ಮಹಿಳೆಯರನ್ನು ಕಾಡುವ ಗರ್ಭನಂಜಿಗೆ ಕಾರಣವೇನು..? ಪರಿಹಾರವೇನು..?

ಈ ಸುದ್ದಿಯನ್ನು ಶೇರ್ ಮಾಡಿ

Pregnent--02

ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಗರ್ಭಿಣಿ ಯಾರಾದರೂ ಮೃತಪಟ್ಟರೆ ಆಕೆಗೆ ನಂಜು ಉಂಟಾಗಿತ್ತು. ಹಾಗಾಗಿ ಸಾವನ್ನಪ್ಪಿದ್ದಾಳೆ ಎಂದು ಹೇಳುತ್ತಿದ್ದರು.
ಗರ್ಭನಂಜು ಎಂದರೆ ಆಂಗ್ಲಭಾಷೆಯಲ್ಲಿ ಪ್ರಿಕ್ಲಾಂಪ್ಸಿಯಾ ಎಂಬ ಹೆಸರು. ಗರ್ಭಿಣಿಯರು ಪ್ರಾರಂಭದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
ಗರ್ಭನಂಜು ಉಂಟಾದರೆ ತಾಯಿ-ಮಗು ಇಬ್ಬರಿಗೂ ತೊಂದರೆ. ಸಾವು ತಂದುಕೊಳ್ಳಬೇಕಾಗುತ್ತದೆ. ನಂಜು ಅಥವಾ ಪ್ರಿಕ್ಲಾಂಪ್ಸಿಯಾ (ಪಿಇ) ಬಗ್ಗೆ ಜಾಗೃತಿ ಅತ್ಯಗತ್ಯ.

ಮಹಿಳೆಯರಲ್ಲಿ ಗರ್ಭಾವಸ್ಥೆ ಸಾಮಾನ್ಯ ದೈಹಿಕ ಸ್ಥಿತಿ ಎಂದು ಪರಿಗಣಿಸಿದರೂ ಕೂಡ ಅದರಲ್ಲಿ ತಾಯಿ ಮತ್ತು ಇನ್ನೂ ಜನಿಸದ ಮಗುವಿಗೆ ಆರೋಗ್ಯ ಅಪಾಯಗಳು ಇರುತ್ತವೆ.

ಎಕ್ಲಾಂಪ್ಸಿಯಾ ಗಂಭೀರವಾದ ವೈದ್ಯಕೀಯ ಸ್ಥಿತಿಯಾಗಿದ್ದು, ಗರ್ಭಾವಸ್ಥೆ ಸಂದರ್ಭದಲ್ಲಿ ಮಹಿಳೆಯರ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಗರ್ಭಾವಸ್ಥೆಯ ಅಂತಿಮ ಹಂತಗಳಲ್ಲಿ ಇದು ಕಂಡು ಬರುತ್ತದೆಯಲ್ಲದೆ, ತಾಯಿ ಮತ್ತು ಮಗುವಿಗೆ ಸೆಳವು, ಸೆಳೆತ ಮತ್ತು ಸಾವು ಉಂಟು ಮಾಡಬಹುದು.

ಎಕ್ಲಾಂಪ್ಸಿಯಾ ಪ್ರಮುಖ ಆತಂಕಕ್ಕೆ ಕಾರಣವಾಗಿದ್ದು, ಈ ಕುರಿತು ಜಾಗೃತಿ ಬಹಳ ಮುಖ್ಯವಾಗಿರುತ್ತದೆ ಎಂದು ಅಂಕಿ-ಅಂಶಗಳು ತಿಳಿ ಸಿವೆ.
ಜಾಗತಿಕವಾಗಿ ಶೇ.14ರಷ್ಟು ತಾಯಂದಿರ ಸಾವು ಇದರಿಂದಲೇ ಉಂಟಾಗುತ್ತದೆ.

