ವಿವಾದದ ಕಿಡಿ ಹೊತ್ತಿಸಿದ ಪ್ರಧಾನಿ‌ ಮೋದಿ ಫೋಟೋ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ,ಸೆ,22- ವಿವಾದದ ಕಿಡಿ ಹೊತ್ತಿಸಿದ ಪ್ರಧಾನಿ‌ ಮೋದಿ ಫೋಟೋ ಗ್ರಾ.ಪಂ.ಕಚೇರಿಯಲ್ಲಿ ಅನುಮತಿ ಪಡೆಯದೆ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಅಳವಡಿಕೆ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನೂರನಕ್ಕಿ ಗ್ರಾಪಂ ನಲ್ಲಿ ಈ ಘಟನೆ ನಡೆದಿದೆ.

ಗ್ರಾಪಂ ಸದಸ್ಯರಾದ ಭಾರ್ಗವಿ ಅವರ ಪತಿ ಮಧು, ಚಂದ್ರಕಲಾ ಅವರ ಪತಿ ಗಿರೀಶ್ ಮತ್ತು ಬೆಂಬಲಿಗರು ಫೋಟೋ ಅಳವಡಿಕೆ ಮಾಡಿದ್ದಾರೆ ‌ಎಂದು ಆರೋಪಿಲಾಗಿದೆ. ಗ್ರಾಪಂ ಪಿಡಿಒ, ಅಧ್ಯಕ್ಷರು, ಇತರೆ ಸದಸ್ಯರ ಅನುಮತಿ ಪಡೆಯದೆ ಫೋಟೊ ಹಾಕಲಾಗಿದೆ ಎಂದು ಕೆಲ ಸದಸ್ಯರು ದೂರಿದ್ದಾರೆ.

ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ತಮ್ಮ ವಿರುದ್ಧ ಸುಳ್ಳು ಕೇಸ್ ದಾಖಲಿಸಲಾಗಿದೆ ಎಂದು ಪಂಚಾಯ್ತಿಯ 12 ಸದಸ್ಯರು ಆರೋಪಿಸಿದ್ದಾರೆ. ನಾವು ಸ್ಥಳದಲ್ಲಿ ಇಲ್ಲದಿದ್ದರೂ ನಮ್ಮ ಮೇಲೆ ಜಾತಿ ನಿಂದನೆ ಕೇಸ್ ಹಾಕಲಾಗಿದೆ ಎಂದು ಅದ್ಯಕ್ಷ, ಉಪಾದ್ಯಕ್ಷ ಮತ್ತು ಸದಸ್ಯರು ಎಸ್ಪಿಗೆ ದೂರು ನೀಡಿದ್ದಾರೆ.

ಗ್ರಾಪಂ ಗೆ ಬಂದು ದುರ್ವರ್ತನೆ ತೋರಿದ ಇಬ್ಬರು ಸದಸ್ಯೆಯರ ಪತಿಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು‌ ಆಗ್ರಹಿದ್ದಾರೆ.
ಜೆಡಿಎಸ್, ಬಿಜೆಪಿ ನಡುವೆ ಪ್ರಧಾನಿ ಮೋದಿ ಫೋಟೊ ಕಿಡಿ ಹೊತ್ತಿಸಿದೆ. ಮಾಜಿ ಸಚಿವ ರೇವಣ್ಣ ಪ್ರತಿನಿಧಿಸಿವ ಹೊಳೆನರಸೀಪುರ ಕ್ಷೇತ್ರ ವ್ಯಾಪ್ತಿಯ ಗ್ರಾ.ಪಂ‌ ನಲ್ಲಿ ರಾಜಕೀಯ ಮೇಲಾಟ ನಡೆದಿದೆ. ಫೋಟೋ ವಿಚಾರವಾಗಿ ಕೇಸ್ ಕೌಂಟರ್ ಕೇಸ್ ಕೊಟ್ಟು ಕಿತ್ತಾಟ ನಡೆದಿದೆ.

ಜೆಡಿಎಸ್ ಬೆಂಬಲಿತ 12 ಸದಸ್ಯರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿದ್ದರೆ ಅತ್ತ ಬಿಜೆಪಿ ಬೆಂಬಲಿತ ಸದಸ್ಯೆಯರ ಪತಿಯರ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Facebook Comments

Sri Raghav

Admin