ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರ ಪಟ್ಟಿ ಕಡ್ಡಾಯ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ನ.12- ನಗರ ಸೇರಿದಂತೆ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ಚಿಕಿತ್ಸಾ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿಂದು ಮಾತ ನಾಡಿದ ಅವರು, ಇತ್ತೀಚಿನ ದಿನ ಗಳಲ್ಲಿ ಖಾಸಗಿಯವರು ಹೆಚ್ಚು ಹಣ ಪಡೆಯುತ್ತಿದ್ದಾರೆಂದು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ.

ಹಾಗಾಗಿ ತಕ್ಷಣದಿಂದಲೇ ದರ ಪಟ್ಟಿಯನ್ನು ಪ್ರತಿಯೊಂದು ಖಾಸಗಿ ಆಸ್ಪತ್ರೆಗಳವರು ಪ್ರದರ್ಶಿಸಲೇ ಬೇಕೆಂದು ಹೇಳಿದರು.ದರಪಟ್ಟಿ ಪ್ರದರ್ಶಿಸದಿರುವ ಖಾಸಗಿ ಆಸ್ಪತ್ರೆಗಳ ನೋಂದಣಿ ಯನ್ನು ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದರು. ಮೊದಲಿಗಿಂತಲೂ ಕೆಪಿಎಂಇ ಕಾಯ್ದೆಯನ್ನು ಬಿಗಿಗೊಳಿಸಲಾಗಿದೆ.

ಆಸ್ಪತ್ರೆಗೆ ಬರುವ ರೋಗಿಗಳಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗಬಾರದು. ಹೆಚ್ಚುವರಿ ಯಾಗಿ ಹಣ ಪಡೆಯಬಾರದು. ಈ ಹಿನ್ನೆಲೆಯಲ್ಲಿ ಪ್ರತಿ ಆಸ್ಪತ್ರೆಗಳು ದರಪಟ್ಟಿಯನ್ನು ಪ್ರದರ್ಶಿಸಲೇ ಬೇಕು ಎಂದು ಹೇಳಿದರು.

ಹೆಲ್ತ್‍ಕಾರ್ಡ್ ಯೋಜನೆಗೆ ಕ್ಯಾಂಪ್: ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್‍ಗಳನ್ನು ಜಿಲ್ಲೆಯ ಅಗತ್ಯವಿರುವ ಫಲಾನುಭವಿಗಳಿಗೆ ವಿತರಿಸಲು ಸದ್ಯದಲ್ಲೇ ಕ್ಯಾಂಪ್ ಆರಂಭಿಸಲಾಗುವುದು ಎಂದು ಇದೇ ವೇಳೆ ಡಾ.ವೆಂಕಟೇಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಈಗಾ ಗಲೇ ಖಾಸಗಿಯಾಗಿ 2,23,000 ಕಾರ್ಡ್‍ಗಳನ್ನು ವಿತರಿಸ ಲಾಗಿದೆ. ಸರ್ಕಾರದ ವತಿಯಿಂದ 35,944 ಕಾರ್ಡ್‍ಗಳನ್ನು ನೀಡಲಾಗಿದೆ ಎಂದು ಹೇಳಿದರು.

ಇನ್ನೂ ಹಲವಾರು ಫಲಾನುಭವಿ ಗಳಿಗೆ ಈ ಯೋಜನೆ ಯಡಿ ಕಾರ್ಡ್‍ಗಳನ್ನು ವಿತರಿಸಬೇಕಾಗಿ ರುವುದರಿಂದ ಕೂಡಲೇ ಕ್ಯಾಂಪ್‍ಗಳನ್ನು ಆಯೋಜಿಸಿ ಆ ಮೂಲಕ ಕಾರ್ಡ್ ಗಳನ್ನು ಕೊಡಲಾಗುವುದು ಎಂದು ತಿಳಿಸಿದರು.

Facebook Comments