ಪ್ರವಾಹದಿಂದ ತತ್ತರಿಸಿದ ಕೇರಳದಲ್ಲೀಗ ಓಣಂ, ಗಣ್ಯರ ಶುಭಾಷಯ, ಶೀಘ್ರ ಚೇತರಿಕೆಗೆ ಹಾರೈಕೆ

ಈ ಸುದ್ದಿಯನ್ನು ಶೇರ್ ಮಾಡಿ

Onam--01

ತಿರುವನಂತಪುರಂ (ಪಿಟಿಐ), ಆ.25-ಶತಮಾನದಲ್ಲೇ ಕಂಡು ಕೇಳರಿಯದ ವಿನಾಶಕಾರಿ ಜಲಪ್ರಳಯದಿಂದ ತತ್ತರಿಸಿ ಈಗಷ್ಟೇ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಕೇರಳದಲ್ಲೀಗ ಓಣಂ ಹಬ್ಬದ ಖುಷಿ. ಆದರೆ ತಮ್ಮವರನ್ನು ಹಾಗೂ ಆಸ್ತಿಪಾಸ್ತಿಗಳನ್ನು ಕಳೆದುಕೊಂಡವರಿಗೆ ಈಗ ಭವಿಷ್ಯದ ಚಿಂತೆ. ಆದಾಗ್ಯೂ ಸಾಂಪ್ರದಾಯಿಕವಾಗಿ ಓಣಂ ಆಚರಣೆ ನಡೆಯುತ್ತಿದೆ.

ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು, ಡಾ. ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕೇರಳ ರಾಜ್ಯಪಾಲ ಪಿ. ಸತ್ಯಶಿವನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಚಿತ್ರರಂಗದ ಖ್ಯಾತನಾಮರು ಕೇರಳ ಜನತೆಗೆ ಓಣಂ ಶುಭಾಶಯ ಕೋರಿದ್ದಾರೆ.

ಮಹಾ ಮಳೆ ಮತ್ತು ಭೀಕರ ಪ್ರವಾಹದಿಂದ ನಲುಗಿರುವ ಕೇರಳ ಜನತೆಯ ದುಃಖ-ನೋವು ಶೀಘ್ರವೇ ದೂರಾಗಲಿ. ಪ್ರಕೃತಿ ವಿಕೋಪದ ದುಸ್ವಪ್ನದಿಂದ ಶೀಘ್ರ ಚೇತರಿಸಿಕೊಂಡು ಹೊಸ ಜೀವನ ಉಜ್ವಲ ಭವಿಷ್ಯ ಹೊಂದಲಿ. ದೇಶದ ಜನತೆ ನಿಮ್ಮೊಂದಿಗಿದೆ ಎಂದು ಅಭಯ ನೀಡಿದ್ದಾರೆ.

Facebook Comments

Sri Raghav

Admin