Thursday, April 25, 2024
Homeಕ್ರೀಡಾ ಸುದ್ದಿಸಾತ್ವಿಕ್-ಚಿರಾಗ್ ಜೋಡಿಗೆ ಲಭಿಸಿದ ಖೇಲ್‍ರತ್ನ ಪ್ರಶಸ್ತಿ

ಸಾತ್ವಿಕ್-ಚಿರಾಗ್ ಜೋಡಿಗೆ ಲಭಿಸಿದ ಖೇಲ್‍ರತ್ನ ಪ್ರಶಸ್ತಿ

ನವದೆಹಲಿ, ಜ.9- ವಿವಿಧ ಕ್ರೀಡೆಗಳಲ್ಲಿ ಅಸಮಾನ್ಯ ಸಾಧನೆ ತೋರಿರುವ ದೇಶದ ಕ್ರೀಡಾಪಟುಗಳಿಗೆ ಇಲ್ಲಿನ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ವಿತರಿಸಿದ್ದಾರೆ. ಈ ಕಾರ್ಯಕ್ರಮವು ಅಗಸ್ಟ್ 29 ರಂದೇ ನಡೆಯಬೇಕಾಗಿತ್ತಾದರೂ ಚೀನಾದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 8ರವರೆಗೆ ಆಯೋಜಿಯಿಸಿದ್ದ ಏಷ್ಯಾನ್ ಗೇಮ್ಸ್‍ನಿಂದಾಗಿ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.

ಖೇಲ್ ರತ್ನ ಪ್ರಶಸ್ತಿ ಪಡೆದ ಚಿರಾಗ್- ಸಾತ್ವಿಕ್ ಜೋಡಿ:
2023ರಲ್ಲಿ ಅತ್ಯುತ್ತಮ ಸಾಧನೆ ತೋರಿ ಬ್ಯಾಡ್ಮಿಂಟನ್‍ನಲ್ಲಿ ನಂಬರ್ 1 ಸ್ಥಾನಕ್ಕೇರಿದ್ದ ಚಿರಾಗ್ ಶೆಟ್ಟಿ ಹಾಗೂ ಸತ್ವಿಕ್‍ಸಾಯಿರಾಜ್ ರಂಕಿರೆಡ್ಡಿ ಅವರು ಪ್ರತಿಷ್ಠಿತ ಧ್ಯಾನ್‍ಚಂದ್ ಖೇಲ್‍ರತ್ನ ಪ್ರಶಸ್ತಿಯನ್ನು ಗೆದ್ದು ಸಂಭ್ರಮಿಸಿದ್ದಾರೆ.

ಕಳೆದ ವರ್ಷದಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆಯರಾದ ಸಾತ್ವಿಕ್- ಚಿರಾಗ್ ಜೋಡಿಯು ಏಷ್ಯಾನ್ ಗೇಮ್ಸ್‍ನಲ್ಲಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದಲ್ಲದೆ, ಏಷ್ಯಾನ್ ಚಾಂಪಿಯನ್‍ಷಿಪ್ , ಇಂಡೋನೇಷ್ಯಾ ಓಪನ್ ಸಿರೀಸ್ 1000 ಸೇರಿದಂತೆ ಹಲವು ಟೂರ್ನಿಗಳನ್ನು ಗೆಲ್ಲುವ ಮೂಲಕ ದೇಶದ ಕೀರ್ತಿಯನ್ನು ವಿಶ್ವದೆಲ್ಲೆಡೆ ಹೆಚ್ಚಿಸಿದ್ದು ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ಖೇಲ್ ರತ್ನ ಪ್ರಶಸ್ತಿ ನೀಡಲಾಗಿದೆ.

ಅರ್ಜುನ ಪ್ರಶಸ್ತಿಗೆ ಭಾಜನರಾದ ಶಮಿ:
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಪ್ರತಿಮ ಪ್ರದರ್ಶನ ತೋರಿ ಟೀಮ್ ಇಂಡಿಯಾವನ್ನು ಫೈನಲ್ ಹಂತಕ್ಕೆ ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ವೇಗಿ ಮೊಹಮ್ಮದ್ ಶಮಿ ಸೇರಿದಂತೆ ವಿವಿಧ ಕ್ರೀಡಾ ಕ್ಷೇತ್ರಗಳಲ್ಲಿ ತಾವು ತೋರಿದ ಅತ್ಯುನ್ನತ ಸಾಧನೆಗಾಗಿ 26 ಮಂದಿ ಅಥ್ಲಿಟ್‍ಗಳು ದೇಶದ ಅತ್ಯುತ್ತಮ ಎರಡನೇ ಕ್ರೀಡಾ ಪ್ರಶಸ್ತಿಯಾದ ಅರ್ಜುನ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ರಕ್ಷಣಾ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾದ ಸಮೀರ್ ಕುಮಾರ್ ನೇಮಕ

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಿಂದ ಮೊಹಮ್ಮದ ಶಮಿ 24 ವಿಕೆಟ್ ಪಡೆದಿದ್ದರು.
ದೇಶದ ಅತ್ಯುತ್ತಮ ಕ್ರೀಡಾ ಪ್ರಶಸ್ತಿ ಆಗಿರುವ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿಯು 25 ಲಕ್ಷ ಬಹುಮಾನವನ್ನು ಹೊಂದಿದ್ದರೆ, ಅರ್ಜುನ ಹಾಗೂ ದ್ರೋಣಚಾರ್ಯ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರಿಗೆ 15 ಲಕ್ಷ ರೂ. ಲಭಿಸಲಿದೆ.

ಪವನ್‍ಕುಮಾರ್ ಶೆರಾವತ್‍ಗೆ ಅರ್ಜುನ ಪ್ರಶಸ್ತಿ:
ಚೀನಾದ ಹ್ಯಾಂಗ್‍ಝೌನಲ್ಲಿ ನಡೆದಿದ್ದ ಏಷ್ಯಾನ್ ಗೇಮ್ಸ್‍ನಲ್ಲಿ ಅಪ್ರತಿಮ ಪ್ರದರ್ಶನ ತೋರಿ ತಂಡಕ್ಕೆ ಚಿನ್ನದ ಪದಕ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬೆಂಗಳೂರು ಬುಲ್ಸ್‍ನ ಮಾಜಿ ನಾಯಕ ಪವನ್‍ಕುಮಾರ್ ಶೆರಾವತ್ ಕೂಡ ಅರ್ಜುನ ಪ್ರಶಸ್ತಿ ಪಡೆದು ಸಂಭ್ರಮಿಸಿದ್ದಾರೆ.

RELATED ARTICLES

Latest News