ಎಕ್ಲಾಂಪ್ಟಿಕ್ ಸೆಳವುಗಳಿಂದ ಬಳಲುವ ಬಹುತೇಕ ಪ್ರತಿ 50 ಮಹಿಳೆಯರಲ್ಲಿ ಒಬ್ಬರು ಮೃತಪಡುತ್ತಾರೆ ಮತ್ತು ಶೇ.23ರಷ್ಟು ಜನರಿಗೆ ಕೃತಕ ಉಸಿರಾಟದ ಅಗತ್ಯವಿರುತ್ತದೆ.

ಶೇ.35ರಷ್ಟು ಜನರಿಗೆ ಪಲ್ಮನರಿ ಎಡಿಮಾ, ಮೂತ್ರಪಿಂಡ ವೈಫಲ್ಯ, ಡಿಸ್ಸೆಮಿನೇಟೆಡ್ ಇಂಟ್ರಾವ್ಯಾಸ್ಕ್ಯೂಲರ್ ಕೋಯಾಜುಲೇಷನ್, ಹೆಲ್‍ಪ್ ಸಿಂಡ್ರೋಮ್, ಅಕ್ಯೂಟ್ ರೆಸ್ಪರೇಟರಿ ಡಿಸ್ಟ್ರೆಸ್ ಸಿಂಡ್ರೋಮ್, ಸ್ಟ್ರೋಕ್ ಅಥವಾ ಹೃದಯಾಘಾತ ಕಾಣಿಸಿಕೊಳ್ಳುತ್ತದೆ.

ಎಕ್ಲಾಂಪ್ಸಿಯಾದ 14 ಪ್ರಕರಣಗಳ ಪೈಕಿ ಸುಮಾರು ಒಂದರಲ್ಲಿ ಶಿಶು ಜನನವಾಗುವ ಮುನ್ನ ಸಾಯುವುದು ಅಥವ ಜನಿಸಿದ ನಂತರ ಮೃತಪಡುವುದು ಕಂಡುಬರುತ್ತದೆ. ಎಕ್ಲಾಂಪ್ಸಿಯಾ ಎಂದರೆ ಗ್ರೀಕ್‍ನಲ್ಲಿ ದಿಢೀರನೆ ಎಂದರ್ಥ. ಇದನ್ನು ಸಾಮಾನ್ಯವಾಗಿ ಸಿಡಿಲಿನ ಹೊಡೆತಕ್ಕೆ ಹೋಲಿಸಲಾಗುತ್ತದೆ. ಆದರೆ, ವಾಸ್ತವ್ಯದಲ್ಲಿ ಇದಕ್ಕೂ ಮುನ್ನ ಪ್ರೀ-ಎಕ್ಲಾಂಪ್ಸಿಯಾ(ಪಿಇ) ಸ್ಥಿತಿ ಕಂಡುಬರುತ್ತದೆ.

ಇದು 20 ವಾರಗಳ ನಂತರ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಈ ಕೆಳಗಿನ ಲಕ್ಷಣಗಳು ಇದನ್ನು ಸೂಚಿಸುತ್ತದೆ. ಈ ಲಕ್ಷಣಗಳನ್ನು ಕುರಿತು ಜಾಗೃತಿ ಹೊಂದಿದ್ದು, ವೈದ್ಯರಿಗೆ ಈ ಚಿಹ್ನೆಗಳ ಕುರಿತು ವರದಿ ಮಾಡುವುದು ಆರೋಗ್ಯಕರ ಗರ್ಭಾವಸ್ಥೆಗೆ ಮುಖ್ಯ.

ಉನ್ನತ ರಕ್ತದೊತ್ತಡ(ಹೈಪರ್ ಟೆನ್ಷನ್), ನಿಮ್ಮ ಮೂತ್ರದಲ್ಲಿ ಪ್ರೊಟೀನ್(ಪ್ರೊೀಟಿನ್ಯೂರಿಯಾ), ಊತ(ಎಡಿಮಾ)(ಮುಖ, ಕೈ ಮತ್ತು ಕಾಲು, ಪಾದಗಳು), ಪದೇ ಪದೇ ತಲೆನೋವು, ವಾಕರಿಕೆ ಅಥವಾ ವಾಂತಿ, ಹೊಟ್ಟೆಯ ಭಾಗ ಮತ್ತು ಬೆನ್ನಿನ ಕೆಳಭಾಗದ ನೋವು, ತೂಕದ ಹೆಚ್ಚಳ(ಪ್ರತಿ ವಾರಕ್ಕೆ 2.5 ಕೆಜಿಗೂ ಹೆಚ್ಚು).

