ತುಮಕೂರು ಬಳಿ ನಡು ರಸ್ತೆಯಲ್ಲೇ ಧಗಧಗಿಸಿದ ಖಾಸಗಿ ಬಸ್..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಸೆ.14-ಖಾಸಗಿ ಸಂಸ್ಥೆಗೆ ಸೇರಿದ ಸ್ಲೀಪರ್‍ಕೋಚ್ ಬಸ್‍ನಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಪರಿಣಾಮ ಇಬ್ಬರು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದ್ದು 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ.

ಬೆಂಕಿ ದುರಂತದಲ್ಲಿ ಗಂಭೀರ ಗಾಯಗೊಂಡಿರುವ ಗುಲ್ಬರ್ಗ ನಿವಾಸಿ ನೀಲಮ್ಮ ಹಿರೇಮಠ(55) ಹಾಗೂ ಬಸ್ ಚಾಲಕ(ಹೆಸರು ತಿಳಿದುಬಂದಿಲ್ಲ)ನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಣ್ಣಪುಟ್ಟ ಗಾಯಗೊಂಡಿರುವ ಯಾದಗಿರಿ ಹುಣಸಗಿಯ ನಿವಾಸಿ ಪ್ರಸಾದ್(31), ಬಿಜಾಪುರ ಜಿಲ್ಲೆಯ ತಾಳಿಕೋಟೆ ನಿವಾಸಿ ತೌಸೀಫ್(21), ಮೆಹಬೂಬ್ ಪಾಷ(25), ಶಬ್ಬೀರ(27) ಮತ್ತಿತರರಿಗೆ ಜಿಲ್ಲಾಸ್ಪತ್ರೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಬಿಜಾಪುರದಿಂದ ಬೆಂಗಳೂರಿಗೆ ಬರುತ್ತಿದ್ದ ರಾಯಲ್ ಟ್ರಾನ್ಸ್‍ ಪೋರ್ಟ್ ಕಂಪನಿಗೆ ಸೇರಿದ ಸ್ಲೀಪರ್‍ಕೋಚ್ ಬಸ್‍ನಲ್ಲಿ 30ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಈ ಬಸ್ ರಾಷ್ಟ್ರೀಯ ಹೆದ್ದಾರಿ 48ರ ತುಮಕೂರಿನ ಕೋರಾ ಬಳಿ ಇಂಜಿನ್‍ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಬಸ್‍ನಲ್ಲಿದ್ದ ಪ್ರಯಾಣಿಕರು ಸುಟ್ಟ ವಾಸನೆ ಬರುತ್ತಿದೆ ಎಂದು ಚಾಲಕರ ಗಮನಕ್ಕೆ ತಂದಿದ್ದಾರೆ.ಆದರೆ ಚಾಲಕ ಉದಾಸೀನ ತೋರಿ ಏನೂ ಆಗಿಲ್ಲವೆಂದು ಬಸ್‍ನ್ನು ಚಾಲನೆ ಮಾಡಿಕೊಂಡು ಕೋರಾದಿಂದ ಸುಮಾರು 12 ಕಿ.ಮೀ ದೂರ ಬಂದಾಗ ಮುಂಜಾನೆ 4.30ರ ಸಮಯದಲ್ಲಿ ಇಂಜಿನ್‍ನಲ್ಲಿ ದಟ್ಟ ಹೊಗೆ ಆವರಿಸಿ ಬೆಂಕಿ ಹೊತ್ತಿಕೊಂಡಿದೆ.

ತಕ್ಷಣ ಚಾಲಕ ಬಸ್‍ನ್ನು ರಸ್ತೆಬದಿ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗೆ ಇಳಿಯುವಂತೆ ಹೇಳುವಷ್ಟರಲ್ಲಿ ಬೆಂಕಿ ಪೂರ್ತಿ ಬಸ್‍ನ್ನು ಆವರಿಸಿಕೊಂಡಿದೆ. ಹಲವು ಪ್ರಯಾಣಿಕರು ಬಸ್‍ನ ಗಾಜುಗಳನ್ನು ಒಡೆದು ಧುಮುಕಿದರೆ, ಕೆಲವರು ಧುಮುಕಲು ಸಾಧ್ಯವಾಗದೆ ಇಳಿಯುವಾಗ ಬೆಂಕಿ ತಗುಲಿ ಗಾಯಗೊಂಡಿದ್ದಾರೆ. ಬಸ್‍ನಲ್ಲಿದ್ದ ಪ್ರಯಾಣಿಕರು ನಮ್ಮನ್ನು ಕಾಪಾಡಿ ಎಂದು ಚೀರುತ್ತಿದ್ದಾಗ ಸ್ಥಳೀಯ ನಿವಾಸಿಗಳು ಕೇಳಿಸಿಕೊಂಡು ತಕ್ಷಣ ಮನೆಯಿಂದ ಹೊರಗೆ ಓಡಿಬಂದು ಪ್ರಯಾಣಿಕರನ್ನು ರಕ್ಷಿಸಿ ಅವರಿಗೆ ಕುಡಿಯಲು ನೀರು ನೀಡಿ ಮಾನವೀಯತೆ ಮರೆದಿದ್ದಾರೆ.

