ತಿಂಗಳೊಳಗೆ ತೀರ್ಪು ಬರುವ ವಿಶ್ವಾಸ : ಅನರ್ಹ ಶಾಸಕ ಪ್ರತಾಪ್‍ಗೌಡ ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.13- ನಮ್ಮ ಅನರ್ಹತೆಯ ಅರ್ಜಿ ವಿಚಾರಣೆ ವಿಳಂಭ ವಾಗುತ್ತಿರುವುದು ಬೇಸರವಾಗಿದೆ. ಆದರೂ ತಿಂಗಳೊಳಗೆ ತೀರ್ಪು ಬರುವ ವಿಶ್ವಾಸವಿದೆ ಎಂದು ಅನರ್ಹ ಶಾಸಕ ಪ್ರತಾಪ್‍ಗೌಡ ಪಾಟೀಲ್ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ನಮ್ಮ ಅರ್ಜಿ ವಿಚಾರಣೆಗೆ ಬರುವ ವಿಶ್ವಾಸವಿದೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಸಧ್ಯಕ್ಕೆ ನಾನು ನನ್ನ ಕ್ಷೇತ್ರಕ್ಕೆ ಹೋಗುತ್ತಿದ್ದೇನೆ ಎಂದರು.

ನಾವು ಯಾರು ಸಭೆ ಸೇರುತ್ತಿಲ್ಲ, ನಾನಂತೂ ಕ್ಷೇತ್ರಕ್ಕೆ ಹೋಗುತ್ತಿದ್ದೇನೆ. ಅನರ್ಹ ಶಾಸಕರಲ್ಲಿ ಇನ್ಯಾರಾದರೂ ಸಭೆ ಸೇರುತ್ತಿದ್ದಾರೆಯೇ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಕೋರ್ಟ್‍ನಲ್ಲಿ ಇಂದು ನಮ್ಮ ಪ್ರಕರಣ ಲಿಸ್ಟ್ ಆಗಬಹುದು. ಈ ತಿಂಗಳೊಳಗೆ ತೀರ್ಪು ಬರುವ ವಿಶ್ವಾಸವಿದೆ ಎಂದು ಪ್ರತಾಪ್‍ಗೌಡ ಪಾಟೀಲ್ ಹೇಳಿದರು.

Facebook Comments