ಕೊರೋನಾ ಎಫೆಕ್ಟ್ : ಮಧ್ಯಂತರ ಜಾಮೀನಿನ ಮೇಲೆ 11 ಕೈದಿಗಳಿಗೆ ಬಿಡುಗಡೆ ಭಾಗ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ: ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಒಳಗಾದವರು ಮತ್ತು ಇಷ್ಟೇ ಅವಧಿಗೆ ಶಿಕ್ಷೆಗೆ ಒಳಗಾಗುವ ಅಪರಾಧ ಪ್ರಕರಣ ಹೊಂದಿದ್ದವರ 11 ಜನ ಕೈದಿಗಳನ್ನು ಇಲ್ಲಿನ ಉಪ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ.

ಕೊರೊನೊ ಸೋಂಕು ವ್ಯಾಪಕವಾಗಿ ಹರಡುವ ಆತಂಕವಿರುವ ಕಾರಣ ಕಾರಾಗೃಹದಲ್ಲಿರುವ ಕೈದಿಗಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಏಳು ವರ್ಷಗಳಿಗಿಂತ ಕಡಿಮೆ ಶಿಕ್ಷೆ ಎದುರಿಸುತ್ತಿರುವ ಕೈದಿಗಳ ಪಟ್ಟಿ ಸಿದ್ಧಪಡಿಸುವಂತೆ ಎಲ್ಲ ಜೈಲುಗಳ ಮುಖ್ಯಸ್ಥರಿಗೆ ಮೇಲಧಿಕಾರಿಗಳು ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಇಲ್ಲಿನ ಉಪ ಕಾರಾಗೃಹದ ಅಧೀಕ್ಷಕ ಅಶೋಕ ಭಜಂತ್ರಿ ಅವರು 34 ಜನ ಕೈದಿಗಳ ಪಟ್ಟಿ ಕಳುಹಿಸಿದ್ದರು. ಇದರಲ್ಲಿ 11 ಕೈದಿಗಳ ಬಿಡುಗಡೆಗೆ ಮೇಲಧಿಕಾರಿಗಳು ಸಮ್ಮತಿ ಸೂಚಿಸಿದ್ದಾರೆ. ‘ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಒಳಗಾದ ಇನ್ನಷ್ಟು ಕೈದಿಗಳ ಪಟ್ಟಿಯನ್ನು ಮತ್ತೆ ಮೇಲಧಿಕಾರಿಗಳಿಗೆ ಕಳುಹಿಸಲಾಗುವುದು.

ಅವರ ಅನುಮತಿ ಸಿಕ್ಕ ಬಳಿಕ ಮತ್ತಷ್ಟು ಕೈದಿಗಳನ್ನು ಬಿಡುಗಡೆ ಮಾಡಲಾಗುವುದು. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆ. ಕೈದಿಗಳನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತಿದೆ’ ಎಂದು ಭಜಂತ್ರಿ ತಿಳಿಸಿದ್ದಾರೆ.

# ಲಾಕ್ ಡೌನ್ ಜನರು ಡೋಂಟ್ ಕೇರ್ :
ಲಾಕ್ ಡೌನ್ ಆದೇಶಕ್ಕೆ ವಾಣಿಜ್ಯ ನಗರಿ‌ ಜನರು ಡೋಂಟ್ ಕೇರ್ ಎನ್ನುತ್ತಿದ್ದಾರೆ.‌ ನಿಷೇಧದ ನಡುವೆಯೂ ಜನರ ಓಡಾಟ ಮತ್ತೆ ಮುಂದುವರೆದಿದೆ.‌ ಇಷ್ಟು ದಿನ ತರಕಾರಿ ಮಾರುಕಟ್ಟೆಗೆ ಖರೀದಿಗೆ ಮಾತ್ರ ಮುಗಿ ಬಿಳುತ್ತಿದ್ದ ಜನರು ಇಂದು ನಗರದ ಚೆನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ.

ಬೆಳಿಗ್ಗೆಯಿಂದಲೇ ರಸ್ತೆಗೆ ಎಂಟ್ರಿ ಕೊಟ್ಟ ಖಾಸಗಿ ವಾಹನ ಸೇರಿದಂತೆ ಕಾರು, ಬೈಕ್ ಸವಾರರು ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ.‌ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಸಿಬ್ಬಂದಿ ಇಲ್ಲದ ಕಾರಣ ಸವಾರರ ಸಂಖ್ಯೆ ಹೆಚ್ಚಿದೆ.‌

# 22 ದಲ್ಲಾಳಿಗಳ ಮೇಲೆ ಪ್ರಕರಣ :
ಹುಬ್ಬಳ್ಳಿಏ,1- ನಮ್ಮ ಜನರಿಗೆ ಯಾವಾಗ ಬುದ್ದಿ ಬರುತ್ತದೆಯೋ ಗೊತ್ತಿಲ್ಲ. ದೇಶಕ್ಕೆ ದೇಶವೇ ಕೊರೋನಾ ವೈರಸ್ ಭೀತಿ ಹಿನ್ನಲೆಯಲ್ಲಿ ಲಾಕ್ ಡೌನ್ ಆಗಿದ್ದು,ಆರೋಗ್ಯದ ಹಿತದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೇಳಲಾಗುತ್ತಿದೆ. ಆದರೇ ಇಂದು ನಡೆದ ಅಮರಗೋಳ ಎಪಿಎಂಸಿ ಮಾರುಕಟ್ಟೆಯಲ್ಲಿ ಜನರು ಯಾವುದೇ ಸಮಾಜಿಕ ಅಂತರ ಕಾಯ್ದುಕೊಳ್ಳದೆ ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿದ್ದಾರೆ.

ಹೌದು ಅಮರಗೋಳದ ಎಪಿಎಂಸಿಯಲ್ಲಿ ಅಗತ್ಯ ವಸ್ತುಗಳನ್ನು ಮಾರಾಟ ಮಾಡಲು ಹಾಗೂ ಖರೀದಿಸಲು ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಖರೀದಿಗೆ ಮುಗಿಬಿದ್ದರು.ಇನ್ನೂ ನಿನ್ನೆಯಷ್ಟೇ ನಿಯಮ ಉಲ್ಲಂಘನೆ ಹಿನ್ನಲೆಯನ್ನು 22 ಜನ ದಲ್ಲಾಳಿಗಳ ಮೇಲೆ ಪ್ರಕರಣ ದಾಖಲಾಗಿದೆ.ಆದರೂ ಕೂಡ ಯಾವುದೇ ನಿಯಮ ಪಾಲನೆಯನ್ನು ಮಾಡದೇ ಸಾರ್ವಜನಿಕರು ಖರೀದಿಗೆ ಮುಗಿಬಿದ್ದಿದ್ದಾರೆ.

Facebook Comments

Sri Raghav

Admin