ಈ ಲಕ್ಷಣಗಳುಗರ್ಭಿಣಿಯರಲ್ಲಿ ಇದ್ದರೆ ಪಿಇ ಇರಲೇಬೇಕು ಎಂದರ್ಥವಲ್ಲ. ಆದರೆ, ಇವು ಆತಂಕಕ್ಕೆ ಕಾರಣವಾಗಿದ್ದು, ತಕ್ಷಣ ವೈದ್ಯಕೀಯ ಮËಲ್ಯೀಕರಣದ ಅಗತ್ಯವಿರುತ್ತದೆ. ವಿಷಯವೆಂದರೆ ಪಿಇ ಹೊಂದಿರುವ ಕೆಲವು ಮಹಿಳೆಯರಲ್ಲಿ ಈ ಯಾವುದೇ ಲಕ್ಷಣಗಳು ಕಾಣುವುದೇ ಇಲ್ಲ.

ವಿಶ್ವವ್ಯಾಪಿಯಾಗಿ ಶೇ.2ರಿಂದ 8ರ ವರೆಗಿನ ಮಹಿಳೆಯರ ಮೇಲೆ ಪಿಇ ಪರಿಣಾಮ ಉಂಟುಮಾಡುತ್ತದೆ. ಭಾರತದಲ್ಲಿ ಈ ಕುರಿತು ಯಾವುದೇ ನಿರ್ದಿಷ್ಟ ಅಂಕಿ-ಅಂಶಗಳು ಲಭ್ಯವಿಲ್ಲ. ಆದರೆ, ಆಸ್ಪತ್ರೆ ಆಧಾರಿತ ಅಧ್ಯಯನಗಳ ಪ್ರಕಾರ ಶೇ.5ರಿಂದ 15ರಷ್ಟು ಎಂದು ಅಂದಾಜು ಮಾಡಲಾಗಿದೆ. ಗರ್ಭಾವಸ್ಥೆಯಲ್ಲಿನ ಮೂರು ಸಾವುಗಳ ಪೈಕಿ ಒಂದು ಮತ್ತು 1000 ಹೆರಿಗೆಗಳಲ್ಲಿ 43 ನವಜಾತ ಸಾವುಗಳಿಗೆ ಪಿಇ ಮತ್ತು ಅದಕ್ಕೆ ಸಂಬಂಧಿಸಿದ ಸಂಕೀರ್ಣತೆಗಳು ಕಾರಣ ಎನ್ನಲಾಗಿದೆ.

ಪ್ಲೆಸೆಂಟಾ (ಭ್ರೂಣಕ್ಕೆ ಪೋಷಣೆ ನೀಡುವ ಅಂಗ)ದೊಂದಿಗೆ ಮುಖ್ಯವಾಗಿ ಸಹಯೋಗ ಹೊಂದಿರುವ ಪ್ರಿಕ್ಲಾಂಪ್ಸಿಯಾದ ಹಲವು ಪ್ರಕರಣಗಳಿವೆ. ಗರ್ಭಾವಸ್ಥೆಯ ಆರಂಭದಲ್ಲಿ ರಕ್ತನಾಳಗಳು ಪ್ಲೆಸೆಂಟಾಗೆ ರಕ್ತ ಪೂರೈಸಲು ಅಭಿವೃದ್ಧಿ ಹೊಂದುತ್ತವೆ.

