ಜೈಲಿನ ಆವರಣದೊಳಗೆ ಖೈದಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.16- ವಿಚಾರಣಾಧೀನ ಖೈದಿಯೊಬ್ಬ ಪರಪ್ಪನ ಅಗ್ರಹಾರ ಜೈಲಿನ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅನಿಲ್‍ರಾಜ್(55) ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರಣಾಧೀನ ಖೈದಿ.

ಪರಪ್ಪನ ಅಗ್ರಹಾರ ಕಾರಗೃಹದ ಆವರಣದಲ್ಲಿ ದೇವಸ್ಥಾನವಿದ್ದು, ನಿನ್ನೆ ಸಂಜೆ ಅನಿಲ್ ರಾಜ್ ದೇವಸ್ಥಾನದ ಕಂಬಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ ಎಂದು ಡಿಸಿಪಿ ಇಶಾಪಂಥ್ ಈ ಸಂಜೆಗೆ ತಿಳಿಸಿದ್ದಾರೆ.

Facebook Comments