ಸುರಿನಾಮ್ ಅಧ್ಯಕ್ಷರ ಜೊತೆ ರಾಷ್ಟ್ರಪತಿ ಕೊವಿಂದ್ ಯೋಗಾಸನ

ಈ ಸುದ್ದಿಯನ್ನು ಶೇರ್ ಮಾಡಿ

Kovind--01

ಪರಮರಿಬೊ, ಜೂ.21-ಲ್ಯಾಟಿನ್ ಅಮೆರಿಕ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸುರಿನಾಮ್ ಅಧ್ಯಕ್ಷ ಡಿಸೈಲ್ ಡೆಲಾನೋ ಬೌಟೆರ್ಸ್ ಅವರೊಂದಿಗೆ ಯೋಗಾಸನಗಳನ್ನು ಮಾಡಿದರು. ಅಂತಾರಾಷ್ಟ್ರೀಯ ಯೋಗ ದಿನದಂದು ಎರಡು ದೇಶಗಳ ಮುಖ್ಯಸ್ಥರು ಯೋಗಾಭ್ಯಾಸ ಮಾಡಿದ್ದು ಇದೇ ಮೊದಲು.  ಸುರಿನಾಮ್ ರಾಜಧಾನಿ ಪರಮರಿಬೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋವಿಂದ್ ಮತ್ತು ಡೆಲಾನೋ ಅವರು ಒಟ್ಟಿಗೆ ಯೋಗಾಭ್ಯಾಸ ಮಾಡಿ ಗಮನಸೆಳೆದರು. ಈ ಇಬ್ಬರು ನಾಯಕರು ಯೋಗಾಸನದ ಮಹತ್ವದ ಬಗ್ಗೆ ಟ್ವಿಟ್‍ನಲ್ಲಿ ಪ್ರಸ್ತಾಪಿಸಿದ್ದಾರೆ.

Facebook Comments

Sri Raghav

Admin