ಬಾಲಿವುಡ್ ನಟಿ ಪ್ರೀತಿ ಜಿಂಟಾ ಕುಟುಂಬದ ಸದಸ್ಯರೆಲ್ಲರಿಗೂ ಕೊರೊನಾ ಪಾಸಿಟಿವ್

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜ.11- ಬಾಲಿವುಡ್ ನಟಿ ಮತ್ತು ಐಪಿಎಲ್ ಕಿಂಗ್ಸ್ 11 ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ಕುಟುಂಬದ ಸದಸ್ಯರೆಲ್ಲರಿಗೂ ಕೊರೊನಾ ಸೋಂಕು ಪಾಸಿಟೀವ್ ಎಂದು ತಿಳಿದು ಬಂದಿದೆ. ಜಿಂಟಾ ಅವರ ತಾಯಿ, ಸಹೋದರ, ಅತ್ತಿಗೆ ಅವರ ಮಕ್ಕಳು ಮತ್ತು ಚಿಕ್ಕಪ್ಪ ಅವರು ಕೋವಿಡ್-19 ಪರೀಕ್ಷೆಗೊಳಗಾಗಿದ್ದು, ಪ್ರಯೋಗಾಲದ ವರದಿ ಪ್ರಕಾರ ಎಲ್ಲರಿಗೂ ಕೊರೊನಾ ಸೋಂಕು ತಗುಲಿದೆ.

ಪ್ರಸ್ತುತ ಅಮೆರಿಕದಲ್ಲಿರುವ ಪ್ರೀತಿ ಜಿಂಟಾ ಇನ್‍ಸ್ಟಾ ಗ್ರಾಂನಲ್ಲಿ ಕುಟುಂಬದ ಎಲ್ಲ ಸದಸ್ಯರಿಗೂ ಕೋವಿಡ್-19 ಸೋಂಕು ತಗುಲಿರುವುದು ತೀವ್ರ ಕಳವಳ ತಂದೊಡ್ಡಿ, ನನ್ನ ನಿದ್ರೆಗೆಡಿಸಿತ್ತು. ಆದರೆ ಇತ್ತೀಚಿನ ವೈದ್ಯಕೀಯ ವರದಿ ಪ್ರಕಾರ ಎಲ್ಲರಿಗೂ ಸೂಕ್ತ ಚಿಕಿತ್ಸೆ ದೊರೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವುದು ನನಗೆ ನೆಮ್ಮದಿ ತಂದಿದೆ ಎಂದಿದ್ದಾರೆ.

ಮೂರು ವಾರಗಳ ಹಿಂದೆ ನನ್ನ ಚಿಕ್ಕಪ್ಪ, ತಾಯಿ, ಸಹೋದರ ಮತ್ತು ಅವರ ಕುಟುಂಬದ ಸದಸ್ಯರಿಗೆ ಕೋವಿಡ್-19 ಸೋಂಕು ತಗಲಿದೆ ಎಂದು ತಿಳಿದು ಬಂದಿತ್ತು.  ಐಸಿಯು, ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ಪಡೆಯುತ್ತಿರುವ ದೃಶ್ಯಗಳನ್ನು ನೋಡಿ ಗಾಬರಿಗೊಂಡಿದ್ದೆ. ನಾನು ಅಮೆರಿಕದಲ್ಲಿರುವುದರಿಂದ ಏನು ಮಾಡುವ ಸಾಧ್ಯವಾಗಲಿಲ್ಲ. ದೇವರ ದಯೆಯಿಂದ ಇಂದು ಚೇತರಿಸಿಕೊಳ್ಳುತ್ತಿರುವ ಸುದ್ದಿ ತಿಳಿದು ಬಂದಿದೆ ಎಂದು ಹೇಳಿಕೊಂಡಿದ್ದಾರೆ.

Facebook Comments