ಸಿದ್ದರಾಮಯ್ಯರನ್ನು ಹಾಡಿಹೊಗಳಿದ ಪ್ರತಾಪ್ ಸಿಂಹಗೆ ಮಾಜಿ ಸಚಿವ ಮಹದೇವಪ್ಪ ಟಾಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಫೆ.18- ಸಂಸದ ಪ್ರತಾಪ್ ಸಿಂಹ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೆಲಸವನ್ನು ಟ್ವಿಟರ್‍ನಲ್ಲಿ ಹಾಡಿ ಹೊಗಳಿದ್ದರೆ, ಇತ್ತ ಸಂಸದರ ಟ್ವಿಟರ್‍ಗೆ ಮಾಜಿ ಸಚಿವ ಡಾ.ಮಹದೇವಪ್ಪ ಪ್ರತಿಕ್ರಿಯಿಸಿ ಟಾಂಗ್ ನೀಡಿದ್ದಾರೆ.

ಪ್ರತಾಪ್ ಸಿಂಹ, ಸಿದ್ದರಾಮಯ್ಯ ಅವರನ್ನು ಟಿಟ್ವರ್‍ನಲ್ಲಿ ಹೊಗಳಿದ್ದು, ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಆಧುನಿಕ ವ್ಯವಸ್ಥೆ ಕಲ್ಪಿಸಿರುವುದಕ್ಕೆ ಧನ್ಯವಾದವನ್ನು ಅರ್ಪಿಸಿದ್ದಾರೆ. ತಮ್ಮ ಸಂಬಂಧಿಯೊಬ್ಬರನ್ನು ಕಾಣಲು ಪ್ರತಾಪ್ ಸಿಂಹ ಮೈಸೂರಿನ ಜಯದೇವ ಆಸ್ಪತ್ರೆಗೆ ಭೇಟಿ ನೀಡಿದಾಗ ಆಸ್ಪತ್ರೆಯಲ್ಲಿರುವ ಅತ್ಯಾಧುನಿಕ ವ್ಯವಸ್ಥೆಯನ್ನು ಕಂಡು ಸಂತಸಗೊಂಡು ಟ್ವಿಟರ್‍ನಲ್ಲಿ ಸಿದ್ದರಾಮಯ್ಯ ಅವರನ್ನು ಸಾಹೇಬರೇ ಎಂದು ಉಲ್ಲೇಖಿಸಿ ಧನ್ಯವಾದ ಹೇಳಿದ್ದಾರೆ.

ಅಲ್ಲದೆ ಶಾಸಕರಾಗಿದ್ದ ವಾಸು, ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್, ಡಾ.ಸದಾನಂದಗೌಡ ಅವರಿಗೂ ಸಹ ಧನ್ಯವಾದ ಹೇಳಿದ್ದಾರೆ. ಸಂಸದರ ಈ ಪೋಸ್ಟ್ ಗೆ ಮಾಜಿ ಸಚಿವ ಡಾ.ಮಹದೇವಪ್ಪ ತಮ್ಮ ಫೇಸ್‍ಬುಕ್ ಅಕೌಂಟ್‍ನಲ್ಲಿ ಟಾಂಗ್ ನೀಡಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಗರೇ ಸುಳ್ಳು ಪ್ರಚಾರ ಮಾಡಿದ್ದರು.

ಶವ ರಾಜಕೀಯ ಮಾಡಿ ಅಪಪ್ರಚಾರ ನಡೆಸಿದ್ದರು. ಈಗ ಸಿದ್ದರಾಮಯ್ಯನವರ ಸಾಧನೆಯನ್ನು ಶ್ಲಾಘಿಸಿದ್ದಾರೆ. ಇದು ಬಿಜೆಪಿಗರ ಇಬ್ಬಗಿತನವನ್ನು ತೋರುತ್ತದೆ. ಸಿದ್ದರಾಮಯ್ಯನವರನ್ನು ಈಗ ಹೊಗಳಿರುವ ವ್ಯಕ್ತಿ ಮುಂದಿನ ಚುನಾವಣೆಯಲ್ಲಿ ವರಸೆ ತೆಗೆಯಬಹುದು. ಜನಪರವಾಗಿ ಅಭಿವೃದ್ಧಿ ಕೆಲಸ ಮಾಡುವುದು ನಮ್ಮ ಕರ್ತವ್ಯ ಎಂದುತಿಳಿಸಿದ್ದಾರೆ.

Facebook Comments

Sri Raghav

Admin