ಪಿಇ ಹೊಂದಿರುವ ಮಹಿಳೆಯರಲ್ಲಿ ಈ ಅಭಿವೃದ್ಧಿಗೆ ಅಡ್ಡಿಯುಂಟಾಗುತ್ತದೆ. (ಹಾರ್ಮೋನ್‍ಗಳಿಗೆ ಅಸಾಧಾರಣ ಪ್ರತಿಕ್ರಿಯೆಯಿಂದಾಗಿ) ಇದರಿಂದ ಅವು ಹೆಚ್ಚು ತೆಳ್ಳಗಾಗಿ, ಅವುಗಳ ಮೂಲಕ ಹರಿಯುವ ರಕ್ತದ ಪ್ರಮಾಣವು ಕಡಿಮೆಯಾಗುತ್ತದೆ. ಗರ್ಭಾವಸ್ಥೆಯ ಸಂಕೀರ್ಣ ತೊಂದರೆಯಾಗಿ ಪಿಇ ಅಭಿವೃದ್ಧಿ ಹೊಂದುತ್ತದೆ.

ಕುಟುಂಬದಲ್ಲಿ ಯಾರಿಗಾದರೂ ಇದ್ದಲ್ಲಿ ಆ ಮನೆಯ ಗರ್ಭಿಣಿಯಲ್ಲೂ ಇತಿಹಾಸ ಇದ್ದಲ್ಲಿ ನಿಮಗೆ ಪಿಇ ಉಂಟಾಗುವ ಅಪಾಯ ಹೆಚ್ಚಿರುತ್ತದೆ. ಈಗಾಗಲೇ ತೀವ್ರ ದೀರ್ಘಕಾಲದ ಉನ್ನತ ರಕ್ತದೊತ್ತಡ ಇದ್ದಲ್ಲೂ ಪಿಇ ಉಂಟಾಗುವ ಅಪಾಯ ಉಂಟು. ಮೊದಲ ಗರ್ಭಾವಸ್ಥೆ ಸಂದರ್ಭದಲ್ಲಿ ಪಿಇ ಉಂಟಾಗುವ ಅಪಾಯ ಇನ್ನೂ ಹೆಚ್ಚಿರುತ್ತದೆ.

ಅತ್ಯಂತ ಎಳೆಯ ವಯಸ್ಸಿನ ಗರ್ಭಿಣಿಯರಲ್ಲಿ ಜತೆಗೆ 40 ವರ್ಷ ಮೇಲ್ಪಟ್ಟ ಗರ್ಭಿಣಿಯರಲ್ಲಿ ಹಾಗೂ ಬೊಜ್ಜು ಮೈ ಇದ್ದರೂ ಪಿಇ ಅಪಾಯ ಹೆಚ್ಚಿರುತ್ತದೆ. ಅವಳಿಗಳು, ತ್ರಿವಳಿಗಳು ಮತ್ತು ಅದಕ್ಕೂ ಹೆಚ್ಚಿನ ಶಿಶುಗಳಿಗೆ ಜನ್ಮ ನೀಡಲಿರುವ ಮಹಿಳೆಯರಲ್ಲಿ ಪಿಇ ಕಾಣಿಸುವುದು.

ಗರ್ಭಿಣಿಯಾಗುವ ಮುನ್ನ ಕೆಲವು ನಿರ್ದಿಷ್ಟ ಸ್ಥಿತಿಗಳನ್ನು ಹೊಂದಿರುವುದು ಅಂದರೆ ದೀರ್ಘಕಾಲದ ಉನ್ನತ ರಕ್ತದೊತ್ತಡ, ಮೈಗ್ರೇನ್, ಟೈಪ್-1 ಅಥವ ಟೈಪ್-2 ಮಧುಮೇಹ, ಮೂತ್ರಪಿಂಡ ರೋಗ, ಲೂಪಸ್-ಸ್ಥಿತಿಗಳು ಕೂಡ ಪಿಇ ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಕೃತಕ ಗರ್ಭಧಾರಣೆ ಅಂದರೆ ಇನ್ ವಿಟ್ರೊ ಫರ್ಟಿಲೈಸೇಷನ್ ಮೂಲಕ ಗರ್ಭಾವಸ್ಥೆ ಹೊಂದಿದರೂ ಪಿಇ ಅಪಾಯವಿದೆ.

