ಸಿಂಗಪುರ್’ನಲ್ಲಿ ಅಮೆರಿಕ ರಕ್ಷಣಾ ಸಚಿವರ ಜತೆ ಪ್ರಧಾನಿ ಮೋದಿ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

Modi-Meet--01

ಸಿಂಗಪುರ್, ಜೂ.2-ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಸಿಂಗಪುರ್‍ನಲ್ಲಿ ಅಮೆರಿಕ ರಕ್ಷಣಾ ಸಚಿವ ಜಿಮ್ ಮ್ಯಾಟಿಸ್ ಅವರನ್ನು ಭೇಟಿಯಾಗಿ ಔಪಚಾರಿಕ ಚರ್ಚೆ ನಡೆಸಿದರು. ಅಮೆರಿಕ ಸೇನೆ ಭಾರತದ ಪ್ರಾಮುಖ್ಯತೆ ಬಗ್ಗೆ ಸಂದೇಶ ನೀಡುವ ಸಾಂಕೇತಿಕ ಕ್ರಮವಾಗಿ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್, ಪೆಸಿಫಿಕ್ ಕಮ್ಯಾಂಡ್‍ಗೆ ಇಂಡೋ-ಪೆಸಿಫಿಕ್ ಕಮ್ಯಾಂಡ್ ಎಂದು ನಾಮಕರಣ ಮಾಡಿದ ಮೂರು ದಿನಗಳ ನಂತರ ಪ್ರಧಾನಿ-ರಕ್ಷಣಾ ಸಚಿವರ ಭೇಟಿ ಮಹತ್ವ ಪಡೆದುಕೊಂಡಿದೆ.

ಮೂರು ರಾಷ್ಟ್ರಗಳ ಪ್ರವಾಸದ ಕೊನೆಯಲ್ಲಿ ಸಿಂಗಪುರ್‍ಗೆ ಆಗಮಿಸಿದ ಅವರು ವಾರ್ಷಿಕ ಶ್ರಾಂಗಿಲಾ ಮಾತುಕತೆ ಸಂದರ್ಭದಲ್ಲಿ ಮ್ಯಾಟಿಸ್ ಅವರೊಂದಿಗೆ ಪ್ರತ್ಯೇಕವಾಗಿ ಮೋದಿ ಮಾತುಕತೆ ನಡೆಸಿದರು. ಪರಸ್ಪರ ಹಿತಾಸಕ್ತಿಗೆ ಸಂಬಂಧಪಟ್ಟ ಭದ್ರತಾ ವಿಚಾರಗಳು ಹಾಗೂ ಜಾಗತಿಕ ಹಿತಾಸಕ್ತಿಗಳಿಗೆ ಪೂರಕವಾದ ವಿಷಯ ಕುರಿತು ಮೋದಿ-ಮ್ಯಾಟಿಸ್ ಸಮಾಲೋಚನೆ ನಡೆಸಿದರು. ನಂತರ ಶಾಂಗ್ರಿಲಾ ಸಭೆಯಲ್ಲಿ ಪ್ರಧಾನ ಭಾಷಣ ಮಾಡಿದ ಮೋದಿ, ಭಾರತ ಮತ್ತು ಚೀನಾ ಪರಸ್ಪರ ನಂಬಿಕೆ ಮತ್ತು ವಿಶ್ವಾಸದೊಂದಿಗೆ ಕಾರ್ಯನಿರ್ವಹಿಸಿದಾಗ ಏಷ್ಯಾ ಖಂಡಕ್ಕೆ ಮಾತ್ರವಲ್ಲದೇ ಇಡೀ ವಿಶ್ವಕ್ಕೆ ಒಳಿತಾಗುತ್ತದೆ ಎಂದು ಹೇಳಿದರು. ಮುಕ್ತ ವ್ಯಾಪಾರಕ್ಕಾಗಿ ಏಷ್ಯಾ ಸಾಗರ ಪ್ರದೇಶಗಳಲ್ಲಿ ನೌಕಾಯಾನ ಸ್ವಾತಂತ್ರ್ಯವನ್ನು ಖಾತರಿಗೊಳಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.

Facebook Comments

Sri Raghav

Admin