ಮಹಾರಾಷ್ಟ್ರದಲ್ಲಿ 596 ಖೈದಿಗಳಿಗೆ ಕೊರೊನಾ

ಈ ಸುದ್ದಿಯನ್ನು ಶೇರ್ ಮಾಡಿ

ಮಹಾರಾಷ್ಟ್ರ, ಜು. 10- ಕೊರೊನಾ ಮಹಾಮಾರಿಯು ದಿನದಿಂದ ದಿನಕ್ಕೆ ತನ್ನ ಕದಂಬಬಾಹುವನ್ನು ಚಾಚಿದ್ದು ಸೋಂಕಿತರ ಜೊತೆಗೆ ಮರಣವನ್ನಪ್ಪುವವರ ಸಂಖ್ಯೆಯೂ ಏರಿಕೆಯಾಗುತ್ತಿದ್ದು ದೇಶವನ್ನು ಆತಂಕಕ್ಕೆ ದೂಡಿದೆ.

ವಯಸ್ಸಿನ ಅಂತರವಿಲ್ಲದೆ ತನ್ನ ಮೃತ್ಯುಕೂಪಕ್ಕೆ ಕೊರೊನಾ ಸೆಳೆದುಕೊಳ್ಳುತ್ತಿದ್ದು ದೇಶದಲ್ಲೇ ಅತಿ ಹೆಚ್ಚು ಕೊರೊನಾ ಪೀಡಿತರಿರುವ ಮಹಾರಾಷ್ಟ್ರದಲ್ಲಿ 596 ಖೈದಿಗಳಿಗೆ ಸೋಂಕು ತಗುಲಿರುವುದು ಆತಂಕಕ್ಕೀಡು ಮಾಡಿದೆ.

ನಾಗಪುರ ಜೈಲ್ ಒಂದರಲ್ಲೇ 219 ಕೈದಿಗಳಿಗೆ ಸೋಂಕು ತಗುಲಿದ್ದು, 167 ಜೈಲು ಸಿಬ್ಬಂದಿಗಳಿಗೂ ಸೋಂಕು ತಗುಲಿರುವುದು ದೃಢಪಟ್ಟಿದ್ದು ಜೈಲು ಸಿಬ್ಬಂದಿಗಳ ಹಾಗೂ ಮಹಾರಾಷ್ಟ್ರ ಸರ್ಕಾರದ ನಿದ್ದೆಗೆಡಿಸಿದೆ.

Facebook Comments