ವಿಸ್ತಾರವಾದ ಸಂಶೋಧನೆ ಮತ್ತು ವೈದ್ಯ ಕ್ಷೇತ್ರದಲ್ಲಿನ ಅಭಿವೃದ್ಧಿಗಳಿಂದಾಗಿ ಗರ್ಭಾವಸ್ಥೆಯನ್ನು ನಿರ್ವಹಿಸಲು ಮತ್ತು ಅಪಾಯ ತಡೆಯಲು ಹಲವಾರು ಜೈವಿಕ ಗುರುತುಗಳು ಲಭ್ಯವಾಗಿವೆ.

ಪಿಇನ ರೋಗನಿಧಾನ ಮತ್ತು ನಿರ್ವಹಣೆಗಳನ್ನು ಎರಡು ಗಮನಾರ್ಹ ಅಧ್ಯಯನಗಳು ಕ್ರಾಂತಿಕಾರಿ ರೀತಿಯಲ್ಲಿ ಬದಲಾಯಿಸಿವೆ. ಮೊದಲನೆಯದು ಎಎಸ್‍ಪಿಆರ್‍ಇ (ಸಾಕ್ಷಿಗಾಗಿ ಆಸ್ಪರಿನ್-ಆಧಾರಿತ ಪಿಇ ತಡೆಯುವ ಕ್ರಮ)ಉನ್ನತ ಜನ್ಮಪೂರ್ವ ಪರೀಕ್ಷೆ ಮತ್ತು ಸರಳ ಹಸ್ತಕ್ಷೇಪಗಳಿಂದ ಅಲ್ಲದೆ ಶೀಘ್ರ ಪರೀಕ್ಷೆಗಳಿಂದ ಪಿಇಯನ್ನು ತಡೆಯುವುದು ಸಾಧ್ಯವಿದೆ.

ತಾಯಿಯ ರಕ್ತದ ಮೇಲೆ ಪ್ರಯೋ ಗಾಲಯದ ತನಿಖೆಯ ಮಿಶ್ರಣಗಳನ್ನು ಬಳಸಿ ಶೀಘ್ರ ಪತ್ತೆ ಮಾಡಲಾಗುತ್ತದೆ. ಇವುಗಳಲ್ಲಿ -ಪಿಎಪಿಪಿ ಎ (ಪ್ರೆಗ್ನೆನ್ಸಿ ಅಸೋಸಿಯೇಟೆಡ್ ಪ್ಲಾಸ್ಮಾ ಪ್ರೊಟೀನ್ ಎ) ಮತ್ತು ಪಿಐಜಿಎಫ್(ಪ್ಲೆಸೆಂಟಲ್ ಗ್ರೋಥ್ ಫ್ಯಾಕ್ಟರ್) ಜತೆಗೆ ಯುಎಪಿಐ(ಯುಟೇರಿನ್ ಆರ್ಟರಿ ಪಲ್ಸೇಟಿವಿಟಿ ಇಂಡೆಕ್ಸ್)ನ ಅಲ್ಟ್ರಾಸೌಂಡ್ ಪರೀಕ್ಷೆ ಫಲಿತಾಂಶಗಳು ಮತ್ತು 11-13.6 ವಾರಗಳ ಗರ್ಭಾವಸ್ಥೆಯಲ್ಲಿ ರಕ್ತದೊತ್ತಡದ ರೀಡಿಂಗ್‍ಗಳು ನಡೆಸುವುದರಿಂದ ಶೇ.85ರಿಂದ 90ರಷ್ಟು ಪ್ರಕರಣಗಳಲ್ಲಿ ಪಿಇಯನ್ನು ಪತ್ತೆ ಮಾಡಬಹುದು.