ನೋಡ ನೋಡುತ್ತಿದ್ದಂತೆ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಸುದ್ದಿ ತಿಳಿದ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಮಧುಸೂದನ್, ಸಬ್‍ಇನ್‍ಸ್ಪೆಕ್ಟರ್ ಲಕ್ಷ್ಮಯ್ಯ, ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲು ನೆರವಾದರು.

# ತಪ್ಪಿದ ಭಾರೀ ಅನಾಹುತ:
ಮಾರ್ಗಮಧ್ಯೆ ಬಸ್‍ನಲ್ಲಿ ಸುಟ್ಟ ವಾಸನೆ ಬರುತ್ತಿದ್ದರಿಂದ ನಿದ್ರೆಯಲ್ಲಿದ್ದವರೆಲ್ಲ ಎದ್ದಿದ್ದರು. ಈ ಕಾರಣದಿಂದಾಗಿ ಬಸ್‍ನಲ್ಲಿ ಬೆಂಕಿ ಆವರಿಸುತ್ತಿದ್ದಂತೆ ಸಮಯ ಪ್ರಜ್ಞೆ ಮೆರೆದು ಹೊರಗೆ ಬರುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದು ವೇಳೆ ಪ್ರಯಾಣಿಕರು ನಿದ್ರೆಗೆ ಜಾರಿದ್ದರೆ ಹೆಚ್ಚಿನ ಅನಾಹುತವಾಗುತ್ತಿತ್ತು ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.

# ಇಬ್ಬರ ಸ್ಥಿತಿ ಗಂಭೀರ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ರವಾನೆ
ಗುಲ್ಬರ್ಗಾದ ನಿವಾಸಿಯಾದ ನೀಲಮ್ಮ ಹಿರೇಮಠ (55) ಹಾಗೂ ಬಸ್ಸಿನ ಚಾಲಕ ಹೆಸರು ತಿಳಿದು ಬಂದಿಲ್ಲ ಈ ಇಬ್ಬರು ಸುಟ್ಟ ಗಾಯಗಳಿಂದ ಒದ್ದಾಡುತ್ತಿದ್ದು ಇವರನ್ನು ಪೊಲೀಸರು ಬೆಂಗಳೂರಿಗೆ ರವಾನಿಸಿದ್ದಾರೆ ಇಬ್ಬರ ಸ್ಥಿತಿಯೂ ಗಂಭೀರವಾಗಿದೆ .

ಬಸ್ಸಿಗೆ ಬೆಂಕಿ ತಗುಲಿದ ಪರಿಣಾಮ ವ್ಯಾಪಕವಾಗಿ ಬಸ್ಸನ್ನ ಆವರಿಸಿದ ಬೆಂಕಿ ತಕ್ಷಣವೇ ರಸ್ತೆ ಬದಿಗೆ ನಿಲ್ಲಿಸಿದ್ದ ಬಸ್ಸಿನ ಚಾಲಕ ಬಸ್ಸಿನಲ್ಲಿದ್ದ ಪ್ರಯಾಣಿಕರು ಕಿರುಚಾಡಿ ಕೊಂಡು ಅಯ್ಯೋ ಅಯ್ಯೋ ನಮನ ಕಾಪಾಡಿ ಕಾಪಾಡಿ ಎಂದು ಬಸ್ಸಿನ ಗಾಜುಗಳನ್ನು ಹೊಡೆದು ಹೊರಗೆ ದ್ದುಮುಕ್ಕುತ್ತಿದ್ದರು.

ಚೀರಾಟವನ್ನು ಅಲ್ಲಿನ ನಿವಾಸಿಗಳು ಕೇಳಿಸಿಕೊಂಡು ತಕ್ಷಣವೇ ಇದ್ದು ಹೊರಗೋಡಿ ಬಂದು ಪ್ರಯಾಣಿಕರನ್ನು ರಕ್ಷಿಸಲು ಇಲ್ಲಿನ ನಿವಾಸಿಗಳು ಮುಂದಾದರು .ಅಷ್ಟರಲ್ಲಿ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಮಧುಸೂದನ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಲಕ್ಷ್ಮಯ್ಯ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿಕೊಂಡು ಗಾಯಗೊಂಡಿದ್ದವರನ್ನು ತಕ್ಷಣವೇ ಆಂಬುಲೆನ್ಸ್ಗಳಲ್ಲಿ ತುಮಕೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ರವಾನಿಸಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಕೊಡಿಸಲು ಮುಂದಾದರು .

