ಮನೆಯಲ್ಲೇ ನಕಲಿ ನೋಟು ತಯಾರಿಸುತ್ತಿದ್ದವನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ನ.24- ಮನೆಯಲ್ಲೇ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಜಾಲವನ್ನು ಬೇಸಿರುವ ಮುಂಬೈನ ಅಪರಾಧ ವಿಭಾಗದ ಪೊಲೀಸರು, ವ್ಯಕ್ತಿಯೊಬ್ಬನನ್ನು ಬಂಧಿಸಿ ಅಪಾರ ಪ್ರಮಾಣದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಮುಂಬೈನ ಫಿಡೋನಯ್ ಪ್ರದೇಶದಲ್ಲಿರುವ ಶಬೀರ್ ಹಸನ್ ಖರ್ರೇಷಿ(47) ಬಂಧಿತ ಆರೋಪಿ.

ಈತ ಮನೆಯಲ್ಲೇ ಮುದ್ರಣ ಸಾಮಾಗ್ರಿಗಳನ್ನು ಇಟ್ಟುಕೊಂಡು ನಕಲಿ ನೋಟುಗಳನ್ನು ಮುದ್ರಣ ಮಾಡುತ್ತಿದ್ದನು ಮತ್ತು ಅವುಗಳನ್ನು ಮುಂಬೈನ ವಿವಿಧ ಮಾರ್ಕೆಟ್‍ಗಳಿಗೆ ಚಲಾವಣೆ ಮಾಡುತ್ತಿದ್ದ ಎಂದು ಫಿಡೋನಯ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಬಂತನಿಂದ 2000 ರೂ. ಮುಖಬೆಲೆಯ 53 ನಕಲಿ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯ ಮನೆಯಲ್ಲಿದ್ದ ಕಂಪ್ಯೂಟರ್‍ಗಳು, ಪ್ರಿಂಟರ್ ಹಾಗೂ ನಕಲಿ ನೋಟುಗಳ ತಯಾರಿಕೆಗೆ ಬಳಸುತ್ತಿದ್ದ ಇತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನಿಗೆ ಸಹಕಾರ ನೀಡಿದ ಇತರರ ಬಗ್ಗೆಗೂ ಮಾಹಿತಿ ಕಲೆ ಹಾಕಲಾಗುತ್ತಿದೆ.

Facebook Comments