ಖಾಸಗಿ ಬಸ್‍ಗಳ ಸೇವೆ ಸಮರ್ಪಕವಾಗಿದೆ : ಭೈರವ ಸಿದ್ದರಾಮು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.7- ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ಕೊಟ್ಟ ಹಿನ್ನೆಲೆಯಲ್ಲಿ ನಾವು ಖಾಸಗಿ ವಾಹನಗಳನ್ನು ಸಮರ್ಪಕವಾಗಿ ನಿಯೋಜಿಸಿದ್ದೇವೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಭೈರವ ಸಿದ್ದರಾಮು ಹೇಳಿದ್ದಾರೆ. ಸದ್ಯ 25 ಸಾವಿರದಿಂದ 35 ಸಾವಿರ ಖಾಸಗಿ ವಾಹನಗಳ ಸೇವೆ ಒದಗಿಸಿದ್ದೇವೆ. ಸಮರ್ಪಕವಾಗಿ ಓಡಾಟ ನಡೆಸಲು ವ್ಯವಸ್ಥೆ ಮಾಡಿದ್ದೇವೆ. ಮಾಧ್ಯಮಗಳಲ್ಲಿ ಸರ್ಕಾರಿ ಬಸ್‍ಗಳು ಇಲ್ಲ ಎಂಬ ಸುದ್ದಿ ಪ್ರಸಾರವಾದರೂ ಪ್ರಯಾಣಿಕರು ಖಾಸಗಿ ಬಸ್‍ಗಳಿಗೆ ಬರುತ್ತಿಲ್ಲ. ಸಾರಿಗೆ ಇಲಾಖೆಯಿಂದ ರೂಟ್‍ಮ್ಯಾಪ್ ಕೊಟ್ಟಿದ್ದಾರೆ. ಆದರೆ, ಅಲ್ಲಿ ನಮಗೆ ಪ್ರಯಾಣಿಕರು ಸಿಗುತ್ತಿಲ್ಲ ಎಂದರು.

ಸರ್ಕಾರ ನಿಗದಿ ಮಾಡಿರುವ ಹಣವನ್ನು ತೆಗೆದುಕೊಳ್ಳುತ್ತಿಲ್ಲ. ಏಕೆಂದರೆ ಇಂದು ನಮಗೆ ಪ್ರಯಾಣಿಕರು ಹೆಚ್ಚಾಗಿ ಬರುತ್ತಿಲ್ಲ. 10 ರಿಂದ 20ರೂ. ಹಣವನ್ನು ಹೆಚ್ಚಾಗಿ ಪಡೆಯುತ್ತಿದ್ದೇವೆ ಅಷ್ಟೆ. ಇಂದು 7 ರಿಂದ 8 ಸಾವಿರದಷ್ಟು ಖಾಸಗಿ ವಾಹನಗಳನ್ನು ಸೇವೆಗೆ ಒದಗಿಸಲಾಗಿದೆ. ಎಲ್ಲ ಜಿಲ್ಲೆಗಳಲ್ಲೂ ಖಾಸಗಿ ವಾಹನಗಳನ್ನು ಬಿಟ್ಟಿದ್ದೇವೆ. ಮುಷ್ಕರ ಮುಗಿಯುವವರೆಗೂ ಖಾಸಗಿ ವಾಹನಗಳ ಸೇವೆ ಒದಗಿಸಲು ಸಿದ್ಧರಿದ್ದೇವೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Facebook Comments