ಚಿತ್ರೀಕರಣ ಸ್ಥಗಿತಗೊಂಡಿರುವುದರಿಂದ ಖಿನ್ನತೆಗೊಳಗಾಗಿದ್ದ ಕಿರುತೆರೆ ನಟಿ ಆತ್ಮಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಮೇ 27- ಕೊರೊನಾ ಹಾವಳಿಯಿಂದ ಚಿತ್ರೀಕರಣಗಳು ಸ್ಥಗಿತಗೊಂಡಿರುವುದರಿಂದ ಖಿನ್ನತೆಗೊಳಗಾಗಿದ್ದ ಕಿರುತೆರೆ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರೇಕ್ಷಾ ಮೆಹ್ತಾ ಆತ್ಮಹತ್ಯೆ ಮಾಡಿಕೊಂಡ ಉದಯೋನ್ಮುಖ ನಟಿ. ಕ್ರೈಂಪೆಟ್ರೋಲ್ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದ ಪ್ರೇಕ್ಷಾ ಲಾಕ್‍ಡೌನ್ ದಿಂದಾಗಿ ಹಲವು ದಿನಗಳಿಂದ ಮನೆಯಲ್ಲಿದ್ದು ಖಿನ್ನತೆಗೆ ಒಳಗಾಗಿದ್ದರು.

ಈ ನಡುವೆ ಪ್ರೇಕ್ಷಾ ತಮ್ಮ ಮನೆಯ ರೂಮಿನ ಬಾಗಿಲನ್ನು ಹಾಕಿಕೊಂಡು ನೇಣಿಗೆ ಶರಣಾಗಿದ್ದಾಳೆ, ಬೆಳಗ್ಗೆ ಆಕೆಯ ತಂದೆ ಬಂದು ನೋಡಿದಾಗ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಪ್ರೇಕ್ಷಾ ಸಾವಿಗೆ ಖಿನ್ನತೆಯೇ ಕಾರಣ ಎಂದು ಮನೆಯವರು ಹೇಳಿದರೆ, ಆಕೆಯ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಉದಯೋನ್ಮುಖ ನಟಿ ಆತ್ಮಹತ್ಯೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದನ್ನು ಹರಿಬಿಟ್ಟಿದ್ದು ಅದರಲ್ಲಿ ಕನಸುಗಳು ನುಚ್ಚು ನೂರಾದರೆ ತುಂಬಾ ನೋವಾಗುತ್ತದೆ ಎಂದು ಬರೆದಿಕೊಂಡಿದ್ದಾರೆಯಾದರೂ ಆತ್ಮಹತ್ಯೆಗೆ ಬೇರೆಯಾದ ಕಾರಣಗಳು ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.  ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments