ಅಪೌಷ್ಟಿಕತೆ ತಡೆಯಲು “ಪೋಷಣೆ ಅಭಿಯಾನ ಯೋಜನೆ” ಸಹಕಾರಿ : ಪ್ರೀತಂ ಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ : ಅಪೌಷ್ಟಿಕತೆಯಿಂದ ಬಳಲುವ ತಾಯಿ ಹಾಗೂ ಮಗುವಿನ ಮಾಹಿತಿಯನ್ನು ಸಮರ್ಪಕವಾಗಿ ದಾಖಲಿಸಿ ಉತ್ತಮ ಸಲಹೆ ನೀಡಲು ಪೋಷಣೆ ಅಭಿಯಾನ ಯೋಜನೆ ಸಹಕಾರಿಯಾಗಲಿದೆ ಎಂದು ಶಾಸಕ ಪ್ರೀತಮ್ ಗೌಡ ತಿಳಿಸಿದರು .

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ -ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ” ಪೋಷಣೆ ಅಭಿಯಾನ ಯೋಜನೆ”ಯಡಿ ಅಂಗನವಾಡಿ ಕಾರ್ಯಕರ್ತರಿಗೆ ಮೊಬೈಲ್ ಫೋನ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೊರೋನಾ ಹಾವಳಿ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯರು ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸುವ ಅವಶ್ಯಕತೆ ಇದೆ ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಇದರ ಬಗ್ಗೆ ಪ್ರತಿನಿತ್ಯ ಸೂಕ್ತ ಮಾಹಿತಿಯನ್ನು ದಾಖಲಿಸಲು ಮೊಬೈಲ್ ಸಹಕಾರಿಯಾಗಲಿದೆ ಎಂದರು.

ಕೊರೋನಾ ಹಾವಳಿ ಸಂದರ್ಭದಲ್ಲಿ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಸೇವೆ ಪ್ರಶಂಸನೀಯ ಎಂದ ಅವರು ಸಮಾಜದ ಸ್ವಾಸ್ಥ್ಯ ಕಾಪಾಡುವುದರೊಂದಿಗೆ ನೀವು ಕೂಡ ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಸೇವೆ ಒದಗಿಸುವಂತೆ ಸಲಹೆ ನೀಡಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಶಿಶು ಹಾಗೂ ತಾಯಿಯ ಅಪೌಷ್ಟಿಕತೆ ಬಗ್ಗೆ ಸೂಕ್ತ ಮಾಹಿತಿಯನ್ನು ದಾಖಲಿಸುವುದು ಹೆಚ್ಚು ಅವಶ್ಯಕ ಇದರಿಂದ ಅವರಿಗೆ ಸೂಕ್ತ ಸೌಲಭ್ಯವನ್ನು ಇಲಾಖೆವತಿಯಿಂದ ಒದಗಿಸಲು ಸಾಧ್ಯವಾಗಲಿದೆ ಮೊಬೈಲ್ ಮೂಲಕ ಮಾಹಿತಿಯನ್ನು ಪ್ರತಿದಿನ ದಾಖಲಿಸುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಎಲ್ಲ ರೀತಿಯ ಸೌಲಭ್ಯ ದೊರೆಯಲು ಸಹಕಾರಿಯಾಗಲಿದೆ ಎಂದರು.

# ಕೊರೋನಾ ಪರೀಕ್ಷೆ ಕಡ್ಡಾಯ;
ಹದಿನೈದು ದಿವಸಕ್ಕೊಮ್ಮೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಎಲ್ಲರೂ ಕೊರೋನಾ ಪರೀಕ್ಷೆ ಮಾಡಿಸುವುದು ಅಗತ್ಯವಾಗಿದೆ ಇದರಿಂದ ಕೊರೋನಾ ಹೆಚ್ಚು ಹರಡುವಿಕೆಯನ್ನು ತಡೆಯಬಹುದು.
ಕೊವಿಡ್ ಕೇಂದ್ರದಲ್ಲಿ ದಾಖಲಾದ ಸೋಂಕಿತರು 48 ಗಂಟೆಯಲ್ಲಿ ಶೇಕಡ 50ರಷ್ಟು ಮಂದಿಯ ಸಾವು ಸಂಭವಿಸಿದೆ ಇದಕ್ಕೆ ಪ್ರಮುಖ ಕಾರಣ ಕೊರೋನಾ ಪರೀಕ್ಷೆ ಸರಿಯಾದ ಸಮಯದಲ್ಲಿ ಮಾಡಿಸದೇ ಇರುವುದು ಎಂದು ಹೇಳಿದ ಅವರು ಹೆಚ್ಚು ಮಂದಿ ಕೊರೋನಾ ಸೋಂಕು ತಗುಲಿದ ಹಾಗೂ ಹೆಚ್ಚು ಬಾದಿಸಿದ ನಂತರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ಇದರಿಂದ ಸಾವು ಹೆಚ್ಚು ಸಂಭವಿಸಿದೆ ಎಂದು ಮಾಹಿತಿ ನೀಡಿದರು .
ಆದ್ದರಿಂದ ಹೆಚ್ಚು ಮಂದಿ ಕೊರೋನಾ ಪರೀಕ್ಷೆಗೆ ಒಳಪಡುವ ಮೂಲಕ ಕೊರೊನಾ ಸೋಂಕಿನಿಂದ ಪಾರಾಗುವಂತೆ ಸಲಹೆ ನೀಡಿದರು.
ಕೊರೋನಾ ಪರೀಕ್ಷೆ ಮಾಡಿಸುವಂತೆ ಈಗಾಗಲೇ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದು ಹೆಚ್ಚು ಜನನಿಬಿಡ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ತರಕಾರಿ – ಹೂವು ಮಾರಾಟಗಾರರು ಹಾಗೂ ಸರ್ಕಾರಿ ಕಚೇರಿಗಳ ಅಧಿಕಾರಿಗಳು ಕಡ್ಡಾಯವಾಗಿ ಪರೀಕ್ಷೆ ಮಾಡಿಸುವುದು ಅಗತ್ಯವಾಗಿದೆ .ಎಲ್ಲರೂ ಸಹ ಆರ್ ಪಿಸಿಆರ್ ಪರೀಕ್ಷೆ ಮಾಡಿಸುವುದು ಹೆಚ್ಚು ಅವಶ್ಯಕ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Facebook Comments

Sri Raghav

Admin