ಕಡಿಮೆ ಡೋಸ್‍ನ ಆಸ್ಪಿರಿನ್(75-150ಎಂಜಿ/ದಿನಕ್ಕೆ) ನೀಡುವ ವೈದ್ಯಕೀಯ ಹಸ್ತಕ್ಷೇಪವನ್ನು ನಿದ್ರೆಗೆ ಮುನ್ನ ಕೈಗೊಳ್ಳುವುದರಿಂದ ಪಿಇನ ಸಂಕೀರ್ಣ ತೊಂದರೆಗಳನ್ನು ಬಹುತೇಕ ಮಹಿಳೆಯರಲ್ಲಿ ತಡೆಯಬಹುದು.

ಎರಡನೆಯದೆಂದರೆ ಪ್ರೊಗ್ನೋಸಿಸ್(ಪಿಇ ಶಂಕಿತ ಗರ್ಭಿಣಿಯರಲ್ಲಿ ಅಲ್ಪಕಾಲೀನ ಫಲಿತಾಂಶದ ಭವಿಷ್ಯ ಹೇಳುವ ಅಧ್ಯಯನ) ಇದು ಎಸ್‍ಎಫ್‍ಎಲ್‍ಟಿ-1 ಮತ್ತು ಪಿಐಜಿಎಫ್ ರೇಶಿಯೊಗಳಂತಹ ಸರಳ ರಕ್ತ ಪರೀಕ್ಷೆಗಳು ಏನು ಮಾಡಬಹುದು ಎಂಬ ಸಾಕ್ಷಿಯನ್ನು ಈ ಕೆಳಗೆ ಪೂರೈಸಲಾಗಿದೆ.

20 ವಾರಗಳ ನಂತರ ಲಕ್ಷಣಗಳ ಅಭಿವೃದ್ಧಿ ಕಂಡಿರುವ ಮಹಿಳೆಯರಲ್ಲಿ ಪಿಇ ಸಂಬಂಧಿತ ವ್ಯತಿರಿಕ್ತ ತಾಯಂದಿರ ಮತ್ತು ಭ್ರೂಣಗಳ ಫಲಿತಾಂಶವನ್ನು ಗುರುತಿಸಿ ಭವಿಷ್ಯ ಹೇಳುವುದು. ಸತತ ಗಮನ ಹರಿಸುವುದರಿಂದ ಅನಗತ್ಯ ಆಸ್ಪತ್ರೆ ವಾಸ್ತವ್ಯ ಕಡಿಮೆಯಾಗುವುದರ ಖಾತ್ರಿ ಮಾಡಿಕೊಳ್ಳುವುದು ಮತ್ತು ಹೆರಿಗೆಯ ಸಮಯದ ನಿರ್ಣಯ ಕೈಗೊಳ್ಳುವಂತಹ ಮುಖ್ಯವಾದ ಗರ್ಭಾವಸ್ಥೆಗೆ ಸಂಬಂಧಿತ ನಿರ್ಣಯ ಕೈಗೊಳ್ಳಲು ನೆರವು ನೀಡುತ್ತದೆ.

12 ಗರ್ಭಿಣಿಯರಲ್ಲಿ ಒಬ್ಬರಿಗೆ ಪಿಇ ಪರಿಣಾಮ ಉಂಟು ಮಾಡುತ್ತದೆ ಎಂದು ಪ್ರಿಕ್ಲಾಂಪ್ಸಿಯಾ ಫೌಂಡೇಷನ್ ಅಂದಾಜು ಮಾಡಿದೆ. ವೈದ್ಯಕೀಯ ಸೌಲಭ್ಯಗಳಿಗೆ ಸಂಪರ್ಕ ಪೂರೈಸುವುದು ಮತ್ತು ಈ ಕುರಿತು ಜಾಗೃತಿ ಮೂಡಿಸುವುದರಿಂದ ಸಾವು- ನೋವಿನ ಪ್ರಮಾಣ ಕಡಿಮೆಯಾಗುವುದಲ್ಲದೆ, ಆರೋಗ್ಯಕರ ತಾಯಿ ಮತ್ತು ಆರೋಗ್ಯ ಶಿಶು ಮಾಡಿಕೊಳ್ಳಲು ಸಾಧ್ಯವಾಗಲಿದೆ.

Facebook Comments

Sri Raghav

Admin