ಹೋಳಿ ಹಬ್ಬ: ಗಣ್ಯಾತಿಗಣ್ಯರ ಶುಭಾಶಯ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.21- ಬಣ್ಣಗಳ ಹಬ್ಬ ಹೋಳಿ ಪ್ರಯುಕ್ತ ರಾಷ್ಟ್ರಪತಿ ರಮಾನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು , ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ದೇಶದ ಜನರಿಗೆ ಶುಭ ಕೋರಿದ್ದಾರೆ.

ಬಣ್ಣಗಳ ಹಬ್ಬ ಹೋಳಿ ದುಷ್ಟರ ವಿರುದ್ದ ಶಿಷ್ಟರು ಜಯ ಸಾಧಿಸಿದ ಮಹತ್ವದ ದಿನ. ಈ ಹಬ್ಬವು ದೇಶದ ಜನರ ಬದುಕಿನಲ್ಲಿ ಶಾಂತಿ, ನೆಮ್ಮದಿ ಸಮೃದ್ಧಿ ಮತ್ತು ಸೌಹಾರ್ದತೆ ನೀಡಲಿ ಎಂದು ಗಣ್ಯರು ಶುಭ ಕೋರಿದ್ದಾರೆ.

ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು, ಡಾ.ಮನಮೋಹನಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರು ದೇಶದ ಜನತೆಗೆ ಹೋಳಿ ಶುಭಾಶಯ ಕೋರಿದ್ದಾರೆ.

Facebook Comments