ ಇಮ್ತಿಯಾಜ್ ಖಾತ್ರಿ ಕೂಡ ಇದ್ದರು. ಈ ಬಗ್ಗೆ ತನಿಖೆಯಾದರೆ ಹೆಚ್ಚಿನ ಮಾಹಿತಿಗಳು ಕೂಡ ಸಿಗಲಿವೆ ಎಂದು ಹೇಳಿದ್ದಾರೆ.

# ಇಮ್ತಿಯಾಜ್ ಖಾತ್ರಿ ಯಾರು? :
2017ರಲ್ಲಿ ಮುಂಬೈನಲ್ಲಿ ಒಂದು ಹುಟ್ಟುಹಬ್ಬ ಕಾರ್ಯಕ್ರಮವಾಗುತ್ತದೆ, ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕನ್ನಡ ನಟ-ನಟಿಯರು, ರಾಜಕಾರಣಿಗಳು ಯಾರು ಎಂಬ ಎಲ್ಲಾ ವಿಷಯಗಳನ್ನು ಕೂಲಕಂಷವಾಗಿ ತನಿಖೆ ನಡೆಸಿದರೆ ಸಾಕಷ್ಟು ಮಾಹಿತಿ ಗಳು ಹೊರ ಬರಲಿದೆ ಎಂದು ಅವರು ಹೇಳಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ನನ್ನ ಕೊಡುಗೆ ಏನು ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯವರು ಕೇಳಿದ್ದಾರೆ. ನಾನು ವಾಣಿಜ್ಯಮಂಡಳಿ ಸದಸ್ಯನಲ್ಲದಿದ್ದರೂ ಮಂಡಳಿಯ ಚಟುವಟಿಕೆಗಳಿಗೆ ಪೂರವಾಕವಾಗಿ ಕೆಲಸ ಮಾಡಿದ್ದೇನೆ. ನಾನು ಕೇವಲ ಬಿಜನೆಸ್ ಮ್ಯಾನ್ ಅಲ್ಲ. ಇಂಡಸ್ಟ್ರೀಗೆ ದೊಡ್ಡ ದೊಡ್ಡ ಕೆಲಸ ಮಾಡಲು ಆಗಿಲ್ಲ. ಸಣ್ಣಪುಟ್ಟ ಕೆಲಸಗಳನ್ನು ಮಾಡಿದ್ದೇನೆ. ಚಲನಚಿತ್ರಗಳನ್ನು ವಿತರಣೆ ಕೂಡ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ನಟಿಯರಾದ ಸಂಜನಾ, ರಾಗಿಣಿ ಅವರ ಬಗ್ಗೆ ನಾನು ಹೆಚ್ಚು ಮಾತನಾಡು ವುದಿಲ್ಲ ಎಂದು ಹೇಳಿದರು. ಒಟ್ಟಾರೆ ಚಂದನವನದ ಡ್ರಗ್ಸ್ ನಂಟು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈಗ ಬಾಲಿವುಡ್‍ನೊಂದಿಗೆ ಬೆಸೆದುಕೊಂಡಿರುವುದಲ್ಲದೆ, ಪ್ರಭಾವಿ ರಾಜಕಾರಣಿಗಳ ನಂಟಿರುವುದು ಕೂಡ ಬೆಳಕಿಗೆ ಬರತೊಡಗಿದೆ. ತನಿಖೆ ತೀವ್ರಗೊಂಡಂತೆ ಮತ್ತಷ್ಟು ಮುಖಗಳು ಅನಾವರಣ ಗೊಳ್ಳು ವುದರಲ್ಲಿ ಅನುಮಾನವಿಲ್ಲ .

Facebook Comments