# ಮಾನವೀಯತೆಯಿಂದ ಮೆರೆದ ತುಮಕೂರು ಗ್ರಾಮಾಂತರ ಪೊಲೀಸರು :
ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಗಾಯಗೊಂಡವರು ಕುಡಿಯಲು ನೀರು ನೀರು ಎಂದು ಅಂಗಲಾಚುತ್ತಿದ್ದರು ಆಗ ಸ್ಥಳೀಯರ ನೆರವಿನೊಂದಿಗೆ ನೀರನ್ನು ತರಿಸಿ ಕತ್ತರಿಸಿ ಕುಡಿಯಲು ನೀರು ಕೊಟ್ಟಿದ್ದಲ್ಲದೆ ತಮ್ಮ ವಾಹನಗಳಲ್ಲಿಯೇ ಕೆಲವರನ್ನು ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದ ಪ್ರಸಂಗ ಇಂದು ಬೆಳಗಿನ ಜಾವ ನಡೆದಿದೆ.  ಬಿಜಾಪುರದಿಂದ ಬೆಂಗಳೂರಿಗೆ ತೆರಳುತಿದ್ದ ಖಾಸಗಿ ಬಸ್ ಮೂವತ್ತಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಪ್ರಯಾಣಿಕರು ಕೋರದ ಬಳಿಗೆ ಬಸ್ಸಿನಲ್ಲಿ ಏನೋ ದೋಷವಿರಬಹುದು ಚೆಕ್ ಮಾಡಿಕೊಳ್ಳಿ ಎಂದು ಚಾಲಕನಿಗೆ ಸಲಹೆ ನೀಡಿದ್ದರು .ಆದರೆ ಚಾಲಕನ ಸಮಯ ಪ್ರಜ್ಞೆ ಇಲ್ಲದಿರುವುದೇ ಈ ದುರಂತಕ್ಕೆ ಮೂಲ ಕಾರಣ ಎಂದು ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಪೀಣ್ಯದ ಬಳಿ ಹಾಗೂ ಆಂಧ್ರಪ್ರದೇಶ ಹುಬ್ಬಳ್ಳಿ ಧಾರವಾಡ ಸೇರಿದಂತೆ ಇತರ ಕಡೆ ಸರಕಾರಿ ಬಸ್ ಹಾಗೂ ಖಾಸಗಿ ಬಸ್ಸುಗಳಿಗೆ ಎಸಿ ಗಳಲ್ಲಿ ಲೋಪದೋಷ ಕಂಡು ಬಂದು ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿಯ ಕೆನ್ನಾಲಿಗೆಗೆ ಬಸ್ಸುಗಳು ಆಹುತಿಯಾಗಿದ್ದವು ಈ ಮಾಹಿತಿಯಲ್ಲಿ ಹಲವಾರು ಪ್ರಯಾಣಿಕರು ದಾರುಣ ಸಾವನ್ನು ಅನುಭವಿಸಿದ್ದರು.

ಆ ಘಟನೆಗಳು ಮಾಸುವ ಬೆನ್ನಲ್ಲೇ ಈಗ ತುಮಕೂರಿನಲ್ಲಿ ಈ ಘಟನೆ ನಡೆದಿರುವುದು ರಾತ್ರಿ ವೇಳೆ ಖಾಸಗಿ ಐಷಾರಾಮಿ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಎಚ್ಚರಿಕೆಯಿಂದ ಪ್ರಯಾಣಿಸುವುದು ಸೂಕ್ತ ಎಂದು ಪ್ರಯಾಣಿಕರು ಅಭಿಮತ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಇಲ್ಲಿನ ಸಬ್ ಇನ್ಸ್ ಪೆಕ್ಟರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ ಕೋನಾ ವಂಶಿಕೃಷ್ಣ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಉದ್ದೇಶ ತುಮಕೂರು ನಗರದ ಡಿವೈಎಸ್ಪಿ ತಿಪ್ಪೇಸ್ವಾಮಿ ಹಾಗೂ ವೃತ್ತ ನಿರೀಕ್ಷಕ ಮಧುಸೂದನ್ ಇವರುಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ

Facebook Comments

Sri Raghav

Admin